ಆನೇಕಲ್:ಮಾರಕ ಖಾಯಿಲೆಯೊಂದು ಕಾಣಿಸಿಕೊಂಡು ಹಲವಾರು ರಾಸುಗಳು ಮೃತಪಟ್ಟಿರುವ ಘಟನೆ ಬೆಂಗಳೂರಿನ ಆನೇಕಲ್​ ಬಳಿ ನಡೆದಿದೆ.ಇದನ್ನೂ ಓದಿ:ಜಾಲತಾಣದಲ್ಲಿ ಅವಹೇಳನಕಾರಿ ಬರಹ: IPS​ ಅಧಿಕಾರಿ ಆಕಾಶ್​ ಶಂಕರ್ ವಿರುದ್ಧ ಪತ್ನಿಯಿಂದಲೇ ದೂರು​ಒಟೈಟೀಸ್ ಎಂಬ ಮಾರಕ ಖಾಯಿಲೆ ಜಾನುವಾರುಗಳಲ್ಲಿ ಹರಡಿದ್ದು, ಇದರಿಂದಾಗಿ ರೈತರು ಚಿಂತೆಗೊಳಗಾಗಿದ್ದಾರೆ. ಈ ಹಿಂದೆ ತಮಿಳುನಾಡು ಭಾಗದಲ್ಲಿ ಮಾರಕವಾಗಿ ಹರಡಿದ್ದ ಈ ಖಾಯಿಲೆ ಬಂದರೆ ಹಸು ಬದುಕುಳಿಯುವ ಸಾಧ್ಯತೆ ಕಡಿಮೆಯಿದೆ ಎಂದು ಹೇಳಲಾಗಿದೆ.ಈ ಖಾಯಿಲೆಗೆ ಔಷಧ ಇಲ್ಲದೇ ರೈತರ ಪರದಾಡುತ್ತಿದ್ದು, ಕಳೆದ ವರ್ಷ ಎಮ್.ಸಿ.ಎಫ್​ (Malignant Catarrhval Favor) ಎಂಬುದು ವೈರಲ್ ಖಾಯಿಲೆ ಎಂದು ವಿಜ್ಞಾನಿಗಳು ಹೇಳಿದ್ದರು. ಈ ಜ್ವರವು ವಿರಳವಾದ ರೋಗವಾಗಿದ್ದು, ಒಂದೇ ಜಾನುವಾರುವನ್ನು ಬಾಧಿಸುತ್ತದೆ ಆದರೆ ಕೆಲವೊಮ್ಮೆ ಜಾನುವಾರುಗಳ ಗುಂಪಿನಲ್ಲಿ ತೀವ್ರವಾಗಿ ಬಾಧಿಸುತ್ತದೆ. ಅಲ್ಲದೇ ಈ ರೋಗ ತಗುಲಿದ ನಂತರ ಪ್ರಾರಂಭದಲ್ಲಿ ಕಿವಿ ಸೋರಲು ಪ್ರಾರಂಭವಾಗಿ ಬಳಿಕ ತಲೆ‌ ನೋವು ಕಾಣಿಸಿಕೊಂಡು ಹಸು ಸೊರಗುತ್ತದೆ. ಅನಂತರ ರಾಸುಗಳ ಮೂಗು,ಬಾಯಿ,ಕಿವಿ ಸೋರಿಕೆಯಾಗುವುದು ಈ ರೋಗದ ಲಕ್ಷಣಗಳಾಗಿವೆ.ಈ ಕಾಯಿಲೆಯ ಮುಂಜಾಗ್ರತಾ ಕ್ರಮಗಳು ಇಂತಿವೆ:ಖಾಯಿಲೆ ಕಾಣಿಸಿಕೊಂಡಾಗ ರಾಸುಗಳನ್ನು ಪ್ರತ್ಯೇಕವಾಗಿ ಕಟ್ಟಿಹಾಕಬೇಕು.ಪಶು ವೈದ್ಯರಿಂದ ನಿರಂತರ ಚಿಕಿತ್ಸೆ ಕೊಡಿಸಬೇಕು.ಆಂಟಿ ಬಯೋಟೆಕ್, ಐವರ್ ಮೆಕ್ಟೀನ್ ಮುಂತಾದ ಇಂಜೆಕ್ಷನ್​ಗಳನ್ನು ಅಗತ್ಯವಿರುವಾಗ ಚುಚ್ಚಿಸಬೇಕು.ಖಾಯಿಲೆ ಇರುವಂತಹ ಹಸು ತಿಂದ ಆಹಾರ ಪದಾರ್ಥವನ್ನು, ಆರೋಗ್ಯದಿಂದಿರುವ ಹಸುವಿಗೆ ನೀಡಬಾರದು.ಈ ಮಾರಕ ಕಾಯಿಲೆಯು ಆನೇಕಲ್​ ತಾಲೂಕಿನ ಬಹುತೇಕ ಹಳ್ಳಿಗಳಿಗೆ ಹಬ್ಬಿದ್ದು, ಇಂಡ್ಲವಾಡಿ, ಸುರಗಜಕ್ಕನಹಳ್ಳಿ, ವಣಕನಹಳ್ಳಿ, ದಿನ್ನೂರು ಸೇರಿ ಹಲವೆಡೆ ರಾಸುಗಳು ಮೃತಪಟ್ಟಿವೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 4 =
Remember me
