ಗಜೇಂದ್ರ ಬಾಬುವಾಸ್ತುಸೂತ್ರಗಳನ್ವಯ ವಿಜಯನಗರ ಸಾಮ್ರಾಜ್ಯದ ಅಮರನಾಯಕ ಕೆಂಪೇಗೌಡರು ನಿರ್ಮಾಣ ಮಾಡಿದ ನಗರವೇ ನಮ್ಮ ಬೆಂಗಳೂರು. ಬೆಂಗಳೂರು ನಿರ್ಮಾಣ ಕಾಲದಲ್ಲಿ ಅವರು ವಾಸ್ತು ವಿಜ್ಞಾನ ಸೂತ್ರಗಳನ್ನು ಅಳವಡಿಸಿದ್ದರು ಎಂಬುದು ಸಂಶೋಧನಾ ರೀತಿಯಿಂದ ತಿಳಿದು ಬಂದಿರುತ್ತದೆ. ಕೆಂಪೇಗೌಡರು ನಮ್ಮ ಬೆಂಗಳೂರು ನಗರಕ್ಕೆ ಜ್ಯೋತಿಷ್ಯಾನುಸಾರ ಸೂರ್ಯನು ತನ್ನ ಪಥ ಬದಲಾಯಿಸುವ ದಿನ ಉತ್ತರಾಯಣ ದಿನದಂದು (1534ರ ಜನವರಿ 14) ಶಿಲಾನ್ಯಾಸ ಕೈಗೊಂಡರು. ಮುಂದೆ ಇವರು ಮಾಡುವ ಎಲ್ಲ ಬೃಹತ್ ಕಾರ್ಯಕ್ರಮಗಳಿಗೆ ಉತ್ತರಾಯಣ ಪುಣ್ಯಕಾಲದ ಮಕರ ಸಂಕ್ರಾಂತಿಯನ್ನೆ ಆಯ್ಕೆ ಮಾಡಿಕೊಂಡಿದ್ದರು.
ಕೆಂಪೇಗೌಡರು ಬೆಂಗಳೂರು ನಗರವನ್ನು ವಾಸ್ತು ವಿಜ್ಞಾನ ರೀತ್ಯ ನಿರ್ಮಾಣ ಮಾಡಿರುವುದು ಹಾಗೂ ಪಂಚತತ್ವಗಳ ಆಧಾರದ ಮೇಲೆ ಪಂಚ ಗೋಪುರಗಳನ್ನು ಪ್ರತಿಷ್ಠಾಪನೆ ಮಾಡಿರುವುದು ವಾಸ್ತು ಸಂಶೋಧನೆಗಳಿಂದ ತಿಳಿದು ಬಂದಿರುತ್ತದೆ. ಒಂದು ನಗರವನ್ನು ವಾಸ್ತು ವಿಜ್ಞಾನ ರೀತಿ ನಿರ್ಮಾಣ ಮಾಡಲು ಆ ಸ್ಥಳದ ಭೂಪ್ರದೇಶ ಹಾಗೂ ಸ್ಥಳಾಕೃತಿ ಅಧ್ಯಯನ ನಡೆಸಬೇಕು. ನಂತರ ಈ ಪ್ರದೇಶದಲ್ಲಿ ಋಷಿಮೂಲ, ನದಿಮೂಲ ಹಾಗೂ ಋಕ್ಷಮೂಲಗಳ ಅಧ್ಯಯನ ನಡೆಸಬೇಕು. ನಂತರ ಸಮುದ್ರ ಮಟ್ಟಕ್ಕಿಂತ ಎಷ್ಟು ಎತ್ತರದಲ್ಲಿ ಎಂಬುದನ್ನು ಗಮನಿಸಬೇಕು.
ಕೆಂಪೇಗೌಡರು ಈ ಮೇಲಿನ ಸೂತ್ರದನ್ವಯ ಋಷಿ ಮೂಲ ಎಂದರೆ ಗವಿಗಂಗಾಧರೇಶ್ವರ ದೇವಾಲಯದ ತಪೋಋಷಿಗಳಾದ ಗೌತಮ ಮಹರ್ಷಿ, ಭಾರದ್ವಾಜ ಮುನಿಗಳು, ಮಾಂಡವ್ಯ ಋಷಿ ಕ್ಷೇತ್ರವಾದ ಹಲಸೂರು ಸೋಮೇಶ್ವರ ದೇವಾಲಯ, ದೊಮ್ಮಲೂರು ಚೊಕ್ಕನಾಥ ಸ್ವಾಮಿ ದೇವಾಲಯದ ತಪೋನಿರತರಾದ ಸಿದ್ದರು, ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿರುವ ಕೈಲಾಸಪಾಳ್ಯ (ಇಂದಿನ ಕಲಾಸಿಪಾಳ್ಯ)ದ ಬಳಿ ಇರುವ ಪುರಾತನವಾದ ಜಲಕಂಠೇಶ್ವರ ದೇವಾಲಯವನ್ನು ಕೇಂದ್ರಬಿಂದುವನ್ನಾಗಿರಿಸಿ ತಮ್ಮ ಕೋಟೆಯನ್ನು ಲಿಂಗಾಕಾರದಲ್ಲಿ ನಿರ್ವಿುಸಲು ಕೋಟೆಯಿಂದ ಉತ್ತರ-ಈಶಾನ್ಯ ಅಂದರೆ ಇವತ್ತಿನ ರಾಜ ಮಾರ್ಕೆಟ್ ಬಳಿ ಭೂಮಿಪೂಜೆ ನೆರವೇರಿಸಿದರು.
ಋಷಿಮೂಲ:ನಗರದ ಈಶಾನ್ಯದಲ್ಲಿ ಶ್ರೀ ಪರಶುರಾಮ ಸ್ಥಾಪಿಸಲ್ಪಟ್ಟು ಕೂಡುಮಲೈ ಗಣಪತಿ ಹಾಗೂ ಮೂಡಲಬಾಗಿಲು (ಇಂದಿನ ಮುಳಬಾಗಿಲು), ಪೂರ್ವದಲ್ಲಿ ಹಲಸೂರು- ಹಲಸೂರು ಪೂರ್ವ, ಉತ್ತರದಲ್ಲಿ ಮಾವು- ಉತ್ತರ ಈಶಾನ್ಯ ಹುಳಿಮಾವು-ಹೊರಮಾವು, ಆರೋಗ್ಯ ನೀಡುವಲ್ಲಿ ಉತ್ತಮ ಫಲದಾಯಕ ಮರಗಳನ್ನು ಪೂರ್ವ-ಈಶಾನ್ಯದಲ್ಲಿರುವುದರಿಂದ ಹಾಗೂ ಪೂರ್ವ-ಈಶಾನ್ಯದ ಮುಖಾಂತರ ದೇವಮೂಲೆಯಲ್ಲಿ ತಿರುಮಲ-ತಿರುಪತಿ ವೈಕುಂಠದ ಬಾಗಿಲು ತೆರೆದಿರುವುದರಿಂದ ಅಲ್ಲಿಯ ತರಂಗಗಳು ಬೆಂಗಳೂರನ್ನು ತಲುಪಿ ನಗರವನ್ನು ಆವರಿಸುವುದರಿಂದ, ನಗರವಾಸಿಗಳು ದೈವಬಲ ಹಾಗೂ ಸುಖ-ಶಾಂತಿಯಿಂದ ಜೀವನ ನಡೆಸಲು ಸಹಕಾರಿಯಾಗುವುದೆಂದು ನಿರೀಕ್ಷಿಸಿ ಕಟ್ಟಿದ ನಾಡೇ ಬೆಂಗಳೂರು.
ನದಿಮೂಲ:ಸುಮಾರು ಆರು ನದಿಗಳು ಬೆಂಗಳೂರಿನ ಸುತ್ತ-ಮುತ್ತ ಹರಿಯುತ್ತಿದ್ದು, ಅವುಗಳಲ್ಲಿ ಅರ್ಕಾವತಿ- ಉತ್ತರ-ವಾಯವ್ಯ, ದಕ್ಷಿಣ ಪಿನಾಕಿನಿ-ಉತ್ತರ-ವಾಯವ್ಯ, ದಕ್ಷಿಣ ಪಿನಾಕಿನಿ- ಉತ್ತರ-ಈಶಾನ್ಯ, ಬೆನ್ನಾರ್ ನದಿ-ಆಗ್ನೇಯ, ಕುಮುದಾವತಿ-ಪಶ್ಚಿಮ, ಸುವರ್ಣಮುಖಿ-ದಕ್ಷಿಣ, ವೃಷಭಾವತಿ-ಉತ್ತರದಿಂದ ದಕ್ಷಿಣ. ಹೀಗೆ ಈ ನದಿಗಳ ಪ್ರಾಮುಖ್ಯತೆ, ಧನಾತ್ಮಕ ಶಕ್ತಿಗಳು ಬೆಂಗಳೂರು ನಗರಕ್ಕೆ ನೈಸರ್ಗಿಕ ಕೊಡುಗೆಯಾದವು. ನದಿ ಹರಿಯುವ ಕಡೆ ವ್ಯವಸಾಯ, ಕೆರೆ, ಕೊತ್ತಲಗಳ ಇರುವ ಕಡೆ ತೋಟಗಾರಿಕೆ ಎಂಬ ವೈಜ್ಞಾನಿಕ ವಾಸ್ತು ಹಿನ್ನೆಲೆಯಲ್ಲಿ ಬೆಂಗಳೂರು ಸುತ್ತ ಸುಮಾರು 1000 ಕೆರೆಗಳನ್ನು ಗುರುತಿಸಿ ನಾಡಪ್ರಭುಗಳು ತೋಟಗಾರಿಕೆ, ವ್ಯವಸಾಯ ಅಭಿವೃದ್ಧಿಪಡಿಸಲು ಕಾರಣಿಭೂತರಾದರು. ವಾಸ್ತು ವಿಜ್ಞಾನದನ್ವಯ ಪಂಚಗೋಪುರಗಳನ್ನು ನಿರ್ವಿುಸಿದ ಹಿರಿಯ ಕೆಂಪೇಗೌಡರು ಕೋಟೆಯ ನೈರುತ್ಯ ದಿಕ್ಕಿನಲ್ಲಿ ದೈವ ಮಂಟಪ ನಿರ್ವಿುಸಿದರು.
ವಾಣಿಜ್ಯ ಮಂಟಪ – ಉತ್ತರ (ಬುಧ) ಉತ್ತರ- ವಾಯುವ್ಯ (ಚಂದ್ರ):ವಾಣಿಜ್ಯ ಮಂಟಪವನ್ನು ಯಲಹಂಕ ರಾಜಮಾರ್ಗದ ಎಡಪಾರ್ಶ್ವದಲ್ಲಿ (ಮೇಕ್ರಿ ಸರ್ಕಲ್ ಬಳಿ) ಪ್ರತಿಷ್ಠಾಪಿಸಿದ್ದಾರೆ. ಈ ಮಂಟಪವು ಮೂರು ಪ್ರಮುಖವಾದ ರಾಜಮಾರ್ಗಗಳನ್ನು ಸಂರ್ಪಸಿ, ವಾಸ್ತು ವಿಜ್ಞಾನ ರೀತ್ಯಾ ಉತ್ತರ-ಉತ್ತರವಾಯವ್ಯವು ವ್ಯಾಪಾರದ ವಹಿವಾಟಿಗೆ ಉತ್ತಮ ದಿಕ್ಕನ್ನು ಸೂಚಿಸುತ್ತದೆ. ಇಂದಿಗೂ ಈ ಗೋಪುರದ ಸುತ್ತ-ಮುತ್ತಲಿನ ಪ್ರದೇಶವು ವಾಣಿಜ್ಯ ಕೇಂದ್ರವಾಗಿದ್ದು, ವರ್ಲ್ಡ್ ಟ್ರೇಡ್ ಸೆಂಟರ್, ಟಾಟಾ ಇನ್ಸ್​ಟಿಟ್ಯೂಟ್, ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಸೈನ್ಸ್, ಪೀಣ್ಯ ಇಂಡಸ್ಟ್ರಿಯಲ್ ಭಾಗಗಳು, ಶ್ರೀಗಂಧದ ಸಾಬೂನು ಕಾರ್ಖಾನೆ, ಕಿಲೋಸ್ಕರ್ ಕಂಪನಿಗಳಿವೆ.
ಆರೋಗ್ಯ ಮಂಟಪ:ಪೂರ್ವ (ರವಿ)-ದಕ್ಷಿಣ (ಕುಜ)- ಆಗ್ನೇಯ (ಶುಕ್ರ): ಈ ಮಂಟಪವು ಈಗಿನ ಲಾಲ್​ಬಾಗ್ ಒಳಗಿನ ಬಂಡೆಯ ಮೇಲೆ ನಿರ್ವಿುಸಲಾಗಿದೆ. ಔಷಧಿಯ ಗುಣಗಳಿಂದ ಕೂಡಿದ ಮರಗಿಡಗಳಿಂದ ತುಂಬಿ ಹೋದ ಹಾಗೂ ಇಲ್ಲಿನ ಗುಹೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿದ್ದ ಪುರುಷರು ತಪೋನಿರತರಾಗಿ ಸಿದ್ದಿ ಪಡೆದು, ವಿವಿಧ ಗಿಡ-ಮೂಲಿಕೆಗಳಿಂದ ಔಷಧಗಳನ್ನು ತಯಾರಿಸಿ ಜನತೆಗೆ ರೋಗಮುಕ್ತರಾಗಲು ಔಷಧಗಳನ್ನು ನೀಡುತ್ತಿದ್ದರು.
ಔಷಧೀಯ ಗುಣವುಳ್ಳ ಬಂಡೆ:ದಕ್ಷಿಣ ಭಾರವಾಗಿರಬೇಕು ಎಂಬುದರ ವಾಸ್ತುಶಾಸ್ತ್ರದ ಸೂತ್ರದ ಅನುಸಾರ ಪ್ರಕೃತಿದತ್ತವಾದ ಲಾಲ್​ಬಾಗ್ ಒಳಗೆ ಇರುವ ಈ ಬಂಡೆಯು ಭೂಗರ್ಭಶಾಸ್ತ್ರಜ್ಞರ ಪ್ರಕಾರ 300 ಕೋಟಿ ವರ್ಷಗಳಷ್ಟು ಹಳೆಯದಾದ ಶಿಲಾರಚನೆಗಳೆಂದು ಗುರುತಿಸಲ್ಪಟ್ಟಿದೆ. ಬೆಳಗಿನ ಹೊತ್ತು ಈ ಬಂಡೆಯ ಮೇಲೆ ಕುಳಿತು ಸೂರ್ಯನ ಎಳೆಯ ಬಿಸಿಲು ಕಾದರೆ ವ್ಯಕ್ತಿಯ ಆರೋಗ್ಯ ವೃದ್ಧಿಸುತ್ತದೆ ಎಂದು ಸಿದ್ದರ ಮೂಲಕ ಕೆಂಪೇಗೌಡರಿಗೆ ವಿಷಯ ತಿಳಿದು ಆರೋಗ್ಯ ಮಂಟಪವನ್ನು ಲಾಲ್​ಬಾಗ್ ಬಂಡೆಯ ಮೇಲೆ ಪ್ರತಿಷ್ಠಾಪಿಸಿದರು. ವಾಸ್ತುಸೂತ್ರಗಳನ್ವಯ ಇಂದಿಗೂ ಕೋಟೆಯ ದಕ್ಷಿಣ ದಿಕ್ಕಿಗೆ ವಿಕ್ಟೋರಿಯಾ ಆಸ್ಪತ್ರೆ, ಮಿಂಟೊ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಜಯದೇವ ಆಸ್ಪತ್ರೆಗಳು, ರಾಜೀವ್ ಗಾಂಧಿ ಆಸ್ಪತ್ರೆ, ಸಂಜಯ ಗಾಂಧಿ ಆಸ್ಪತ್ರೆ, ನಿಮ್ಹಾನ್ಸ್ ಹಾಗೂ ಕಿದ್ವಾಯಿ ಆಸ್ಪತ್ರೆಗಳು ಹಾಗೂ ಇನ್ನೂ ಅನೇಕ ಆಸ್ಪತ್ರೆಗಳು ಈ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವುದು, ಕೆಂಪೇಗೌಡರ ವಾಸ್ತುವಿಜ್ಞಾನದ ದೂರದೃಷ್ಟಿಯೇ ಅಲ್ಲವೇ?
ನ್ಯಾಯ ಮಂಟಪ- ನೈರುತ್ಯ ದಿಕ್ಕು (ದಕ್ಷಿಣ-ಪೂರ್ವ ದಿಕ್ಕಿನ ಮಧ್ಯದಲ್ಲಿದೆ):ನ್ಯಾಯ ಮಂಟಪವನ್ನು ಕೆಂಪಾಂಬುದಿ ಕೆರೆಯ ದಡದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಗೋಪುರದ ರಕ್ಷಕ ದೈವ ಬಂಡಿಕಾಳಮ್ಮ ತಾಯಿ. ವಾಸ್ತು ನಿಯಮಾನುಸಾರ ಬೆಂಗಳೂರು ಕೋಟೆಯ ನೈರುತ್ಯ ದಿಕ್ಕಿನ ಅಂದರೆ ದಕ್ಷಿಣ-ಪೂರ್ವ ಮಧ್ಯದಲ್ಲಿದ್ದ ಕೆಂಪಾಂಬುದಿ ಕೆರೆಯ ದಡದ ಮೇಲೆ ನಿರ್ವಿುಸಿ ನೈರುತ್ಯ ದಿಕ್ಕಿನ ಅಧಿಪತಿ ರಾಹು ಅಂದರೆ ರಾಕ್ಷಸ ಅವನನ್ನು ನಿಯಂತ್ರಿಸಲು ಬಂಡಿಕಾಳಮ್ಮ ತಾಯಿ ಮತ್ತು ಪೂರ್ವಕ್ಕೆ ಸೂರ್ಯನ ಬೆಳಕು, ದಕ್ಷಿಣಕ್ಕೆ ಯಮಧರ್ಮರಾಜ, ಧರ್ಮಕ್ಕೆ ವಿರುದ್ಧವಾಗಿ ನಡೆಯುವವರನ್ನು ಶಿಕ್ಷೆಗೆ ಒಳಪಡಿಸುತ್ತಿರುವನು.
ಶಿಕ್ಷಾ ಮಂಟಪ:ಕೋಟೆಯ ಪೂರ್ವ ಮತ್ತು ಉತ್ತರ ಅಂದರೆ ಈಶಾನ್ಯ ದೇವತೆ ಶಿವ+ರುದ್ರ, ಅಷ್ಟ ಐಶ್ವರ್ಯಗಳ ನಿಲಯ, ದೈವಮೂಲೆ. ಬೆಂಗಳೂರಿನ ಕೋಟೆಯ ದಟ್ಟಾರಣ್ಯದಿಂದ ಕೂಡಿದ ಪೂರ್ವ ಈಶಾನ್ಯ ದಿಕ್ಕಿನ ಹಲಸೂರು ಸರೋವರದ ದಡದ ಮೇಲಿನ ದಂಡೆಯ ಮೇಲೆ ಕೆಂಪೇಗೌಡರು ಶಿಕ್ಷಾ ಗೋಪುರ ಪ್ರತಿಷ್ಠಾಪಿಸಿದರು. ನಾಡಿನಲ್ಲಿ ಯಾರೇ ತಪ್ಪು ಮಾಡಿದರೂ ಈ ಪ್ರದೇಶಕ್ಕೆ ಕರೆತಂದು ಶಿಕ್ಷೆಯನ್ನು ವಿಧಿಸಿ ಅವರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಶಿವನನ್ನು ಬೇಡುವ ಮಂಟಪವೇ ವಾಸ್ತುರೀತ್ಯ ಪ್ರತಿಷ್ಠಾಪಿಸಿದ ಈ ಶಿಕ್ಷಾ ಮಂಟಪ.
(ಲೇಖಕರು ಜ್ಯೋತಿಷರು ಹಾಗೂ ವಾಸ್ತುತಜ್ಞರು )
ಭಾರತ ಮೋಸದಾಟವಾಡಿ​ ಗೆದ್ದಿದೆ; ಸ್ಟಾರ್​ ವೇಗಿ ವಿರುದ್ಧ ಗಂಭೀರ ಆರೋಪ ಮಾಡಿದ ಪಾಕ್​ ಮಾಜಿ ನಾಯಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 2 =
Remember me
