ಬೆಂಗಳೂರು:ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ರಾಗಿಣಿ ಡೋಪಿಂಗ್ ಟೆಸ್ಟ್‌ಗೆ ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ಅವಾಜ್ ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ.
ಆಸ್ಪತ್ರೆ ಕೊಠಡಿ ಒಳಗೆ ಸಂಜನಾ ಮತ್ತು ರಾಗಿಣಿಯನ್ನು ಕರೆದುಕೊಂಡು ಹೋಗಿ ಡೋಪಿಂಗ್ ಟೆಸ್ಟ್ ಕುರಿತು ಪೊಲೀಸರು ವಿವರಿಸಿದರು. ಅದಕ್ಕೆ ಗರಂ ಆದ ರಾಗಿಣಿ ‘ನಮ್ಮ ಲ್ೈ ಈಗಾಗಲೇ ಹಾಳಾಗಿದೆ. ಇದರಲ್ಲಿ ಸಿಲುಕೊಂಡರೆ ಜೈಲಿಗೆ ಹೋಗಬೇಕಾಗುತ್ತೆ. ಮೊದಲೇ ನಮ್ಮ ಲ್ೈ ಬರ್ನ್ ಆಗಿದೆ. ನೀವು ಬಂಧಿಸಿದ ಕಾರಣ ನಮ್ಮ ಮರ್ಯಾದೆ ಹೋಗಿದೆ. ಯಾವುದೇ ಟೆಸ್ಟ್ ಮಾಡುವುದೇ ಇದ್ದರೂ ವಕೀಲರು ಬರಲಿ. ಡ್ರಗ್ಸ್ ವರದಿಯಿಂದ ಮತ್ತಷ್ಟು ಡ್ಯಾಮೇಜ್‌ಗೆ ಯತ್ನಿಸುತ್ತಿದೀರಾ’ ಎಂದು ಪೊಲೀಸರನ್ನು ಪ್ರಶ್ನೆ ಮಾಡಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಈ ಮಧ್ಯೆ, ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ, ರಾಹುಲ್ ತೋನ್ಸೆ, ಪ್ರಶಾಂತ್ ರಾಂಕಾ, ಲೂಪ್ ಪೆಪ್ಪರ್ ಮತ್ತು ನಯಾಜ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಶುಕ್ರವಾರ 1ನೇ ಎಸಿಎಂಎಂ ಕೋರ್ಟ್‌ಗೆ ವಿಡಿಯೋ ಕಾನ್ಫರನ್ಸ್ ಮೂಲಕ ಸಿಸಿಬಿ ಪೊಲೀಸರು ಹಾಜರುಪಡಿಸಿದ್ದರು.
ಈ ವೇಳೆ ಸಿಸಿಬಿ ಪರ ವಕೀಲ, ಆರೋಪಿಗಳು ವಿಚಾರಣೆಗೆ ಸಹಕರಿಸುತ್ತಿಲ್ಲ. ಕೇಳಿದ ಎಲ್ಲ ಪ್ರಶ್ನೆಗಳಿಗೂ ನೆನಪಿಲ್ಲ..ಗೊತ್ತಿಲ್ಲ.. ಅಥವಾ ಮೌನಕ್ಕೆ ಜಾರುತ್ತಿದ್ದಾರೆ. ಆಗಾಗಿ 5 ದಿನಗಳ ಕಾಲ ಸಿಸಿಬಿ ಕಸ್ಟಡಿಗೆ ನೀಡಬೇಕೆಂದು ಮನವಿ ಮಾಡಿದರು. ಇದಕ್ಕೆ ಆರೋಪಿಗಳ ಪರ ವಕೀಲರು, ಆಕ್ಷೇಪ ವ್ಯಕ್ತಪಡಿಸಿದರು.ಇದನ್ನೂ ಓದಿ:ರಾಗಿಣಿ, ಸಂಜನಾ ಸೇರಿ ಆರೂ ಮಂದಿ ಆರೋಪಿಗಳು ಮತ್ತೆ ಸಿಸಿಬಿ ಕಸ್ಟಡಿಗೆ
ಸುಖಾಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ವಿಚಾರಣೆ ವೇಳೆ ಮತ್ತು ಮನೆ ಮೇಲೆ ದಾಳಿ ನಡೆಸಿದಾಗ ಯಾವುದೇ ಸಾಕ್ಷ್ಯ ಲಭ್ಯವಾಗಿಲ್ಲ. ನಟಿಯರಾದ ಕಾರಣಕ್ಕೆ ಅಭಿಮಾನಿಗಳು ಮತ್ತು ಗಣ್ಯರ ಪರಿಚಯ ಮೊಬೈಲ್ ಕರೆಗಳ ಸಂಭಾಷಣೆ ಸರ್ವೆಸಾಮಾನ್ಯ ಅಷ್ಟಕ್ಕೆ ಡ್ರಗ್ಸ್ ದಂಧೆಯಲ್ಲಿ ಕೈವಾಡದ ಆರೋಪಿಸುತ್ತಿದ್ದಾರೆ ಎಂದು ರಾಗಿಣಿ, ಸಂಜನಾ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ, ಸೆ. 14ವರೆಗೆ 6 ಆರೋಪಿಗಳನ್ನು ಸಿಸಿಬಿ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ. ರಾಗಿಣಿ ಮತ್ತು ಸಂಜನಾ ಮಡಿವಾಳದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಕಾಲ ಕಳೆಯಬೇಕಾಗಿದೆ.ಇದನ್ನೂ ಓದಿ:ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…
ಇದಲ್ಲದೆ, ಡ್ರಗ್ಸ್ ಕೇಸ್‌ನಲ್ಲಿ ಬಂಧನ ಭೀತಿಯಿಂದ ತಲೆಮರೆಸಿಕೊಂಡಿರುವ ಶೇಖ್ ಾಝಿಲ್ ಪತ್ತೆಗೆ ಸಿಸಿಬಿ ಕಾರ್ಯಾಚರಣೆ ಮುಂದುವರೆಸಿದೆ. ಶುಕ್ರವಾರ ಸಹ ಸಿಸಿಬಿ ಪೊಲೀಸರು ಶೇಖ್ ಮನೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಅವರ ಪಾಲಕರನ್ನು ವಿಚಾಣೆ ನಡೆಸಿದ್ದಾರೆ. ಶ್ರೀಲಂಕಾ, ಗೋವಾ ಸೇರಿದಂತೆ ಹಲವೆಡೆ ಕ್ಯಾಸಿನೋ ನಡೆಸುತ್ತಿದ್ದು, ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ನಡೆಸಿ ಗಣ್ಯರನ್ನು ಆಹ್ವಾನಿಸಿರುವ ಹಲವು ವಿಡಿಯೋಗಳು ವೈರಲ್ ಆಗಿವೆ.
ನಮ್ ಲೈಫೇ ಬರ್ನ್ ಆಗ್ಹೋಯ್ತು ಎಂದು ಅಲವತ್ತುಕೊಂಡ ರಾಗಿಣಿ: ವಿಡಿಯೋ ವೈರಲ್https://t.co/N6O49ofqRUpic.twitter.com/OWS9f9oBuu— Vijayavani (@VVani4U)September 11, 2020
ನಮ್ ಲೈಫೇ ಬರ್ನ್ ಆಗ್ಹೋಯ್ತು ಎಂದು ಅಲವತ್ತುಕೊಂಡ ರಾಗಿಣಿ: ವಿಡಿಯೋ ವೈರಲ್https://t.co/N6O49ofqRUpic.twitter.com/OWS9f9oBuu

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + twelve =
Remember me
