ಬೆಂಗಳೂರು:ಬಾಂಗ್ಲಾದೇಶಿಯರ ನೆಲೆಗಳನ್ನು ಧ್ವಂಸಗೊಳಿಸುವ ಧಾವಂತದಲ್ಲಿ ಕರಿಯಮ್ಮನ ಅಗ್ರಹಾರ, ಮಾರತ್​ಹಳ್ಳಿ, ಕಾಡುಬೀಸನಹಳ್ಳಿ ಹಾಗೂ ಬೆಳ್ಳಂದೂರಿನಲ್ಲಿ ನಮ್ಮದೇ ಜನರ ಶೆಡ್​ಗಳನ್ನು ತೆರವುಗೊಳಿಸಿ ಬದುಕನ್ನು ಬೀದಿಗೆ ತರಲಾಗಿದೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ತೆರವು ಕಾರ್ಯಾಚರಣೆ ಬಗ್ಗೆ ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ಒಬ್ಬರ ಮೇಲೊಬ್ಬರು ಬೆರಳು ಮಾಡಿ ತೋರಿಸುತ್ತಾ ಮೇಲಧಿಕಾರಿಗಳು ಹಾಗೂ ಜನರ ದಿಕ್ಕು ತಪ್ಪಿಸುತ್ತಿವೆ. ಮೂರು ವರ್ಷದಿಂದ ಶೆಡ್​ಗೆ ಬಾಡಿಗೆ ಕಟ್ಟುತ್ತಾ ವಾಸವಿದ್ದೇವೆ. ನಾವು ಭಾರತೀಯರು, ದೇಶದಲ್ಲಿ ಎಲ್ಲಿ ಬೇಕಾದರೂ ದುಡಿದು ಬದುಕಬಹುದು. ಆದರೆ, ಭಾನುವಾರ ಪೊಲಿಸ್ ಭದ್ರತೆಯೊಂದಿಗೆ ಬಂದಿದ್ದ ಕೆಲವರು ಶೆಡ್​ಗಳನ್ನು ಜೆಸಿಬಿಯಿಂದ ತೆರವು ಮಾಡಲು ಆರಂಭಿಸಿದರು. ಮಾತನಾಡಲೂ ಅವಕಾಶ ಮಾಡಿಕೊಡದೆ ಅಮಾನವೀಯವಾಗಿ ವರ್ತಿಸಿದರು ಸೂರಿಲ್ಲದೆ ಕಣ್ಣೀರು ಸುರಿಸುವುದೊಂದೇ ನಮ್ಮ ಪಾಲಿಗೆ ಉಳಿದಿದೆ ಎಂದು ಸಂತ್ರಸ್ತ ಮಸ್ಕಂದರ್ ಅಲಿ ಹೇಳಿದರು.
ದಾಖಲೆ ತೋರಿಸುವ ಜನ:ಶೆಡ್ ತೆರವು ಕಾರ್ಯಾಚರಣೆಯಿಂದ ಕಂಗಾಲಾಗಿರುವ ಸಂತ್ರಸ್ತರು, ಯಾರೇ ಹೋದರೂ ತಮ್ಮ ಮತ ಗುರುತಿನ ಚೀಟಿ, ಆಧಾರ್ ಕಾರ್ಡ್ ತೋರಿಸುತ್ತಾರೆ. ಇನ್ನು ಕೆಲವರು ಊರಿನಿಂದ ದಾಖಲೆಗಳ ಸಾಫ್ಟ್ ಕಾಪಿ ತರಿಸಿಕೊಂಡು ಪ್ರದರ್ಶನ ಮಾಡುತ್ತಾರೆ. ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡುತ್ತಿದ್ದಾರೆ. ಕೆಲವರು ಊರುಗಳಿಗೆ ಮರಳುತ್ತಿದ್ದಾರೆ.
ಅಧಿಕಾರಿ ಅಮಾನತು:ಮಾರತ್​ಹಳ್ಳಿ ಉಪವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾರಾಯಣಸ್ವಾಮಿ ಪಾಲಿಕೆ ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ ಪೊಲೀಸ್ ನೆರವು ಪಡೆದು ಜ.18 ಮತ್ತು 19 ರಂದು ಶೆಡ್​ಗಳ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಸ್ವ-ಇಚ್ಛೆಯಿಂದ ತೆರವು ಕಾರ್ಯಾಚರಣೆ ನಡೆಸಿರುವ ನಾರಾಯಣಸ್ವಾಮಿ ಅಮಾನತು ಮಾಡಿ ಮಾತೃ ಇಲಾಖೆಗೆ ಕಳಿಸಲು ಕಮಿಷನರ್ ಆದೇಶಿಸಿದ್ದಾರೆ.
ವಾಸಕ್ಕೆ ಯೋಗ್ಯವಲ್ಲದ ಸ್ಥಳ :ಶೆಡ್ ತೆರವು ಮಾಡಿರುವ ಸ್ಥಳ ಖಾಸಗಿ ವ್ಯಕ್ತಿಗಳಿಗೆ ಸೇರಿದ್ದಾಗಿದೆ. 1 ಎಕರೆ ಜಾಗದಲ್ಲಿ 200 ರಿಂದ 300 ಶೆಡ್ ನಿರ್ವಿುಸಿ 2 ರಿಂದ 3 ಸಾವಿರ ರೂ. ಬಾಡಿಗೆಗೆ ನೀಡಿದ್ದರು. ಬೆಸ್ಕಾಂ ಮತ್ತು ಜಲಮಂಡಳಿ ವಿದ್ಯುತ್ ಹಾಗೂ ನೀರು ಒದಗಿಸುತ್ತಿದೆ. ವಾಸಕ್ಕೆ ಯೋಗ್ಯವಲ್ಲದ ಸ್ಥಳದಲ್ಲಿ ಅನುಮತಿ ಪಡೆಯದಿದ್ದರೂ ಶೆಡ್ ನಿರ್ವಿುಸಿಕೊಟ್ಟಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಹೋರಾಟಗಾರ ಅರುಣ್​ಕುಮಾರ್ ಒತ್ತಾಯಿಸಿದ್ದಾರೆ.
ಪಾಲಿಕೆ ವತಿಯಿಂದ ಶೆಡ್​ಗಳ ತೆರವು ಕಾರ್ಯ ಮಾಡಲಾಗಿಲ್ಲ. ಆದರೆ, ಈ ಬಗ್ಗೆ ಒಪ್ಪಿಗೆ ನೀಡಿದ್ದ ಸಹಾಯಕ ಇಂಜಿನಿಯರ್ ನಾರಾಯಣಸ್ವಾಮಿಯನ್ನು ಅಮಾನತು ಮಾಡಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡಲಾಗುವುದು.
| ಗೌತಮ್ುಮಾರ್ ಮೇಯರ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
