ಎನ್. ಶಿವಮಾದುಬೆಂಗಳೂರು:ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಐಐಟಿ (ಭಾರತೀಯ ತಾಂತ್ರಿಕ ಸಂಸ್ಥೆ ) ಮಾದರಿಯಲ್ಲಿ ಅಭಿವೃದ್ಧಿಪಡಿಸಿ ಕರ್ನಾಟಕ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- (ಕೆಐಟಿ)ಗಳಾಗಿ ರೂಪಿಸುವ ಸಂಬಂಧ ಪ್ರೊ.ಎಸ್. ಸಡಗೋಪನ್ ನೇತೃತ್ವದ ಕಾರ್ಯಪಡೆ ಕಾರ್ಯಾರಂಭ ಮಾಡಿದೆ. ಈ ನಿಟ್ಟಿನಲ್ಲಿ ಅಗತ್ಯ ಸವಲತ್ತುಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಕಾರ್ಯಪಡೆಯ ನಿರ್ದೇಶಕರು ಹಾಗೂ 7 ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರನ್ನು ಒಳಗೊಂಡ ನಿಯೋಗ ಇತ್ತೀಚೆಗೆ ಮದ್ರಾಸ್ ಐಐಟಿಗೆ ಭೇಟಿ ನೀಡಿ ಮೂಲಸೌಕರ್ಯ, ತಂತ್ರಜ್ಞಾನ, ಬೋಧನಾ ವಿಧಾನ, ಶೈಕ್ಷಣಿಕ ಮತ್ತು ಆರ್ಥಿಕ ಸ್ವಾಯತ್ತತೆ ಮತ್ತು ಆಡಳಿತ ವ್ಯವಸ್ಥೆ ಕುರಿತು ಎರಡು ದಿನ ಅಧ್ಯಯನ ನಡೆಸಿತು. ಅಲ್ಲಿನ ಬೋಧನಾ ವಿಧಾನ ಮತ್ತು ಪಠ್ಯಕ್ರಮ ಕುರಿತು ಡೀನ್ ಮತ್ತು ನಿರ್ದೇಶಕರೊಂದಿಗೆ ನಿರಂತರವಾಗಿ ಸಂವಾದ ಕೈಗೊಂಡಿದೆ. ಈ ಆಧಾರದಲ್ಲಿ ಕಾಲೇಜುಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅವಶ್ಯವಿರುವ ಮೂಲಸೌಕರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಏನೆಲ್ಲ ಅಧ್ಯಯನ?
ಐಐಟಿಯ ಪ್ರಯೋಗಾಲಯ, ಸಂಶೋಧನೆ, ನಾವೀನ್ಯತೆ, ಆಧುನಿಕ ಉಪಕರಣಗಳು, ಕಂಪ್ಯೂಟರ್ ನೆಟ್​ವರ್ಕ್, ಗ್ರಂಥಾಲಯ, ಆಧುನಿಕ ಮತ್ತು ಸಾಂಪ್ರದಾಯಿಕ ಶೈಲಿಯ ಬೋಧನಾ ವಿಧಾನ ಮತ್ತು ಮೂಲಸೌಕರ್ಯ, ಐಐಟಿ ಮತ್ತು ಎನ್​ಐಟಿಗಳಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪಾತ್ರ ಮತ್ತು ಕೊಡುಗೆ, ಸ್ಥಳೀಯ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ವೀಕ್ಷಿಸಲಾಗಿದೆ ಎಂದು ಸಮಿತಿ ಸದಸ್ಯರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.
ಯಾವ ಕಾಲೇಜುಗಳು?
ರಾಜ್ಯ ಸರ್ಕಾರವು ಪ್ರಸಕ್ತ ವರ್ಷದ ಆಯವ್ಯಯದಲ್ಲಿ ಬೆಂಗಳೂರಿನ ಕೃಷ್ಣರಾಜೇಂದ್ರ ಸರ್ಕಾರಿ ತಾಂತ್ರಿಕ ಸಂಸ್ಥೆ (ಎಸ್​ಕೆಎಸ್​ಜೆಐಟಿ), ಹಾಸನ, ಹಾವೇರಿ, ಕೊಪ್ಪಳ, ಕೆ.ಆರ್. ಪೇಟೆ, ಕಾರವಾರ ಮತ್ತು ರಾಮನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಕೆಐಟಿಗಳಾಗಿ ಉನ್ನತೀಕರಿಸುವುದಾಗಿ ಘೋಷಿಸಿದೆ. ಅದರಂತೆ ಬೆಂಗಳೂರಿನ ಐಐಐಟಿ ಮಾಜಿ ನಿರ್ದೇಶಕ ಪ್ರೊ.ಎಸ್. ಸಡಗೋಪನ್ ನೇತೃತ್ವದಲ್ಲಿ ಸಮಿತಿ ರಚಿಸಿದೆ.
ಅಧ್ಯಯನ ವರದಿಯಲ್ಲಿ ಏನಿದೆ?
ಸದ್ಯ ಗುರುತಿಸಿರುವ ಕಾಲೇಜುಗಳನ್ನು ಕೆಐಟಿಗಳಾಗಿ ಅಭಿವೃದ್ಧಿ ಗೊಳಿಸಲು ಬೇಕಿರುವ ಸವಲತ್ತು ಒದಗಿಸುವಂತೆ ಕೋರಿ ಸಂಸ್ಥೆಯ ಅಭಿವೃದ್ಧಿ ಯೋಜನೆ (ಐಡಿಪಿ) ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈಗಾಗಲೇ ಸರ್ಕಾರವು ಮೊದಲ ಹಂತದಲ್ಲಿ 95 ಕೋಟಿ ರೂ. ಅನುದಾನ ಘೋಷಿಸಿದ್ದು, ಮತ್ತೆ 50 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇಡಲಾಗಿದೆ. ಹಾಲಿ ಸವಲತ್ತುಗಳ ಜತೆಗೆ ಅವಶ್ಯವಿರುವ ಮೂಲಸೌಕರ್ಯ, ಬೋಧಕ/ಬೋಧಕೇತರ ಸಿಬ್ಬಂದಿ, ಪ್ರಯೋಗಾಲಯ ಉಪಕರಣಗಳು, ಆನುದಾನ ಮತ್ತು ಪ್ಲೇಸ್​ವೆುಂಟ್ ಒಳಗೊಂಡ ಅಂಶಗಳು ಪ್ರಸ್ತಾವನೆಯಲ್ಲಿವೆ. ಪಠ್ಯಕ್ರಮ ಅಭಿವೃದ್ಧಿ, ಮುಂದುವರಿದ ತಂತ್ರಜ್ಞಾನಕ್ಕೆ ಅನುಗುಣವಾಗಿ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಬೇಕಾದ ಕ್ರಮ ವಹಿಸುವುದು. ಕಾಲೇಜುಗಳು ತಮ್ಮದೇ ಆಡಳಿತ ಮಂಡಳಿ ಹೊಂದಲಿದ್ದು ಅದಕ್ಕೆ ಅಧ್ಯಕ್ಷರ ನೇಮಕ, ಕೈಗಾರಿಕೋದ್ಯಮಿಗಳ ಪಾತ್ರ ಸೇರಿ ಹಲವು ವಿಚಾರಗಳನ್ನು ಉಲ್ಲೇಖಿಸಲಾಗಿದೆ.
ಕಾಲೇಜು ಪ್ರಾಂಶುಪಾಲರು ಹಾಗೂ ನಿರ್ದೇಶಕರನ್ನು ಒಳಗೊಂಡ ನಿಯೋಗ ಇತ್ತೀಚೆಗೆ ಮದ್ರಾಸ್ ಐಐಟಿಗೆ ಭೇಟಿ ನೀಡಿ ಅಲ್ಲಿನ ಡೀನ್ ಹಾಗೂ ನಿರ್ದೇಶಕರ ಜತೆ ಸಂವಾದ ನಡೆಸಿದೆ. ಬಳಿಕ 3 ಸಭೆಗಳನ್ನು ನಡೆಸಿ ಕೆಐಟಿಯಾಗಿ ಹೇಗೆ ಅಭಿವೃದ್ಧಿಪಡಿಸಬಹುದು ಎಂಬುದನ್ನು ರ್ಚಚಿಸಲಾಗಿದೆ.| ಪ್ರೊ.ಎಸ್. ಸಡಗೋಪನ್ ಕಾರ್ಯಪಡೆ ಅಧ್ಯಕ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
