ಕಲಬುರಗಿ:ಕಳೆದ ಕೆಲವು ದಿನಗಳಿಂದ ವಿವಾದಾತ್ಮಕ ಹೇಳಿಕೆಗಳಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಹಿಂದೂಗಳ ತೀವ್ರ ವಿರೋಧಕ್ಕೆ ಒಳಗಾಗಿ ಟ್ರೋಲ್​ಗೀಡಾಗಿರುವ ನಟ ಪ್ರಕಾಶ್ ರಾಜ್ ಇಂದು ನೇರಾನೇರ ವಿರೋಧ ಧಿಕ್ಕಾರ ಎದುರಿಸುವಂಥ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಕಲಬುರಗಿಯ ರಂಗಮಂದಿರದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರಕಾಶ್ ರಾಜ್ ಆಗಮಿಸಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಲಬುರಗಿ ನಗರದ ಜಗತ್ ವೃತ್ತದ ಬಳಿ ಹಿಂದು ಜಾಗೃತಿ ಸಂಘಟನೆಯಿಂದ ಪ್ರಕಾಶ್​ ರಾಜ್ ವಿರುದ್ಧ ತೀವ್ರ ಪ್ರತಿಭಟನೆ ನಡೆಯಿತು.
ಕೈಯಲ್ಲಿ ಕಪ್ಪುಪಟ್ಟಿ ಹಿಡಿದು ಜಮಾಯಿಸಿದ ಹಿಂದೂಪರ ಸಂಘಟನೆಗಳ ಸದಸ್ಯರು, ಧರ್ಮದ್ರೋಹಿ, ಹಿಂದೂವಿರೋಧಿ ಪ್ರಕಾಶ್ ರಾಜ್​ಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗಿದರು. ಸನಾತನ ಧರ್ಮಕ್ಕೆ ಜಯವಾಗಲಿ ಅಂತ ಜೈಕಾರವನ್ನೂ ಕೂಗಿದರು.
ಶಾಂತಿಯುತ ಕಲಬುರಗಿಯನ್ನ ಹಾಳು ಮಾಡಲು ಆಗಮಿಸಿದ ಪ್ರಕಾಶ್ ರಾಜ್​ಗೆ ಧಿಕ್ಕಾರ ಎಂದ ಅವರು, ಪ್ರಕಾಶ್​ ರಾಜ್​ಗೆ ಎಚ್ಚರಿಕೆ ಎಚ್ಚರಿಕೆ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪ್ರತಿಭಟನಾನಿರತ ಹಿಂದು ಸಂಘಟನೆಯವರನ್ನು ಪೊಲೀಸರು ವಶಕ್ಕೆ ಪಡೆದರು.
ಎಲಾನ್ ಮಸ್ಕ್ ಬಚ್ಚಿಟ್ಟಿದ್ದ ‘ಆ ಮೂರನೇ ಮಗು’ವಿನ ವಿಷಯ ಕೊನೆಗೂ ಬಹಿರಂಗ!
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − three =
Remember me
