ಮಂಡ್ಯ:ನನ್ನ ಶಕ್ತಿ ಮತ್ತು ತಾಕತ್ತು ಮರಾಠ ನೆಲದ್ದು ಎಂದು ಹೇಳುವ ಮೂಲಕ ರೇಷ್ಮೆ ಸಚಿವ ಕೆ.ಸಿ. ನಾರಾಯಣಗೌಡ ವಿವಾದಕ್ಕೀಡಾಗಿದ್ದಾರೆ.
ಇತ್ತೀಚೆಗೆ ಕೆ.ಆರ್.ಪೇಟೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಹಾಗೂ ಸಾಂಸ್ಕೃತಿಕ ಹಬ್ಬ ಉದ್ಘಾಟಿಸಿ ಮಾತನಾಡಿದ್ದ ಅವರು, ನಾನು ಇಂದು ಏನೇ ಆಗಿದ್ದರೂ ಅದು ಮಹಾರಾಷ್ಟ್ರದಿಂದ. 25 ವರ್ಷದ ಹಿಂದೆ ಇಲ್ಲಿಂದ ಮುಂಬೈಗೆ ಹೋಗಿ ಹೋಟೆಲ್ ತೆರೆದು ಉದ್ಯಮಿಯಾಗಿದ್ದೇನೆ.
ಬಿಲ್ಡರ್ ಕೂಡ ಆಗಿ ಬೆಳವಣಿಗೆ ಸಾಧಿಸಿದ್ದೇನೆ. ಅಲ್ಲಿಂದ ಮತ್ತೆ ಇಲ್ಲಿಗೆ ವಾಪಸ್ ಬಂದು ರಾಜಕೀಯ ಪ್ರವೇಶಿಸಿ ಮೂರು ಬಾರಿ ಶಾಸಕನಾಗಿ ಜನರಿಂದ ಆಯ್ಕೆಯಾಗಿ ಈಗ ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿದ್ದೇನೆ. ಅದಕ್ಕಾಗಿ ನಾನು ಜೈ ಮಹಾರಾಷ್ಟ್ರ ಮತ್ತು ಜೈ ಶಿವಾಜಿ ಎಂದು ಹೇಳಲು ಬಯಸುತ್ತೇನೆ ಎಂದು ಹೇಳಿದರು.
ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಭಾವೈಕ್ಯತಾ ಶಿಬಿರದಲ್ಲಿ ರಾಜ್ಯ-ರಾಷ್ಟ್ರವನ್ನು ಪ್ರತ್ಯೇಕಿಸಿ ಮಾತನಾಡುವ ಅಗತ್ಯವಿರಲಿಲ್ಲ ಎನ್ನುತ್ತಿರುವ ಕನ್ನಡಿಗರು, ಕನ್ನಡದಲ್ಲಿ ಸರಿಯಾಗಿ ಮಾತನಾಡದಿ ದ್ದರೂ ಬೇರೆ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡಿರು ವುದಕ್ಕೆ ತೀವ್ರ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.
ಅಂದು ಬಾಯಿ ತಪ್ಪಿ ಹೇಳಿದ್ದೇನೆ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕನ್ನಡಿಗರು ಮತ್ತು ಕರ್ನಾಟಕದ ಜನರಲ್ಲಿ ಕ್ಷಮೆ ಕೋರುತ್ತೇನೆ. ಮಹಾರಾಷ್ಟ್ರ ದಲ್ಲಿಯೂ 27 ಲಕ್ಷ ಜನ ಸೇರಿಸಿ ಕನ್ನಡ ರಾಜ್ಯೋತ್ಸವ ಮಾಡುತ್ತೇವೆ. ಅಲ್ಲಿ ಉದ್ಯಮ ಇರುವುದರಿಂದ ಮಹಾರಾಷ್ಟ್ರಕ್ಕೂ ನನಗೂ ಸಂಬಂಧ ಇದೆ. ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮರಾಠಿಗರಿದ್ದ ಕಾರಣ ಅವರನ್ನು ಉದ್ದೇಶಿಸಿ ಮಾತನಾಡಲಾಗಿದೆ. ಆದರೆ, ಇದನ್ನು ಕೆಲವರು ರಾಜಕೀಯಕ್ಕಾಗಿ ಬಳಸುತ್ತಿದ್ದಾರೆ.
| ಕೆ.ಸಿ.ನಾರಾಯಣ ಗೌಡ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − nine =
Remember me
