ಬೆಂಗಳೂರು:ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರ ದೇವಸ್ಥಾನವೂ ಒಂದು. ಕಡಲ ತೀರದಲ್ಲಿರುವ ಮುರುಡೇಶ್ವರ ದೇವಾಲಯಲ್ಲೆ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇಲ್ಲಿರುವ ಎತ್ತರದ ಶಿವನ ವಿಗ್ರಹವನ್ನು ನೋಡಲೆಂದೇ ಸಾಕಷ್ಟು ಜನರು ಬರುತ್ತಾರೆ. ಇದೀಗ ಇಲ್ಲಿಗೆ ಬಂದಿರುವ ಪ್ರವಾಸಿಗರಿಂದ ಅಪಸ್ವರವೊಂದು ಕೇಳಿ ಬರುತ್ತಿದೆ.
ಮುರುಡೇಶ್ವರ ದೇವಸ್ಥಾನದ ಹೆಬ್ಬಾಗಿಲಿನಲ್ಲಿ ತಮಿಳು ಅಕ್ಷರ ಬಳಸಲಾಗಿದೆ ಎಂಬ ಕಾರಣಕ್ಕೆ ಇದೀಗ ಎಲ್ಲರ ಟೀಕೆಗೆ ಕಾರಣವಾಗುತ್ತಿದೆ. ಮುರುಡೇಶ್ವರ ದೇವಸ್ಥಾನ ಇರುವುದು ಕರ್ನಾಟಕದಲ್ಲಿ. ಹೀಗಾಗಿ ಇಲ್ಲಿ ಕನ್ನಡ ಭಾಷೆಗೆ ಪ್ರಾತಿನಿಧ್ಯ ಕೊಡಬೇಕು. ಆದರೆ ಮುರುಡೇಶ್ವರ ದೇವಸ್ಥಾನದ ಹೆಬ್ಬಾಲಿನಲ್ಲಿ ತಮಿಳು ಅಕ್ಷರ ಬಳಸಲಾಗಿದೆ ಎಂದು ಕನ್ನಡ ಪರ ಹೋರಾಟಗಾರರು ಟೀಕಿಸುತ್ತಿದ್ದಾರೆ.
ತಮಿಳ್ ನುಡಿಯಲ್ಲಿದೆ ಮುರುಡೇಶ್ವರ ಹೆಬ್ಬಾಗಿಲುpic.twitter.com/aPHPVarKGK— ಕಿರಿಕ್ ಗೆ ಕಾರ‌್ತಿಕ್ l KIRIK ge K@rTH!K 🟨🟥 (@VKkarthik169)January 15, 2023
ತಮಿಳ್ ನುಡಿಯಲ್ಲಿದೆ ಮುರುಡೇಶ್ವರ ಹೆಬ್ಬಾಗಿಲುpic.twitter.com/aPHPVarKGK
ಸದ್ಯ ಈ ಫೋಟೋ ಟ್ವಿಟರ್​​ನಲ್ಲಿ ಸದ್ದು ಮಾಡುತ್ತಿದೆ. ಕನ್ನಡ ಪದಗಳಿಗೆ ಇನ್ನಷ್ಟು ಪ್ರಾತಿನಿಧ್ಯ ನೀಡಿ,ಆದಷ್ಟು ಬೇಗನೇ ತಮಿಳು ಪದಗಳನ್ನು ದೇವಾಲಯದ ಹೆಬ್ಬಾಗಿನಿಂದ ತೆಗೆಯಬೇಕು ಎಂದು ಕನ್ನಡ ಪ್ರೇಮಿಗಳು ಟ್ವಿಟರ್​ನಲ್ಲಿ ಆಗ್ರಹಿಸುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × five =
Remember me
