ಬೆಂಗಳೂರು:ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ರ ವಿಧಾನಸಭೆ ಸದಸ್ಯತ್ವ ರದ್ದುಪಡಿಸದಿದ್ದರೆ ವಿಧಾನಮಂಡಲದ ಅಧಿವೇಶನ ನಡೆಯಲು ಬಿಡುವುದಿಲ್ಲವೆಂದು ಮಾಜಿ ಸಿಎಂ ಸಿದ್ದರಾಮಯ್ಯ ಬುಧವಾರ ಗುಡುಗಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರನ್ನು ಅಪಮಾನಿಸಿದ ಯತ್ನಾಳ್ ಶಾಸಕತ್ವ ರದ್ದು ಹಾಗೂ ಬಂಧನಕ್ಕೆ ಒತ್ತಾಯಿಸಿ ವಿಧಾನಸೌಧ ಆವರಣದ ಮಹಾತ್ಮಾ ಗಾಂಧಿ ಪ್ರತಿಮೆ ಎದುರು ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಸದನದ ಒಳ- ಹೊರಗೆ ಹೋರಾಟ ರೂಪಿಸಲಾಗುವುದು ಎಂದರು. ಎಲ್ಲ ಸಂಘಟನೆಗಳು, ಸಿಪಿಎಂ, ಜೆಡಿಎಸ್ ಜತೆಗೂಡಿ ಬಹಿರಂಗ ಹೋರಾಟ ನಡೆಸಲಿದ್ದೇವೆ ಎಂದರು.
ಬಿಜೆಪಿಗೆ ಸಂವಿಧಾನದ ಬಗ್ಗೆ ನಂಬಿಕೆ, ಗೌರವ ಹಾಗೂ ನಿಷ್ಠೆಯಿಲ್ಲ. ಸಂಘ-ಪರಿವಾರದ ಪ್ರಭಾವಕ್ಕೆ ಒಳಗಾಗಿರುವ ಅನಂತಕುಮಾರ್ ಹೆಗಡೆ, ತೇಜಸ್ವಿ ಸೂರ್ಯ, ಬಿ.ಎಲ್. ಸಂತೋಷ್ ಹಾಗೂ ಯತ್ನಾಳ್ ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ಸಿಪಿಎಂ ಮುಖಂಡ ಜಿ.ಎನ್. ನಾಗರಾಜ್ ಮಾತನಾಡಿ, ಸ್ವಾತಂತ್ರ್ಯದ ಇತಿಹಾಸ ಕುರಿತು ಸಂಘ ಪರಿವಾರದ ಸೂರ್ಯನಾಥ್ ಕಾಮತ್ ಬರೆದಿರುವ ಪುಸ್ತಕದಲ್ಲಿ ದೊರೆಸ್ವಾಮಿ ಬಗ್ಗೆ ಏನು ಹೇಳಿದ್ದಾರೆ ಎನ್ನುವುದನ್ನಾದರೂ ಯತ್ನಾಳ್ ಓದಿ ತಿಳಿದುಕೊಳ್ಳಲಿ ಎಂದರು. ಮಾಜಿ ಸಚಿವರಾದ ಡಾ.ಜಿ. ಪರಮೇಶ್ವರ್, ಎಚ್.ಕೆ. ಪಾಟೀಲ್, ಮಾಜಿ ಸಂಸದ ಉಗ್ರಪ್ಪ, ಶಾಸಕರಾದ ರಾಮಲಿಂಗಾರೆಡ್ಡಿ, ನಜೀರ್ ಅಹ್ಮದ್, ಪ್ರಕಾಶ್ ರಾಠೋಡ್, ಹ್ಯಾರಿಸ್, ಐವನ್ ಡಿಸೋಜಾ, ಸೌಮ್ಯಾ ರೆಡ್ಡಿ ಮತ್ತಿತರರಿದ್ದರು.
ಹುಚ್ಚಾಸ್ಪತ್ರೆಗೆ ಸೇರಿಸಬೇಕು:ದೊರೆಸ್ವಾಮಿ ಅವರನ್ನು ಅವಮಾನಿಸಿರುವುದು ಪ್ರಜಾ ಪ್ರಭುತ್ವದ ಕರಾಳ ದಿನವಾಗಿದ್ದು, ಯತ್ನಾಳ್​ರನ್ನು ಹುಚ್ಚಾಸ್ಪತ್ರೆಗೆ ಸೇರಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ. ಧರ್ಮ ಹಾಗೂ ಜಾತಿಗಳ ನಡುವೆ ಸಂಘರ್ಷ, ಕೋಮು ಗಲಭೆಗೆ ಸರ್ಕಾರಗಳು ಕುಮ್ಮಕ್ಕು ನೀಡುತ್ತಿವೆ ಎಂದು ಆಪಾದಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 12 =
Remember me
