ಬೆಂಗಳೂರು:ಜನರ ಬಳಿಗೆ ಸರ್ಕಾರವನ್ನು ಕೊಂಡೊಯ್ಯುವ ಹಾಗೂ ಅವರ ಸಮಸ್ಯೆಗೆ ಪರಿಹಾರ ಒದಗಿಸುವ ಆಶಯದ ’ಜನಸ್ಪಂದನ’ ಕಾರ್ಯಕ್ರಮವು ಸಾಗರೋಪಾದಿ ಜನರನ್ನು ಸೆಳೆಯಿತು. ನಿರೀಕ್ಷೆಗೆ ಮೀರಿದ ಸ್ಪಂದನೆ, ಸಾರ್ವಜನಿಕರ ಕುಂದು-ಕೊರತೆಗಳ ನಿವೇದನೆಗೆ ವಿಧಾನಸೌಧ ಗುರುವಾರ ಸಾಕ್ಷಿಯಾಯಿತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜ್ಯಮಟ್ಟದ ಎರಡನೇ ಜನಸ್ಪಂದನ ಕಾರ್ಯಕ್ರಮ ವಿಧಾನಸೌಧ ಮಹಾದ್ವಾರದ ಮುಂಭಾಗದಲ್ಲಿ ನಡೆಯಿತು. ಗೊಂದಲ, ಅರ್ಜಿ ಸಲ್ಲಿಕೆಗೆ ಪರದಾಟ ತಪ್ಪಿಸಲು 28 ಇಲಾಖೆಗಳಿಗೆ ಪ್ರತ್ಯೇಕ ಕೌಂಟರ್ ತೆರೆದು, ಅರ್ಜಿ ಸ್ವೀಕಾರಕ್ಕೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದು ಈ ಬಾರಿಯ ಹೈಲೈಟ್. ವಿವಿಧೆಡೆಯಿಂದ ಬಂದಿದ್ದ 20 ಸಾವಿರಕ್ಕೂ ಹೆಚ್ಚು ಜನರ ಪೈಕಿ 12,372 ಜನ ತಮ್ಮ ಸಮಸ್ಯೆಗಳನ್ನು ಅರ್ಜಿ ರೂಪದಲ್ಲಿ ಸರ್ಕಾರದ ಮುಂದಿಟ್ಟರು. ಕೆಲವರಿಗೆ ಸ್ಥಳದಲ್ಲಿಯೇ ಪರಿಹಾರ ಸಿಕ್ಕರೆ, ಇನ್ನೂ ಕೆಲವರಿಗೆ ಪರಿಹಾರದ ಭರವಸೆ ಸಿಕ್ಕಿತು.ಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿಗಳ ಇತ್ಯರ್ಥದ ಬಗ್ಗೆ ಯಾವುದೇ ಸಂಶಯ, ಚಿಂತೆ ಬೇಡ. ಕಾನೂನು ವ್ಯಾಪ್ತಿಯಲ್ಲಿದ್ದರೆ ಪರಿಹಾರ ನಿಶ್ಚಿತ. ಕಾನೂನಿನ ತೊಡಕಿದ್ದರೆ ಕಾರಣಗಳ ಸಹಿತ ಹಿಂಬರಹವನ್ನು ಸಂಬಂಧಿಸಿದ ಅರ್ಜಿದಾರರ ವಿಳಾಸಕ್ಕೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿರುವೆ ಎಂದ ಸಿದ್ದರಾಮಯ್ಯ ಜನರಲ್ಲಿ ವಿಶ್ವಾಸ ತುಂಬಿದರು.
ಅಚ್ಚುಕಟ್ಟು, ನೂಕುನುಗ್ಗಲುಶಕ್ತಿಸೌಧದ ಎರಡು ಕಡೆ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ಅಧಿಕೃತ ಗುರುತಿನ ಚೀಟಿಯೊಂದಿಗೆ ಬಂದ ಜನರ ಹೆಸರು ನೋಂದಣಿ, ಮನವಿ ವಿಷಯ ತಿಳಿದು ಸಂಬಂಧಿಸಿದ ಇಲಾಖೆ ಕೌಂಟರ್​ಗೆ ಸಾರ್ವಜನಿಕರನ್ನು ಕರೆದೊಯ್ಯಲು ಸಿಬ್ಬಂದಿ ನೆರವಾದರು. ಆಯಾ ಇಲಾಖೆ ಕೌಂಟರ್​ನಲ್ಲಿ ಕುಳಿತುಕೊಳ್ಳಲು ಕುರ್ಚಿ, ಸಲ್ಲಿಸಿದ ಅರ್ಜಿಗಳಲ್ಲಿ ವಿವರ ದಾಖಲಿಸಿಕೊಳ್ಳಲು ಕಂಪ್ಯೂಟರ್, ಅರ್ಜಿದಾರರಿಗೆ ಸ್ವೀಕೃತಿ ಪತ್ರ. ನಿಗದಿತ ಅರ್ಜಿ ನಮೂನೆ ತುಂಬಲು ಸಹಾಯ. ಕುಡಿಯುವ ನೀರು, ಕುಳಿತಲ್ಲೇ ಆಹಾರ ಪೊಟ್ಟಣ ಪೂರೈಕೆ… ಹೀಗೆ ಎಲ್ಲವೂ ಅಚ್ಚುಕಟ್ಟಾಗಿತ್ತು. ಆದರೆ ಆಯಾ ಇಲಾಖೆ ಕೌಂಟರ್​ಗೆ ಸಿಎಂ ಸಿದ್ದರಾಮಯ್ಯ ತೆರಳಿ ಜನರ ಅಹವಾಲು ಕೇಳಲು ಮುಂದಾದಾಗ ನೂಕು, ನುಗ್ಗಲು ಉಂಟಾಯಿತು. ಬಂದವರೆಲ್ಲರಿಗೂ ಖುದ್ದು ಸಿಎಂ ಬಳಿ ಹೇಳಿಕೊಳ್ಳಬೇಕೆಂಬ ಧಾವಂತ. ಒಮ್ಮೆಲೆ ಜನರು ಅರ್ಜಿ ಸಲ್ಲಿಸಲು ಮುಗಿಬಿದ್ದ ಕಾರಣ ಸಿದ್ದರಾಮಯ್ಯ ಅವರಿಗೆ ಜನರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ. ಕೆಲವೆಡೆ ಮಾತನಾಡಿದರೂ ಗದ್ದಲದಲ್ಲಿ ಸರಿಯಾಗಿ ಕೇಳಿಸಲಿಲ್ಲ. ಜನರನ್ನು ನಿಯಂತ್ರಿಸಲು ಪೊಲೀಸರು ಬೆವರಿಳಿಸಬೇಕಾಯಿತು.
ವೇದಿಕೆಯಲ್ಲೂ ಆಲಿಕೆಕೌಂಟರ್​ಗಳಿಗೆ ತೆರಳಿದ ವೇಳೆ ಸಿದ್ದರಾಮಯ್ಯ ಅರ್ಜಿ ಸ್ವೀಕರಿಸಿದರೆ, ಮುಗಿಬಿದ್ದ ಜನರಿಂದ ಕೆಲವು ಕಡೆ ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್, ಡಾ.ಸುಧಾಕರ್, ಬೈರತಿ ಸುರೇಶ್, ಸಂತೋಷ್ ಲಾಡ್ ಅರ್ಜಿ ಪಡೆದು ಅಧಿಕಾರಿಗಳಿಗೆ ಒಪ್ಪಿಸಿದರು. ಮಧ್ಯಾಹ್ನ 3 ರಿಂದ ಅಂದಾಜು ಒಂದು ತಾಸು ಕುಳಿತ ಸಿಎಂ, ಜನರ ಅಹವಾಲು ಆಲಿಸಿದರು. ಧ್ವನಿವರ್ಧಕ ವ್ಯವಸ್ಥೆ ಸರಿಯಾಗಿ ಇಲ್ಲದ್ದರಿಂದ ಜನರು ಹೇಳಿಕೊಂಡ ಸಮಸ್ಯೆ ನೆರೆದವರಿಗೆ ಕೇಳಿಸಲಿಲ್ಲ. ಸಿದ್ದರಾಮಯ್ಯ ಕಿವಿಗೊಟ್ಟು, ಸೂಕ್ತ ಕ್ರಮವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದಾಗ ಅರ್ಜಿದಾರರ ಮೊಗದಲ್ಲಿ ಸಮಾಧಾನದ ಲಕ್ಷಣಗಳು ಗೋಚರಿಸಿದವು. ಇದಾದ ನಂತರ ಮತ್ತೊಂದು ಸುತ್ತು ಜನರು ಇದ್ದಲ್ಲಿಗೆ ತೆರಳಿದ ಸಿಎಂ ತೆರಳಿ ಅಹವಾಲು ಸ್ವೀಕರಿಸಿದ ನಂತರ ವೇದಿಕೆಗೆ ವಾಪಸಾಗಿ ನೆರೆದ ಜನರನ್ನು ಉದ್ದೇಶಿಸಿ ಮಾತನಾಡಿದರು.
ಕಾದು ಕುಳಿತ ಜಿಲ್ಲಾ ಅಧಿಕಾರಿಗಳುಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿ.ಪಂ. ಸಿಇಒ, ಎಸ್ಪಿ ಸೇರಿ 168 ಅಧಿಕಾರಿಗಳು ಬೆಳಗ್ಗೆಯಿಂದಲೇ ವರ್ಚುವಲ್ ವೇದಿಕೆಯಲ್ಲಿ ಕಾದು ಕುಳಿತರು. ಆದರೆ ಸಿಎಂ ಅಹವಾಲು ಸ್ವೀಕರಿಸಿದ ವೇಳೆ ಜಿಲ್ಲಾಮಟ್ಟದ ಅಧಿಕಾರಿಗಳ ಜತೆಗೆ ಮಾತನಾಡುವ ಪ್ರಸಂಗ ಉದ್ಭವಿಸಲಿಲ್ಲ. ಅಕ್ಕಪಕ್ಕದಲ್ಲಿ ನಿಂತಿದ್ದ ಉನ್ನತಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸಂರ್ಪಸಿ, ಸಿಎಂ ಸೂಚನೆಯತ್ತ ಗಮನಸೆಳೆದರು.
12,372 ಅರ್ಜಿಗಳ ಸ್ವೀಕಾರಸಂಜೆ 6ರವರೆಗೆ ಒಟ್ಟು 12,372 ಅರ್ಜಿಗಳು ಸ್ವೀಕಾರವಾಗಿವೆ. ವಿವಿಧ ಜಿಲ್ಲೆಗಳ 20 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಬೆಳಗ್ಗೆ 10 ರಿಂದ ಸಂಜೆ 6ರವರೆಗೆ ಎಂದಿದ್ದರೂ ನಿಗದಿತ ಅವಧಿಗೆ ಮುನ್ನವೇ ವಿಧಾನಸೌಧದ ಮುಂದೆ ಜನರು ಸಾಲುಗಟ್ಟಿ ನಿಂತಿದ್ದರು. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯ ಸಂಜೆ 4.30ರವರೆಗೆ ಇದ್ದರೆ, ನಿಗದಿತ ಸಮಯ ಮುಗಿದರೂ ಜನರಿಂದ ಸ್ವೀಕರಿಸಿದ ಅರ್ಜಿಗಳನ್ನು ಕಂಪ್ಯೂಟರ್​ನಲ್ಲಿ ದಾಖಲಿಸುವ ತನಕ ಅಧಿಕಾರಿಗಳು ಹಾಜರಿದ್ದರು.
ಸ್ಥಳದಲ್ಲೇ ಪರಿಹಾರ
* ಕಝುಕಿಸ್ತಾನದಲ್ಲಿ ಓದಲು 10 ಲಕ್ಷ ರೂ. ನೆರವು
* ಅಸ್ಥಿಮಜ್ಜೆ, ಕಿಡ್ನಿ ಕಸಿಗಾಗಿ ತಲಾ 4 ಲಕ್ಷ ರೂ. ನೆರವು
* ಶ್ರವಣ ಸಾಧನಕ್ಕೆ 50 ಸಾವಿರ, 1 ಲಕ್ಷ ರೂ. ಸಹಾಯ
* ಕಾರ್ವಿುಕನ ಕುಟುಂಬಕ್ಕೆ -ಠಿ;54,000 ಬಿಡುಗಡೆ
* ಅಪಘಾತ ಸಂತ್ರಸ್ತನಿಗೆ 50 ಸಾವಿರ ರೂ. ಪರಿಹಾರ
* ಬುದ್ಧಿಮಾಂದ್ಯ ಮಗುವಿನ ಸ್ಥಿತಿಗೆ ಮರುಗಿದ ಸಿಎಂ
ಹೆಚ್ಚಿನ ಪಾಲು ಕಂದಾಯ, ವೈಯಕ್ತಿಕಸಿಎಂ, ಸಚಿವರು ನಡೆಸಿಕೊಡುವ ಜನತಾದರ್ಶನ ಅಥವಾ ಜನಸ್ಪಂದನ ಕಾರ್ಯಕ್ರಮಗಳು ಕಂದಾಯ ಇಲಾಖೆಗೆ ಸಂಬಂಧಿಸಿದ ಹಾಗೂ ವೈಯಕ್ತಿಕ ಬೇಡಿಕೆಗಳಿಂದಲೇ ತುಂಬಿರುತ್ತವೆ. ಸಿಎಂ ಸಿದ್ದರಾಮಯ್ಯ ಅವರ ಎರಡನೇ ಆವೃತ್ತಿಯ ’ಜನಸ್ಪಂದನ’ ಕಾರ್ಯಕ್ರಮವೂ ಇದಕ್ಕೆ ಹೊರತಾಗಿರಲಿಲ್ಲ. ಜನರ ನಾಡಿಮಿಡಿತ ಅರಿತ ಅಧಿಕಾರಿಗಳು ಕಂದಾಯ ಇಲಾಖೆಗೆ ವಿಶೇಷ ಮೂರು ಕೌಂಟರ್ ತೆರೆದು, ಹೆಚ್ಚಿನ ಸಿಬ್ಬಂದಿ ನಿಯೋಜಿಸಿದ್ದರು. ಜಮೀನು ಸರ್ವೆ, ಪಹಣಿಯಲ್ಲಿ ದೋಷ, ಪೋಡಿ, 11ಇ ಸ್ಕೆಚ್, ಖಾತಾ ಬದಲಾವಣೆ, ಜಮೀನಿನ ದಾರಿ, ಒತ್ತುವರಿ, ಪಾಲುದಾರಿಕೆ ತಕರಾರು ಮುಂತಾದ ಸಮಸ್ಯೆಗಳ ಅರ್ಜಿಗಳು ಹೆಚ್ಚಾಗಿದ್ದವು. ವಸತಿ, ಉದ್ಯೋಗ, ಆರ್ಥಿಕ ನೆರವು, ಸಾಲ ಸೌಲಭ್ಯ, ಪಿಂಚಣಿ, ಸೇವೆ ಕಾಯಂ, ಅನಾರೋಗ್ಯದ ನೆಲೆಯಲ್ಲಿ ವರ್ಗಾವಣೆ, ನಿವೇಶನ ಮಂಜೂರು, ಹಕ್ಕುಪತ್ರ, ಸಿಎಂ ಪರಿಹಾರ ನಿಧಿಯಿಂದ ವೈದ್ಯಕೀಯ ನೆರವು, ಪರಿವರ್ತಕ ಬದಲಾವಣೆ, ಗೃಹಲಕ್ಷ್ಮಿ ಭತ್ಯೆ, ಕಟ್ಟಡ ಕಾರ್ವಿುಕರ ಕಲ್ಯಾಣ ಸಂಘದ ಸೌಲಭ್ಯ ಮರಣ ಸಹಾಯಧನ ಮುಂತಾದ ವೈಯಕ್ತಿಕ ಕೋರಿಕೆಯ ಅಹವಾಲುಗಳು ಹರಿದುಬಂದವು.
ಅರ್ಜಿಗಳ ಇತ್ಯರ್ಥಕ್ಕೆ ತಿಂಗಳ ಗಡುವುಜನಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ತಿಂಗಳೊಳಗೆ ಇತ್ಯರ್ಥಪಡಿಸಿ, ವಿಲೇವಾರಿ ಮಾಡಬೇಕು ಎಂದು ಇಲಾಖೆ, ಜಿಲ್ಲಾ, ತಾಲೂಕುಮಟ್ಟದ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಗಡುವು ವಿಧಿಸಿದ್ದಾರೆ. ನವೆಂಬರ್​ನಲ್ಲಿ ನಡೆದ ಮೊದಲ ಜನಸ್ಪಂದನದಲ್ಲಿ ಸಲ್ಲಿಕೆಯಾದ 5 ಸಾವಿರ ಅರ್ಜಿಗಳಲ್ಲಿ ಶೇ.98 ವಿಲೇವಾರಿಯಾಗಿವೆ. ಉಳಿದ 200 ಅರ್ಜಿಗಳು ಆದಷ್ಟು ಬೇಗ ಇತ್ಯರ್ಥವಾಗಲಿವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಜನರ ಸಮಸ್ಯೆ ಈಡೇರಿಸುವಲ್ಲಿ ಡಿಸಿ, ಸಿಇಒ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ, ತಾಲೂಕುಮಟ್ಟದ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿಯಿದೆ. ಜಿಲ್ಲಾಮಟ್ಟದ ಅಧಿಕಾರಿಗಳು ಜನರ ಬಳಿಗೆ ತೆರಳಿ ಸಮಸ್ಯೆಆಲಿಸಿ ಬಗೆಹರಿಸಬೇಕು. ಜನರ ಬಳಿಗೆ ಸರ್ಕಾರ ಕೊಂಡೊಯ್ಯುವುದು ಈ ಕಾರ್ಯಕ್ರಮದ ಉದ್ದೇಶ.
| ಸಿದ್ದರಾಮಯ್ಯ ಸಿಎಂ
ಸಿನಿಮಾದಲ್ಲಿ ಸ್ವಲ್ಪವೂ ಮೈಮಾಟ ಪ್ರದರ್ಶಿಸದ ನಟಿಯ ಅಸಲಿ ಅವತಾರ ಬಯಲು! ಹಾಟ್​ ಫೋಟೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 3 =
Remember me
