ಬೆಂಗಳೂರು:ನಗರದಲ್ಲಿ ಜೂ 1ರಿಂದ ಜೂ 14ರವರೆಗೆ ಅನಧಿಕೃತವಾಗಿ ಅಳವಡಿಸಿರುವ 3,800ಕ್ಕೂ ಅಧಿಕ ಫ್ಲೆಕ್ಸ್​, ಬ್ಯಾನರ್​ ತೆರವುಗೊಳಿಸಿರುವ ಬಿಬಿಎಂಪಿ,75 ಸಾವಿರ ರೂ.ದಂಡ ಹಾಕಿದೆ.ವಿವಿಧ ಪೊಲೀಸ್​ ಠಾಣೆಗಳಲ್ಲಿ 76 ದೂರುಗಳು ಸ್ವೀಕೃತವಾಗಿದ್ದು, 48 ಎಫ್​ಐಆರ್​ ದಾಖಲಾಗಿದೆ.
ನಗರದ ರಸ್ತೆಗಳ ಬದಿ, ಪಾದಚಾರಿ ಮಾರ್ಗ, ಮೇಲ್ಸುತುವೆ ಸೇರಿ ಇತರೆ ಕಡೆ ಅನಧಿಕೃತವಾಗಿ ಸಾರ್ವಜನಿಕ, ವೈಯಕ್ತಿಕ, ಶುಭಾಶಯಗಳು ಹಾಗೂ ಸಭೆ ಸಮಾರಂಭಗಳು ಕುರಿತು ಫ್ಲೆಕ್ಸ್​, ಬ್ಯಾನರ್​, ಎಲ್​ಇಡಿ, ಹೋರ್ಡಿಂಗ್ಸ್​, ಭಿತ್ತಿಪತ್ರ, ಬಾವುಟ ಅಳವಡಿಸಲಾಗುತ್ತಿದೆ. ಇವುಗಳಿಂದ ನಗರದ ಸೌಂದರ್ಯ ಹಾಳಾಗುತ್ತಿದ್ದು, ಪರಿಸರಕ್ಕೆ ಮಾರಕವಾಗಿದೆ. ಪಾಲಿಕೆಯ ವ್ಯಾಪ್ತಿಯಲ್ಲಿ ಹೊರಾಂಗಣ ಜಾಹೀರಾತು ಫಲಕ ಮತ್ತು ಸಾರ್ವಜನಿಕ ಸಂದೇಶದ ಉಪ ವಿಧಿ ಅನ್ವಯ ವಸತಿ ಪ್ರದೇಶ, ಖಾಸಗಿ ಸ್ವತ್ತುಗಳಲ್ಲಿ ಜಾಹೀರಾತು ಫಲಕ ಅಳವಡಿಸುವುದು,ವಾಣಿಜ್ಯ ಜಾಹೀರಾತು ಹಾಗೂ ಎಲ್​ಇಡಿ ಜಾಹೀರಾತು ಪ್ರದರ್ಶಿಸುವುದನ್ನು ನಿಷೇಧಿಸಲಾಗಿದೆ.
ಯೋಜನೆ ಸೌಲಭ್ಯ ದೊರೆಯಲು ಅಧ್ಯಕ್ಷರ ಶ್ರಮ: ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಆಶಯ
ಪಾಲಿಕೆ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಕುರಿತು ನಾಗರಿಕರು ಪಾಲಿಕೆ ಸಹಾಯವಾಣಿ 1533 ಅಥವಾ ಜಾಹೀರಾತು ವಿಭಾಗದ ವ್ಯಾಟ್ಸಾಪ್​ 9480683939ಕ್ಕೆ ಛಾಯಾಚಿತ್ರ, ವೀಡಿಯೋ ಮಾಡಿ ವಿಳಾಸ ಸಮೇತ ಕಳುಹಿಸಿದರೆ ಪಾಲಿಕೆ ತೆರವು ಕ್ರಮ ಕೈಗೊಳ್ಳುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
