ಬೆಂಗಳೂರು:ರಾಜಧಾನಿಯಲ್ಲಿ ಡೆಂಘೆ, ಜೀಕಾ, ಮಲೇರಿಯಾ ಸೇರಿ ಸಾಂಕ್ರಾಮಿಕ ರೋಗ ಹರಡುವ ಈಡಿಸ್​ ಸೊಳ್ಳೆಗಳ ನಾಶಕ್ಕೆ ಬಿಬಿಎಂಪಿ ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದೆ.
ಪ್ರಾಯೋಗಿಕವಾಗಿ ಗಾಂಧಿನಗರ ಕ್ಷೇತ್ರದ ಗೋಪಾಲಪುರ ವ್ಯಾಪ್ತಿಯ 20 ಮನೆಗಳಿಗೆ 120 ಓವಿಟ್ರ್ಯಾಪ್​​ ಸಾಧನ ಅಳವಡಿಸಲಾಗಿದೆ. ಇದು ಮಡಿಕೆ ಆಕಾರದ ಬಯೋ ಸಾಧನವಾಗಿದೆ. ಕುಂಡದಲ್ಲಿ ರಾಸಾಯನಿಕ ಬೆರಸಿ ನೀರು ತುಂಬಲಾಗುತ್ತದೆ. ರಾಸಾಯನಿಕ ಮಿಶ್ರಣವು ಈಡಿಸ್​ ಸೊಳ್ಳೆ ಹಾಗೂ ಅದರ ಮೊಟ್ಟೆ ನಾಶಪಡಿಸಲಿದೆ. ಬಯೋ ಟ್ರ್ಯಾಪ್​​ ಬಳಕೆಯಿಂದ ಶೇ.60 ಸೊಳ್ಳೆ ನಿಯಂತ್ರಿಸಬಹುದು. ಹೆಚ್ಚು ಸೊಳ್ಳೆಗಳಿರುವ ಕಡೆಗಳಲ್ಲಿ ಈ ಸಾಧನ ನೆರವಾಗಲಿದೆ.
ಅಳವಡಿಸುವ ಓವಿಟ್ರ್ಯಾಪ್​ಗಳ ಕುರಿತು ಎರಡು ತಿಂಗಳ ಅಧ್ಯಯನ ನಡೆಸಲಾಗುತ್ತದೆ. 4 ವಾರ ನಂತರ ಓವಿಟ್ರ್ಯಾಪ್​​ ಬದಲಾಯಿಸಲಾಗುತ್ತದೆ. ಆರೋಗ್ಯ ಕಾರ್ಯಕರ್ತರು ಪ್ರತಿ ವಾರ ಭೇಟಿ ನೀಡಿ ಅದನ್ನು ಪರಿಶೀಲಿಸಿ ಅಪ್ಲಿಕೇಶನ್​ನಲ್ಲಿ ಮಾಹಿತಿ ದಾಖಲಿಸುತ್ತಾರೆ. ಈ ಬಗ್ಗೆ ಬೆಂಗಳೂರು ವೈದ್ಯಕಿಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್​ಐ), ಎಂ.ಎಸ್​. ರಾಮಯ್ಯ ವೈದ್ಯಕಿಯ ಕಾಲೇಜು ಅಧ್ಯಯನದಲ್ಲಿ ತೊಡಗಿವೆ. ಸೊಳ್ಳೆ ಸಂತಾನೋತ್ಪತ್ತಿ ಸರಪಳಿ ಮುರಿಯಲು, ಹಾಟ್​ಸ್ಪಾಟ್​ ಗುರುತಿಸಲು, ಆಬೋರ್ವೈರಸ್​ ಹರಡುವಿಕೆ ತಡೆಗೆ ಓವಿಟ್ರ್ಯಾಪ್​​ ಸಾಧನಗಳು ಅನುಕೂಲವಾಗಲಿವೆ. ಸೊಳ್ಳೆ ಲಾರ್ವಾಗಳ ವಿರುದ್ಧವೂ ಹೊರಡಲಿದೆ. ರಾಜ್ಯದಲ್ಲಿ ನಿತ್ಯ ಸರಾಸರಿ 400-550 ಡೆಂಘೆ ಕೇಸ್​ಗಳು ದಾಖಲಾಗುತ್ತಿವೆ. ಚಿಕ್ಕ ಮಕ್ಕಳು ಇದಕ್ಕೆ ತುತ್ತಾಗುತ್ತಿರುವುದು ಆತಂಕ ತಂದೊಡ್ಡಿದೆ. ಹೀಗಾಗಿಕೆಲಸದ ಸ್ಥಳ, ಶಾಲೆ, ಕಾಲೇಜು, ಕಾರ್ಖಾನೆ, ಕೊಳೆಗೇರಿಗಳಲ್ಲಿ ನಾಗರಿಕರು, ಗರ್ಭಿಣಿಯರು ಮತ್ತು ಮಕ್ಕಳು ಜಾಗ್ರತರಾಗಬೇಕು ಎಂದು ಪಾಲಿಕೆ ತಿಳಿಸಿದೆ.
ಪ್ರೀಮಿಯಂ ಮದ್ಯದ ಬೆಲೆ ಇಳಿಕೆ, ಬಿಯರ್​​ ಏರಿಕೆ
ವಿವಿಧ ಕಡೆ ಅಧ್ಯಯನ* 6 ತಿಂಗಳಿಂದ ಮುಂಬೈನ ಧಾರಾವಿ ಕೊಳೆಗೇರಿಯಲ್ಲಿ ಓವಿಟ್ರ್ಯಾಪ್​​ ಸಾಧನ ಬಗ್ಗೆ ಅಧ್ಯಯನ.* ಜಾಲಹಳ್ಳಿಯ ಭಾರತೀಯ ವಾಯುಪಡೆ ನಿಲ್ದಾಣದಲ್ಲಿ ಈ ಸಾಧನ ಅಳವಡಿಸುವ ಮೂಲಕ ಡೆಂಘೆ ನಿಯಂತ್ರಣ.* ಭಾರತದ ಅತಿದೊಡ್ಡ ಕೀಟ ನಿಯಂತ್ರಣ ಕಂಪನಿ ರೆಂಟೊಕಿಲ್​ ಪಿಸಿಐ, ದೇಶದ 22 ರಾಜ್ಯಗಳಲ್ಲಿ ಬಯೋಟ್ರ್ಯಾಪ್​ ಸಾಧನ ವಿತರಣೆ.* ಮಲೇರಿಯಾ, ಚಿಕೂನ್​ಗುನ್ಯಾ, ಜೀಕಾ ಸೇರಿ ಇತರೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ.
ಹೊಸ ಪ್ರಯೋಗಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​, ಗಾಂಧಿನಗರ ಕ್ಷೇತ್ರದ ಗೋಪಾಲಪುರ ವ್ಯಾಪ್ತಿಯ 20 ಮನೆಗಳಿಗೆ 120 ಓವಿಟ್ರ್ಯಾಪ್​​ ಸಾಧನ ಅಳವಡಿಕೆಗೆ ಚಾಲನೆ ನೀಡಿದರು. ಈಡಿಸ್​ ಸೊಳ್ಳೆಗಳನ್ನು ನಾಶಪಡಿಸುವ ಬಯೋ ಸಾಧನಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡುತ್ತಿದ್ದೇವೆ. ಉತ್ತಮ ಫಲಿತಾಂಶ ಕಂಡುಬಂದರೆ ರಾಜ್ಯಾದ್ಯಂತ ಓವಿಟ್ರ್ಯಾಪ್​​ ಸಾಧನ ಅಳವಡಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eight =
Remember me
