ಬೆಂಗಳೂರು:ಸ್ಫೋಟಕಗಳ ಮಾರಾಟ ಪರವಾನಗಿ ಪಡೆದವರ ಬಳಿ ಕೆಲಸ ಮಾಡುವ ನೌಕರ ಮಾಲೀಕರ ಅರಿವಿಗೆ ಬಾರದಂತೆ ಅಕ್ರಮವಾಗಿ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದರೆ ಅದಕ್ಕೆ ಪರವಾನಗಿದಾರರನ್ನು ಹೊಣೆ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಎಸ್‌ಎಲ್‌ಎನ್ ಕಂಪನಿಯ ಪಿ. ಸುನೀಲ್ ಕುಮಾರ್ ಮತ್ತವರ ತಂದೆ ಎಂ. ಪ್ರಕಾಶ್ ರಾವ್ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಜತೆಗೆ, ಕಾರ್‌ನಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡ ಪ್ರಕರಣವೊಂದರಲ್ಲಿ ಮೃತವ್ಯಕ್ತಿಗೆ ಅಕ್ರಮವಾಗಿ ಸ್ಫೋಟಕ ಮಾರಾಟ ಮಾಡಿದ ಆರೋಪದಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ನ್ಯಾಯಾಲಯ ರದ್ದುಪಡಿಸಿದೆ.
ಪ್ರಕರಣವೇನು?:ಬೆಂಗಳೂರಿನ ಕಬ್ಬನ್‌ಪೇಟೆಯ ನಿವಾಸಿಗಳಾಗಿರುವ ಅರ್ಜಿದಾರರು ಕನಕಪುರ ತಾಲೂಕಿನ ಪಡುವನಗೆರೆ ಗ್ರಾಮದಲ್ಲಿ ಎಸ್‌ಎಲ್‌ಎನ್ ಕಂಪನಿ ನಡೆಸುತ್ತಿದ್ದು, ಕ್ವಾರಿ ಗುತ್ತಿಗೆದಾರರಿಗೆ ಸ್ಫೋಟಕ ಮಾರಾಟ ಮಾಡಲು ಪರವಾನಗಿ ಪಡೆದಿದ್ದಾರೆ. ಸಾತನೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಿಂತಿದ್ದ ಕಾರೊಂದು ಸ್ಫೋಟಗೊಂಡು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿತ್ತು. ಈ ಸಂಬಂಧ 2021ರ ಆ.16ರಂದು ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು.
ವಿಚಾರಣೆ ವೇಳೆ, ಕಾರ್‌ನಲ್ಲಿ ಸಾಗಿಸುತ್ತಿದ್ದ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಂಡು, ಅದರಲ್ಲಿದ್ದ ಮಹೇಶ್ ಎಂಬ ವ್ಯಕ್ತಿ ಸಾವಿಗೀಡಾಗಿರುವುದು ಕಂಡುಬಂದಿತ್ತು. ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ, ಅರ್ಜಿದಾರರು ಸ್ಫೋಟಕ ಮಾರಾಟ ಪರವಾನಗಿ ಪಡೆದಿರುವ ವಿಚಾರ ಹಾಗೂ ಮೃತ ಮಹೇಶ್ ಅರ್ಜಿದಾರರ ಮಳಿಗೆಯಿಂದ ಜಿಲೆಟಿನ್ ಕಡ್ಡಿಗಳನ್ನು ಖರೀದಿಸಿದ್ದ ವಿಚಾರ ತಿಳಿದುಬಂದಿತ್ತು. ಇದರಿಂದ, ಪೊಲೀಸರು ಅರ್ಜಿದಾರರನ್ನು 4 ಹಾಗೂ 5ನೇ ಆರೋಪಿಗಳನ್ನಾಗಿಸಿ, ಅವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ, ಅರ್ಜಿದಾರರು ಪ್ರಕರಣ ರದ್ದುಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಹೇಳಿದ್ದೇನು?:ಪ್ರಕರಣದಲ್ಲಿ ಅರ್ಜಿದಾರರ ಬಳಿ ಕೆಲಸ ಮಾಡುತ್ತಿದ್ದ ಹರೀಶ್ ಕುಮಾರ್ (3ನೇ ಆರೋಪಿ) ಎಂಬ ನೌಕರ ಜಿಲೆಟಿನ್ ಕಡ್ಡಿಗಳನ್ನು ಮಾರಾಟ ಮಾಡಿದ್ದಾನೆ. ಈ ಸಂದರ್ಭದಲ್ಲಿ ಅರ್ಜಿದಾರರಿಬ್ಬರೂ ಮಳಿಗೆಯಲ್ಲಿರಲಿಲ್ಲ. ಮಾಲೀಕರು ಇಲ್ಲದ ಸಂದರ್ಭದಲ್ಲಿ ಅವರಿಗೆ ತಿಳಿಯದಂತೆ ಸ್ಫೋಟಕಗಳನ್ನು ಮಾರಾಟ ಮಾಡುತ್ತಿದ್ದ ವಿಚಾರವನ್ನು ಸ್ವತಃ 3ನೇ ಆರೋಪಿ ಒಪ್ಪಿಕೊಂಡಿದ್ದಾನೆ. ಅರ್ಜಿದಾರರ ಗಮನಕ್ಕೆ ಬಾರದೆಯೇ ಸ್ಫೋಟಕ ಮಾರಾಟವಾಗಿರುವಾಗ, ಅರ್ಜಿದಾರರು ಪರವಾನಗಿಯನ್ನು ಉಲ್ಲಂಘಿಸಿದ್ದಾರೆ ಎನ್ನುವುದನ್ನು ಒಪ್ಪಲಾಗದು ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಘಟನೆಗೆ ಕಾರಣವಾದ ಜಿಲೆಟಿನ್ ಕಡ್ಡಿಗಳನ್ನು ಅರ್ಜಿದಾರರ ಅಂಗಡಿಯಿಂದಲೇ ಖರೀದಿಸಲಾಗಿದ್ದರೂ, ಅದು ಅವರ ಗಮನಕ್ಕೆ ಬಂದಿಲ್ಲ. ಮಾಲೀಕರ ಪರವಾಗಿ ಯಾವುದೇ ರಸೀದಿಯನ್ನೂ ನೀಡಲಾಗಿಲ್ಲ. ಹೀಗಿರುವಾಗ, ಅರ್ಜಿದಾರರನ್ನು ಪ್ರಕರಣದಲ್ಲಿ ಸಿಲುಕಿಸಿರುವುದು ಸರಿಯಲ್ಲ. ಉದ್ಯೋಗಿ ಎಸಗುವ ಯಾವುದೇ ಅಪರಾಧ ಕೃತ್ಯಕ್ಕೆ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಉದ್ಯೋಗದಾತ ಅಥವಾ ಮಾಲೀಕರನ್ನು ಹೊಣೆಗಾರರನ್ನಾಗಿಸಲಾಗದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅರ್ಜಿದಾರರ ವಿರುದ್ಧ ಸ್ಫೋಟಕ ವಸ್ತುಗಳ ಕಾಯ್ದೆ ಹಾಗೂ ಸ್ಫೋಟಕ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.
‘ಸಂಕ್ರಾಂತಿ ಸ್ಕ್ಯಾಮ್ ಸಂಭ್ರಮ’ ಪೋಸ್ಟರ್​ ಹಾಕಿ ಸರ್ಕಾರವನ್ನ ಅಣಕಿಸಿದ ಕಾಂಗ್ರೆಸ್​! 100% ಹುದ್ದೆ ಸೇಲ್, ಸ್ಯಾಂಟ್ರೋ ರವಿಯಿಂದ ವರ್ಗಾವಣೆ ಕೂಪನ್…

ಜೆಡಿಎಸ್​ನ ಮತ್ತೊಂದು ವಿಕೆಟ್​ ಪತನ: ಡಿಕೆಶಿ ವಿರುದ್ಧ ಚುನಾವಣೆಯಲ್ಲಿ ನಿಂತು ಸೋತಿದ್ದ ಅಭ್ಯರ್ಥಿ ಕಾಂಗ್ರೆಸ್​ ಸೇರ್ಪಡೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 18 =
Remember me
