ಬೆಂಗಳೂರು:ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕಿಯ ಸರಬರಾಜು ನಿಗಮಕ್ಕೆ (ಕೆಎಸ್​ಎಂಎಸ್​ಸಿಎಲ್​), ಎಂ/ಎಸ್​ ಪುಷ್ಕರ್​ ಫಾರ್ಮಾ ಕಂಪನಿ, ಸರಬರಾಜು ಮಾಡಿದ್ದ ಲಕ್ಷಾಂತರ ರೂ. ಮೌಲ್ಯದ ಕಣ್ಣು, ಕಿವಿ, ಮೂಗಿನ ಔಷಧವು “ಮಿಸ್​ ಬ್ರ್ಯಾಂಡೆಡ್​ ಎಂಬುದು ಸಾಬೀತಾಗಿದೆ.
ಪ್ರಾಣಿಗಳಿಗೆ ಬಳಸುವ ಔಷಧ ಸರಬರಾಜು ಮಾಡಿದ ಸಂಬಂಧಪಟ್ಟಂತೆ ದಾಖಲಾಗಿದ್ದ ದೂರಿನ ಮೇರೆಗೆ ಕೇಂದ್ರ ಔಷಧಗಳ ಪ್ರಮಾಣಿತ ನಿಯಂತ್ರಣ, ಔಷಧ ನಿಯಂತ್ರಣ ಇಲಾಖೆ ನಡೆಸಿದ್ದ ಪ್ರಯೋಗಾಲಯದ ಪರೀಕ್ಷಾ ವರದಿಯಲ್ಲಿ “ಆಕ್ಸಿಮೆಟಾಜೋಲಿನ್​ ಹೈಡ್ರೋಕ್ಲೋರೈಡ್​’ ಔಷಧವು “ಮಿಸ್​ ಬ್ರ್ಯಾಂಡೆಡ್​ ‘ಎಂದು ಬಹಿರಂಗವಾಗಿದೆ. ಡ್ರಗ್ಸ್​ ಮತ್ತು ಕಾಸ್ಮೆಟಿಕ್ಸ್​-1940 ಕಾಯ್ದೆ ಪ್ರಕಾರ ತಪ್ಪು ಮಾಡಿದವರಿಗೆ ಕನಿಷ್ಠ 1 ವರ್ಷ ಜೈಲು ಶಿಕ್ಷೆ ವಿಧಿಸಲು, ಸಾವಿರಾರು ರೂ. ದಂಡ ಹಾಕುವ ಅವಕಾಶ ಇದೆ. ಜತೆಗೆ,ಕಂಪನಿ ವಿರುದ್ಧ ಕ್ರಮಕೈಗೊಂಡು ಕಪ್ಪುಪಟ್ಟಿಗೆ ಸೇರಿಸಬೇಕಿತ್ತು. ಆದರೆ, ಇದ್ಯಾವ ಕಾರ್ಯವನ್ನು ಇಲಾಖೆ ಮಾಡಿಲ್ಲ. ಆ ಔಷಧವನ್ನು ಮುಟ್ಟುಗೋಲು ಹಾಕಿ ನಾಶ ಪಡಿಸುವ ಕೆಲಸವನ್ನು ಔಷಧ ನಿಯಂತ್ರಣ ಇಲಾಖೆಯೂ ಮಾಡಿಲ್ಲ.
ಕಣ್ಣು, ಕಿವಿ, ಮೂಗಿನ ಸಂಬಂಧಪಟ್ಟಂತೆ ವಿವಿಧ ಔಷಧ ಖರೀದಿಗಾಗಿ ನಿಗಮ, 2023ರ ಆಗಸ್ಟ್​ನಲ್ಲಿ ಟೆಂಡರ್​ ನಡೆಸಿತ್ತು. ಟೆಂಡರ್​ನಲ್ಲಿ ಎಲ್​-1 ಪುಷ್ಕರ್​ ಫಾರ್ಮಾ ಕಂಪನಿ, ಔಷಧ ಉಗ್ರಾಣಗಳಿಗೆ, ಆರೋಗ್ಯ ಸಂಸ್ಥೆಗಳಿಗೆ ಪೂರೈಸಿದ್ದ ಔಷಧ ಮೇಲೆ ಪಶುಸಂಗೋಪನೆ ಮತ್ತು ಪಶುವೈದ್ಯಕಿಯ (ಎಎಚ್​ವಿಎಸ್​) ಲೇಬಲ್​ ಇರುವುದು ಪತ್ತೆಯಾಗಿತ್ತು. ಔಷಧಗಳ ಲೋಗೋಗ್ರಾಂನಲ್ಲಿ ಆರೋಗ್ಯ ಇಲಾಖೆ ಬದಲಿಗೆ “ಎಎಚ್​ವಿಎಸ್​’ ಎಂದು ನಮೂದಿಸಲಾಗಿತ್ತು. ಬಳಿಕ, ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ ಉಲ್ಲಂಘಿಸಿ ನಿಗಮದ ಎಂಡಿ ಚಿದಾನಂದ ವಟಾರೆ, ಮಾಸ್ಕಿಂಗ್​, ಟ್ಯಾಂಪರಿಂಗ್​ ಮಾಡುವಂತೆ ಆದೇಶ ಹೊರಡಿಸಿದ್ದರು. ಪುಷ್ಕರ್​ ಫಾರ್ಮಾಗೆ ನೀಡಿದ್ದ ಪತ್ರದಲ್ಲಿ ಲೇಬಲ್​ ಮರೆಮಾಚಲು ಅನುಮತಿ ಕೊಟ್ಟಿದ್ದರು. ಪುಷ್ಕರ್​ ಫಾರ್ಮಾ ತಯಾರಿಸಿ ಸರಬರಾಜು ಮಾಡಿರುವ ಕೆಲವೊಂದು ಔಷಧಗಳ ಲೋಗೋಗ್ರಾಂ ವಿನ್ಯಾಸಕ್ಕೆ ಮಾಸ್ಕಿಂಗ್​ (ಮರೆಮಾಚುವಿಕೆ) ಮಾಡಿರುವ ಔಷಧಗಳನ್ನು ಹಿಂಪಡೆಯುವಂತೆ ಕೊಡಗಿನ ಔಷಧ ಉಗ್ರಾಣದವರು ಮೈಸೂರು, ಕೊಡಗು ಜಿಲ್ಲೆಯ ಆಡಳಿತ ವೈದ್ಯಾಧಿಕಾರಿಗಳಿಗೆ ಪತ್ರ ಬರೆದಿದ್ದರು.
ಬಾಲಿವುಡ್​ ನಟಿ ಜಾನ್ವಿ ಕಪೂರ್ ದಿಢೀರ್​ ಆಸ್ಪತ್ರೆಗೆ ದಾಖಲು! ಶ್ರೀದೇವಿ ಮಗಳ ಆರೋಗ್ಯಕ್ಕೆ ಏನಾಯ್ತು?
ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗಳುಪ್ರಯೋಗಾಲಯದ ಪರೀಕ್ಷಾ ವರದಿಯಲ್ಲಿ “ಆಕ್ಸಿಮೆಟಾಜೋಲಿನ್​ ಹೈಡ್ರೋಕ್ಲೋರೈಡ್​’ ಔಷಧವು “ಮಿಸ್​ ಬ್ರ್ಯಾಂಡೆಡ್​’ ಎಂದು ಬಹಿರಂಗವಾಗಿದ್ದರೂ ನಿಗಮ ಅಧಿಕಾರಿಗಳು ಅಧಿವೇಶನದಲ್ಲಿ “ಈ ಔಷಧಗಳ ಸ್ಯಾಂಪೆಲ್​ ಉತ್ತಮ ಗುಣಮಟ್ಟವೆಂದು’ ತಪ್ಪು ಮಾಹಿತಿ ನೀಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಕೇಳಿದ್ದ ಪ್ರಶ್ನೆಗೆ ಆರೋಗ್ಯ ಇಲಾಖೆ ಸಚಿವರು ಉತ್ತರ ಕೊಟ್ಟಿದ್ದರು. ಆದರೆ, ನೈಜ ವರದಿ ಮರೆಮಾಚಿ ಅಧಿಕಾರಿಗಳು ತಪ್ಪು ಮಾಹಿತಿ ಕೊಟ್ಟಿರುವುದು ಕಂಡುಬಂದಿದೆ.
ಮಿಸ್​ ಬ್ರ್ಯಾಂಡೆಡ್​ ಎಂದರೇನು?ಔಷಧ ಮೇಲಿನ ಲೇಬಲ್​ ತಪ್ಪಾಗಿದ್ದರೆ, ಔಷಧ ಮೇಲೆ ತಯಾರಕರ ಹೆಸರು, ವಿಳಾಸ, ಔಷಧ ಅಂಶ ಒಳಗೊಂಡಿರುವ ಲೇಬಲ್​ ಇಲ್ಲದಿದ್ದರೆ ಹಾಗೂ ಲೋಗೋಗ್ರಾಂ ವಿನ್ಯಾಸ ತಿರುಚಿ ಬೇರೆ ಲೇಬಲ್​ ಅಂಟಿಸಿದರೆ ಮಿಸ್​ ಬ್ರ್ಯಾಂಡೆಡ್​ ​ ಎಂದು ಕರೆಯಲಾಗುತ್ತದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 2 =
Remember me
