ಬೆಂಗಳೂರು :ಠೇವಣಿದಾರರಿಗೆ ಬಹುಕೋಟಿ ರೂಪಾಯಿ ವಂಚಿಸಿದ ಪರ್ಲ್ ಅಗ್ರೊಟೆಕ್ ಕಾರ್ಪೆರೇಶನ್ ಲಿಮಿಟೆಡ್​ನ (ಪಿಎಸಿಎಲ್) ಹೂಡಿಕೆದಾರರು 10 ಸಾವಿರ ರೂ. ಕ್ಲೇಮ್​ ಮಾಡಲು ಸೆಬಿ ಅರ್ಜಿ ಆಹ್ವಾನಿಸಿದೆ. ಇದೇ ಜನವರಿ 1 ರಿಂದ ಮಾರ್ಚ್ 31ರ ವರೆಗೆ ವೆಬ್​ಸೈಟ್ ತೆರೆದಿರಲಿದೆ.
ದೇಶ ವ್ಯಾಪಿ ಸಾವಿರಾರು ಕೋಟಿ ರೂ. ವಂಚನೆ ಮಾಡಿದ ಪಿಎಸಿಎಲ್ ಕಂಪನಿಗೆ ಸೇರಿದ ಆಸ್ತಿಯನ್ನು ಸೆಬಿ ಜಪ್ತಿ ಮಾಡಿತ್ತು. ಹೂಡಿಕೆದಾರರಿಗೆ ಹಣ ಹಿಂತಿರುಗಿಸಲು ಕೇಂದ್ರ ಸರ್ಕಾರ ನಿವೃತ್ತ ನ್ಯಾ. ಲೋಧಾ ಸಮಿತಿ ರಚಿಸಿದೆ. ಹೂಡಿಕೆದಾರರಿಗೆ ಹಣ ಮರುಪಾವತಿ ಮಾಡುವ ಪ್ರಕ್ರಿಯೆಯನ್ನು 2019ರಿಂದ ಈ ಸಮಿತಿ ಆರಂಭಿಸಿದೆ. 5 ಮತ್ತು 7 ಸಾವಿರ ರೂ. ಹಿಂಪಡೆಯಲು ಅರ್ಜಿ ಸಲ್ಲಿಸಿದ್ದವರಿಗೆ ಹಣ ವಾಪಸ್ ಕೊಡುವ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿ:ಭೀಕರ ರಸ್ತೆ ಅಪಘಾತ : ಅಪ್ಪನ ಮತಎಣಿಕೆಗೆ ಹೊರಟ ಮಗ ಮತ್ತು ಇನ್ನೊಬ್ಬನ ಬಲಿ
ಇದೀಗ 10 ಸಾವಿರ ರೂ. ಕ್ಲೈಮ್ ಮಾಡಲು 2021ರ ಜನವರಿ 1 ರಿಂದ ಮಾರ್ಚ್ 31ರ ವರೆಗೆ ಸೆಬಿ ವೆಬ್​ಸೈಟ್​ನಲ್ಲಿ ಅರ್ಜಿ ಸಲ್ಲಿಸುವ ಪೋರ್ಟಲ್ ಕಾರ್ಯನಿರ್ವಹಿಸಲಿದೆ. 10 ಸಾವಿರ ರೂ. ಕ್ಲೈಮ್ ಮಾಡಿರುವ ಅರ್ಜಿಗಳಲ್ಲಿ ಕೆಲ ದೋಷಗಳು ಇದ್ದರೆ ಅವುಗಳನ್ನು ಸರಿಪಡಿಸಿ ಮರು ಸಲ್ಲಿಸುವಂತೆ ನಿವೃತ್ತ ನ್ಯಾ.ಲೋಧಾ ಸಮಿತಿ ಮತ್ತು ಸೆಬಿ ಪ್ರಕಟಣೆಯಲ್ಲಿ ತಿಳಿಸಿದೆ. ಹೂಡಿಕೆ ಹಣ ವಾಪಸ್ ಕೊಡಿಸುವುದಾಗಿ ಯಾವುದೇ ಅಧಿಕಾರಿ ಮತ್ತು ಖಾಸಗಿ ಕಂಪನಿಗಳ ಆಮಿಷಗಳಿಗೆ ಒಳಗಾಗಬೇಡಿ. ಹೆಚ್ಚಿನ ಮಾಹಿತಿಗೆ ಸೆಬಿ ವೈಬ್​ಸೈಟ್​ನಲ್ಲಿ ನವೀಕರಿಸಿದ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..
ಶಾಲೆ-ಕಾಲೇಜು ಆರಂಭಕ್ಕೆ ಸರ್ಕಾರದಿಂದ ಸಕಲ ಸಿದ್ಧತೆ – ಕರೊನಾ ಮಾರ್ಗಸೂಚಿ ಪಾಲನೆ ಮಾಡುವಂತೆ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − fourteen =
Remember me
