ಬೆಂಗಳೂರು:ಪಾದರಾಯನಪುರ ಗಲಭೆ ಪ್ರಕರಣದ ಕಿಂಗ್​ಪಿನ್ ಇರ್ಫಾನ್ ಪಾಷಾ ಇನ್ನೂ ಪತ್ತೆಯಾಗಿಲ್ಲ. ಈತನೇ ಕರೊನಾ ವಾರಿಯರ್ಸ್ ಮೇಲಿನ ಹಲ್ಲೆಗೆ ಕುಮ್ಮಕ್ಕು ಕೊಟ್ಟಿದ್ದು ಎಂದು ವಿಚಾರಣೆ ವೇಳೆ ಬಂಧಿತರು ಒಪ್ಪಿಕೊಂಡಿದ್ದಾರೆ.
ರಾಜಕೀಯ ಮುಖಂಡರಿಗೆ ಸೆಡ್ಡು ಹೊಡೆದು ತನ್ನ ಪ್ರಾಬಲ್ಯ ಬೆಳಸಿ ಕೊಳ್ಳುವ ನಿಟ್ಟಿನಲ್ಲಿ ಇರ್ಫಾನ್ ಪಾಷಾ ಹಲವು ದಿನಗಳಿಂದ ಹವಣಿಸುತ್ತಿದ್ದ. ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕತ್ವ ಕಾಯ್ದೆ ವಿರುದ್ಧದ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದ್ದ ಕರೊನಾ ಸೋಂಕಿನಿಂದ ಪಾದರಾಯನಪುರ ಸೀಲ್​ಡೌನ್ ಆದ ಕಾರಣಕ್ಕೆ ಸ್ಥಳೀಯರಿಗೆ ಪ್ರಚೋದನೆ ಕೊಟ್ಟು ದಾಂಧಲೆಗೆ ಕಾರಣನಾದ ಆರೋಪ ಈಗ ಇರ್ಫಾನ್ ಮೇಲಿದೆ. ಇರ್ಫಾನ್ ಮತ್ತು ಕಸ್ಟಡಿಯಲ್ಲಿ ಇರುವ ಪ್ರಮುಖ ಆರೋಪಿಗಳ ಮೊಬೈಲ್ ಕರೆಗಳ ಮಾಹಿತಿ ಪರಿಶೀಲನೆ ನಡೆಸಿದಾಗ ಪೂರಕವಾದ ಮಾಹಿತಿ ಲಭ್ಯವಾಗಿವೆ. ಬಂಧಿತ ಫರ್ಜುವಾ ಮೊಬೈಲ್​ಗೆ ಇರ್ಫಾನ್ ಪಾಷಾ ಕರೆ ಮಾಡಿರುವುದು ದೃಢವಾಗಿದೆ.
ಫರ್ಜುವಾಗೆ ಕರೆ ಮಾಡಿದ್ದ ಇರ್ಫಾನ್, ‘ಆರೋಗ್ಯ ಸೇವೆಗೆ ಬರುವವರ ವಿರುದ್ಧ ಗಲಾಟೆ ನಡೆಸಿ ಓಡಿಸುವಂತೆ ಕುಮ್ಮಕ್ಕು ನೀಡಿದ್ದ. ಕೆಲ ಕಿಡಿಗೇಡಿಗಳನ್ನೂ ಪ್ರಚೋದಿಸಿದ್ದ. ಗಲಾಟೆ ವೇಳೆ ಇನ್​ಸ್ಪೆಕ್ಟರ್ ಮೊಬೈಲ್​ಗೆ ಕರೆ ಮಾಡಿ ಮಾಹಿತಿ ಕೊಟ್ಟು ಪರಾರಿಯಾಗಿದ್ದಾನೆ. ಆ ನಂತರ ದೇವರಜೀವನಹಳ್ಳಿಗೆ ತೆರಳಿ ಆಶ್ರಯ ಪಡೆದಿರುವುವ ಮಾಹಿತಿ ಲಭ್ಯವಾಗಿವೆ. ಶೀಘ್ರದಲ್ಲಿಯೇ ಇರ್ಫಾನ್ ಪಾಷಾನನ್ನು ಬಂಧಿಸುವುದಾಗಿ ಪೊಲೀಸ್ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇಡೀ ಪ್ರಕರಣಕ್ಕೆ ಇರ್ಫಾನ್ ಕಿಂಗ್​ಪಿನ್ ಎಂಬುದು ದೃಢವಾಗಿದೆ. ಆತ ಸಿಕ್ಕ ಮೇಲೆ ತನಿಖೆಯ ವಿಸ್ತಾರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಇದೊಂದು ರಾಜಕೀಯ ಲಾಭಕ್ಕಾಗಿ ಸ್ಥಳೀಯರಿಗೆ ಪ್ರಚೋದನೆ ಕೊಟ್ಟು ಮಾಡಿರುವುದು ಎಂಬುದು ತನಿಖೆ ವೇಳೆ ಖಚಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಮನಗರ ಜೈಲಿನಲ್ಲಿ ಕಿಡಿಗೇಡಿಗಳು ಕ್ವಾರಂಟೈನ್
ಪಾದರಾಯನಪುರ ಗಲಭೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳಿಗೆ ಕೋವಿಡ್-19 ಪರೀಕ್ಷೆ ನಡೆಸಿ ರಾಮನಗರ ಜಿಲ್ಲಾ ಕಾರಾಗೃಹದಲ್ಲಿ ಸ್ಥಳಾಂತರಿಸಿ ಕ್ವಾರಂಟೈನ್ ಮಾಡಲಾಗಿದೆ. ಮಂಗಳವಾರ 50 ಮಂದಿಯನ್ನು ಜೈಲಿಗೆ ರವಾನಿಸಲಾಗಿತ್ತು. ಉಳಿದ 72 ಮಂದಿಯನ್ನು 3ನೇ ಎಸಿಎಂಎಂ ನ್ಯಾಯಾಲಯಕ್ಕೆ ಬುಧವಾರ ಹಾಜರುಪಡಿಸಲಾಗಿತ್ತು. ಬಳಿಕ ಕರೊನಾ ಪರೀಕ್ಷೆ ನಡೆಸಿ ರಾಮನಗರ ಜಿಲ್ಲಾ ಕಾರಾಗೃಹಕ್ಕೆ ರವಾನಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಗ್ಯ ಸಿಬ್ಬಂದಿಗೆ ಪೊಲೀಸ್ ಭದ್ರತೆ
ಪಾದರಾಯನಪುರ ಮತ್ತು ಬಾಪೂಜಿನಗರದಲ್ಲಿ ಆರೋಗ್ಯ ಸರ್ವೆ ಮಾಡಲು ಹೋಗುವ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಗೆ ಪೊಲೀಸರ ಭದ್ರತೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರ ಜತೆಗೆ ಮೂರ್ನಾಲ್ಕು ಪೊಲೀಸರು ತೆರಳಿ ಮನೆ ಮನೆ ಸರ್ವೆ ಕಾರ್ಯ ನಡೆಸುತ್ತಿದ್ದಾರೆ.ಬೆಂಗ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 19 =
Remember me
