ಬೆಂಗಳೂರು:ಪಾದರಾಯನಪುರ ಗಲಭೆ ಆರೋಪಿಗಳಲ್ಲಿ ಐವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಆರೋಪಿಗಳಿಗೆ ಕರೊನಾ ತಗುಲಿರುವ ಬೆನ್ನಲ್ಲೇ ಅಂದು ಕಾರ್ಯಾಚರಣೆ ನಡೆಸಿದ ಪೊಲೀಸರಲ್ಲೂ ಆತಂಕ ಶುರುವಾಗಿದೆ.
ಪಾದರಾಯನಪುರ ಆರೋಪಿಗಳ ಬಂಧನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಸುಮಾರು 186 ಪೊಲೀಸರಿಗೆ ಕ್ವಾರಂಟೈನ್​ ಮಾಡಲಾಗಿದೆ. ಇಷ್ಟೆಲ್ಲದರ ಮಧ್ಯೆ ಗಲಭೆ ಪ್ರಕರಣ ಪ್ರಮುಖ ಆರೋಪಿ ಪತ್ತೆಯಾಗದೆ ಇರುವುದು ಇನ್ನೊಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕರೊನಾ ಆತಂಕದ ನಡುವೆಯೂ ಕೆಎಫ್​ಡಿ ಇರ್ಫಾನ್​ಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಇರ್ಫಾನ್​ ಜತೆಗೆ ಇನ್ನೂ ಒಂದಷ್ಟು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 126 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇರ್ಫಾನ್​ ಮತ್ತವನ ಗ್ಯಾಂಗ್ ಮೊಬೈಲ್​ಗಳನ್ನೆಲ್ಲ ಸ್ವಿಚ್​​ ಆಫ್​ ಮಾಡಿಕೊಂಡು ನಾಪತ್ತೆಯಾಗಿದೆ. ಸ್ಥಳೀಯರಿಂದಲೂ ಅವರ ಬಗ್ಗೆ ಮಾಹಿತಿ ಸಿಗುತ್ತಿಲ್ಲ. (ದಿಗ್ವಿಜಯ ನ್ಯೂಸ್​)
ವೈದ್ಯರ ಮಹಾ ಎಡವಟ್ಟು; ಯುವತಿಯೋರ್ವಳಿಗೆ ಶಸ್ತ್ರಚಿಕಿತ್ಸೆ ಮಾಡಿದರು..ಹೊಟ್ಟೆಯೊಳಗೆ ಈ ವಸ್ತುವನ್ನೇ ಬಿಟ್ಟರು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + three =
Remember me
