ಬೆಂಗಳೂರು:ದೇಶದ ಮೂರನೇ ಎರಡು ಜನಸಂಖ್ಯೆಯ ಪ್ರಮುಖ ಆಹಾರವಾದ ಅಕ್ಕಿ ಬೆಳೆಯುವ ರೈತನಿಗೆ ಒಂದೆಡೆ ಸರ್ಕಾರಗಳು ಘೋಷಿಸುವ ‘ಬೆಂಬಲ ಬೆಲೆ’ ಗೊಂದಲದ ಬಲೆಯಾಗಿ ಕಾಡುತ್ತಿದ್ದರೆ, ಮತ್ತೊಂದೆಡೆ ಜಾಗತಿಕ ತಾಪಮಾನ ಏರಿಕೆಯ ಬಿಸಿ ಶಾಪವಾಗಿ ಪರಿಣಮಿಸಲಾರಂಭಿಸಿದೆ. ಸರ್ಕಾರ ನಿಗದಿಪಡಿಸುವ ಕನಿಷ್ಠ ಬೆಂಬಲ ಬೆಲೆಯ (ಎಂಎಸ್​ಪಿ) ಅನುಷ್ಠಾನ ಕೂಡ ಸಂಪೂರ್ಣ ಅವೈಜ್ಞಾನಿಕವಾಗಿದೆ. ಬಹುತೇಕ ಉತ್ತರ ಭಾರತದ ಅಕ್ಕಿ ತಳಿಗಳನ್ನು ಆಧಾರವಾಗಿಟ್ಟುಕೊಂಡು ರೂಪಿತ ವಾಗುವ ಮಾನದಂಡ ಅನುಸರಿಸಿ ಎಂಎಸ್​ಪಿ ಪಡೆಯುವುದಕ್ಕಿಂತ ನೂರಿನ್ನೂರು ರೂ. ಕಡಿಮೆ ದುಡ್ಡಿಗೇ ರೈತರು ಬೆಳೆಗಳನ್ನು ಮಧ್ಯವರ್ತಿಗಳಿಗೆ ಮಾರಿಕೊಳ್ಳುತ್ತಿದ್ದಾರೆ. ರೈತರ ಬೆಂಬಲಕ್ಕೆಂದು ರೂಪಿತವಾದ ಎಪಿಎಂಸಿ ವ್ಯವಸ್ಥೆ ಮೇಲೆ ಬಹುತೇಕ ಭತ್ತದ ರೈತರಿಗೆ ವಿಶ್ವಾಸವಿಲ್ಲ. ಹೀಗಾಗಿ ಎಂಎಸ್​ಪಿ ಬದಲಿಗೆ ಶಾಸನಾತ್ಮಕ ಕನಿಷ್ಠ ದರ (ಎಸ್​ಎಂಪಿ) ನೀಡಿದರೆ ಸ್ವಲ್ಪ ನಿರಾಳವಾಗುವ ಅಂದಾಜಿದೆ.
ಹವಾಮಾನ ಸವಾಲು:ಮಾರುಕಟ್ಟೆ ದರದ ಏರುಪೇರಿನ ಜತೆಯಲ್ಲೇ ಜಾಗತಿಕ ತಾಪಮಾನ ರೈತರನ್ನು ಹೈರಾಣಾಗಿಸಿದೆ.
ಜುಲೈನಲ್ಲಿ ಭತ್ತದ ಬಿತ್ತನೆ ಆಗುವುದು ವಾಡಿಕೆ. ಆದರೆ ಮುಂಗಾರು ಆಗಮನ ವ್ಯತ್ಯಯದಿಂದಾಗಿ ತಡವಾಗಿ ಮಳೆ ಬರುತ್ತಿರುವುದರಿಂದ ಜಲಾಶಯದ ನೀರು ಲಭಿಸುವುದೂ ವಿಳಂಬವಾಗುತ್ತಿದೆ. ಹೀಗಾಗಿ ಬಿತ್ತನೆ ಜುಲೈ ಬದಲಿಗೆ ಸೆಪ್ಟೆಂಬರ್​ವರೆಗೆ ಹೋಗಿದೆ. ಈ ಸಮಯದಲ್ಲಿ ಬಿತ್ತನೆ ಆದರೆ ಚಳಿಗಾಲದಲ್ಲಿ ಹೂ ಬಿಡುತ್ತದೆ. ಇಳುವರಿಯಲ್ಲಿ ಭಾರೀ ಕಡಿತವಾಗುತ್ತಿದೆ ಎಂದು ಟಿ. ನರಸೀಪುರದ ರೈತ ಎಚ್.ಕೆ. ಮಹದೇವಯ್ಯ ತಿಳಿಸುತ್ತಾರೆ.
ನಾಲಾ ಪ್ರದೇಶದಲ್ಲಿ ಭತ್ತ ಬಿಟ್ಟರೆ ಬೇರೆಡೆ ಹೊರಳಲು ಸಾಧ್ಯವಿಲ್ಲದ ಕಾರಣಕ್ಕೆ ಹಾಗೂ ಅದೊಂದೇ ಬೆಳೆ ಬೆಳೆದು ಅಭ್ಯಾಸವಾಗಿರುವುದರಿಂದ ರತರು ಇನ್ನೂ ಭತ್ತ ಬೆಳೆಯುತ್ತಿದ್ದಾರೆಯೇ ಹೊರತು ಸಂಕಟಗಳೇ ಹೆಚ್ಚು ಕಾಣಿಸುತ್ತಿವೆ ಎನ್ನುವುದು ರಾಯಚೂರಿನ ರೈತ ಅಮರೇಶ್ ಸಜ್ಜನ್ ಅಭಿಪ್ರಾಯ.
ಏನಾದರೆ ಉಪಯೋಗ?
ಕನಿಷ್ಠ ಬೆಂಬಲ ಬೆಲೆ ಎಂಬುದು ಹೆಸರಿಗಷ್ಟೇ ಸೀಮಿತ, ಅದಕ್ಕೆ ಶಾಸನಾತ್ಮಕ ರೂಪ ಕೊಟ್ಟರಷ್ಟೇ ರೈತರಿಗೆ ಉಪಯೋಗ ಎಂಬ ಅಭಿಪ್ರಾಯವಿದೆ. ಎಂಎಸ್​ಪಿ ಬದಲಿಗೆ ಎಸ್​ಎಂಪಿ ಅನುಷ್ಠಾನ ಮಾಡಬೇಕು. ಈ ದರಕ್ಕಿಂತ ಕಡಿಮೆಗೆ ಯಾರೂ ಕೊಳ್ಳುವಂತೆಯೇ ಇರಬಾರದು. ಆಗ ರೈತರಿಗೆ ಅಲ್ಪ ಸಹಕಾರವಾದರೂ ಸಿಗುತ್ತದೆ ಎನ್ನುವ ವಾದಕ್ಕೆ ಮತ್ತಷ್ಟು ಬಲ ಸಿಗಬೇಕಿದೆ.
ರೈತರ ಸಂಕಷ್ಟ
ಎಂಎಸ್​ಪಿ ಮಾನದಂಡ
ಪ್ರತಿ ಕ್ವಿಂಟಾಲ್ ಭತ್ತ ಬೆಳೆಯಲು 2 ಸಾವಿರ ರೂ. ವೆಚ್ಚವಾಗುತ್ತಿರುವಾಗ 1,800 ರೂ. ಆಸುಪಾಸಿನ ಎಂಎಸ್​ಪಿ ನಿಗದಿಪಡಿಸುವುದೇ ಪ್ರಶ್ನಾರ್ಹ. ಆ ದರ ಪಡೆಯಲು ವಿಧಿಸಿರುವ ಮಾನದಂಡ ಕಂಡ ರೈತರು ಸರ್ಕಾರದ ಸಹವಾಸವೇ ಬೇಡ ಎಂದು ದೂರ ಉಳಿಯುತ್ತಿದ್ದಾರೆ. ‘ಬೆಂಬಲ ಬೆಲೆ ಎಂಬುದೇ ನಾಟಕ. ಸ್ವಲ್ಪ ಹಸಿಯಿದ್ದರೆ ಪಡೆಯುವುದಿಲ್ಲ ಎಂಬುದೂ ಸೇರಿ ಅನೇಕ ಕಾರಣಕ್ಕಾಗಿ ಸ್ಥಳೀಯ ದಲ್ಲಾಳಿಗೆ ಬೆಂಬಲ ಬೆಲೆಗಿಂತಲೂ 200-400 ರೂ. ಕಡಿಮೆಗೆ ಮಾರುತ್ತೇವೆ’ ಎನ್ನುತ್ತಾರೆ ಟಿ. ನರಸೀಪುರದ ರೈತ ಸಿ. ಹೊನ್ನಯ್ಯ.
| ರಮೇಶ ದೊಡ್ಡಪುರ
ಅಕ್ಕಿ ಕೊರತೆ ಭವಿಷ್ಯದ್ದೇ ಚಿಂತೆ: ಕೃಷಿಯಿಂದ ರೈತರು ವಿಮುಖ, ಭತ್ತ ಬೆಳೆಯುವ ಪ್ರದೇಶ ಕುಂಠಿತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 8 =
Remember me
