ಮಂಗಳೂರು:ಕಿತ್ತಳೆ ಹಣ್ಣು ಮಾರಾಟದಿಂದ ಗಳಿಸಿದ ಹಣದಲ್ಲಿ ಶಾಲೆ ನಿರ್ಮಿಸಿರುವ ಹರೇಕಳ ಹಾಜಬ್ಬ ಅವರು ಈ ಬಾರಿಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.
ಆದರೆ ಈಗ ಪದ್ಮಶ್ರೀ ಹರೇಕಳ ಹಾಜಬ್ಬ ಅವರ ಹೆಸರನ್ನು ಪೌರತ್ವ ಕಾಯ್ದೆ ವಿರೋಧಿ ಹೋರಾಟಗಾರರು ತಮ್ಮ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನಾಳೆ ಉಡುಪಿಯ ಐಷಾರಾಮಿ ಹೋಟೆಲ್​ವೊಂದರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಕಾರ್ಯಕ್ರಮ ನಡೆಯಲಿದ್ದು ಅದನ್ನು ಹರೇಕಳ ಹಾಜಬ್ಬ ಅವರ ಕೈಯಿಂದ ಉದ್ಘಾಟನೆ ಮಾಡಿಸಲು ಆಯೋಜಕರು ಮುಂದಾಗಿದ್ದಾಗಿದ್ದಾರೆ. ಅಲ್ಲದೆ ಈ ಕಾರ್ಯಕ್ರಮ ಏನು, ಎತ್ತ ಎಂಬ ಬಗ್ಗೆ ಹಾಜಬ್ಬ ಅವರಿಗೆ ತಿಳಿಸಿಲ್ಲ. ತಪ್ಪು ಮಾಹಿತಿ ನೀಡಿ ಆಮಂತ್ರಣ ನೀಡಿದ್ದಾರೆ ಎನ್ನಲಾಗಿದೆ. ಇದು ಹಲವರ ವಿರೋಧಕ್ಕೆ ಕಾರಣವಾಗಿದೆ.
ಈ ಬಗ್ಗೆ ಹರೇಕಳ ಹಾಜಬ್ಬನವರ ಬಳಿ ಕೇಳಿದಾಗ, ಕಾರ್ಯಕ್ರಮದ ಉದ್ದೇಶ ನನಗೆ ಗೊತ್ತಿಲ್ಲ ಎಂದಿದ್ದಾರೆ.ಇನ್ನು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಕಾರ್ಯಕ್ರಮ ಉದ್ಘಾಟಿಸಲು ಹಾಜಬ್ಬ ಅವರನ್ನು ಆಯೋಜಕರು ಆಹ್ವಾನಿಸಿರುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಅನ್ಸಾರ್​ ಅಹಮ್ಮದ್​ ಹೇಳಿಕೆ ನೀಡಿದ್ದಾರೆ.
ಹಾಜಬ್ಬ ಜಾತಿ-ಮತ ಮೀರಿ ಬೆಳೆದಿರುವ ದಾರ್ಶನಿಕ. ಅವರನ್ನು ಎಲ್ಲ ವರ್ಗದ ಜನರೂ ಪ್ರೀತಿಸುತ್ತಾರೆ. ಈ ಕಾರ್ಯಕ್ರಮ ಅವರ ವ್ಯಕ್ತಿತ್ವಕ್ಕೇ ಮಸಿ ಬಳಿಯಲಿದೆ. ಇವರನ್ನೂ ಜನರು ದ್ವೇಷಿಸಲು ಪ್ರಾರಂಭಿಸುತ್ತಾರೆ. ಆಯೋಜಕರು ತಮಗೆ ಪ್ರಚಾರ ಬೇಕು ಎಂದು ಹಾಜಬ್ಬ ಅವರ ವ್ಯಕ್ತಿತ್ವವನ್ನು ಹಾಳು ಮಾಡುವುದು ಸರಿಯಲ್ಲ ಎಂದಿದ್ದಾರೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 12 =
Remember me
