ಉಡುಪಿ:ಕಾಂತಾರ ಸಿನಿಮಾದಲ್ಲಿ ದೈವದ ಮಾತನ್ನು ಧಿಕ್ಕರಿಸಿ ಭೂಮಿಗಾಗಿ ಕೋರ್ಟ್​ಗೆ ಹೋಗುವುದಾಗಿ ಹೇಳಿದ್ದವ, ಕೋರ್ಟ್​ನ ಮೆಟ್ಟಿಲ ಬಳಿಯೇ ರಕ್ತಕಾರಿ ಸತ್ತ ದೃಶ್ಯ ಇದೆ. ಇದು ದೇವರೇ ಕೊಟ್ಟ ಶಿಕ್ಷೆ ಎಂಬುದು ಈ ಸಿನಿಮಾ ನೋಡಿದವರ ಪ್ರತಿಯೊಬ್ಬರ ಮನದಲ್ಲೂ ಇದೆ. ಇಂತಹದ್ದೇ ನೈಜ ಘಟನೆಯೊಂದು ಉಡುಪಿಯಲ್ಲಿ ಸಂಭವಿಸಿದೆಯಂತೆ! ಕೋಲ ವಿಚಾರಕ್ಕೆ ಕೋರ್ಟ್ ಮೆಟ್ಟಿಲೇರಿದವ ಹೆಣವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಉಡುಪಿ ಜಿಲ್ಲೆ ಪಡುಬಿದ್ರೆ ತಾಲೂಕಿನ ಪಡುಹಿತ್ಲು ಬಳಿ ಕಳೆದ ಡಿ‌.24ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪಡುಬಿದ್ರೆಯ ಪಡುಹಿತ್ಲು ಜಾರಂದಾಯ ದೈವಸ್ಥಾನ ಊರ ಸಮಸ್ತರಿಗೆ ಭಕ್ತಿ ಮತ್ತು ನಂಬಿಕೆಯ ಕೇಂದ್ರ. ಇಲ್ಲಿ ವರ್ಷಕ್ಕೊಮ್ಮೆ ನಡೆಯುವ ನೇಮೋತ್ಸವದಲ್ಲಿ ಸಹಸ್ರಾರು ಜನರು ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಈ ದೈವಸ್ಥಾನ ನೋಡಿಕೊಳ್ಳಲು ಪಡ್ಲುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿ ಇದೆ. ಈ ಸಮಿತಿಗೆ ಪ್ರಕಾಶ್​ ಶೆಟ್ಟಿ ಅಧ್ಯಕ್ಷರಾಗಿದ್ದರು. ಸಮಿತಿ ಬದಲಾದ ಬಳಿಕ ಅಧ್ಯಕ್ಷ ಸ್ಥಾನದಿಂದ ಪ್ರಕಾಶ್​ ಶೆಟ್ಟಿ ಕೆಳಗಿಳಿಯಬೇಕಾಯಿತು. ಅಸಮಾಧಾನಗೊಂಡ ಪ್ರಕಾಶ್​, ಪ್ರತ್ಯೇಕ ಟ್ರಸ್ಟ್​ ರಚಿಸಿದ್ದು ಮಾತ್ರವಲ್ಲ, ದೈವಸ್ಥಾನ ಮನೆಯ ಗುರಿಕಾರ ಜಯಪೂಜಾರಿ ಎಂಬುವವರನ್ನ ಅಧ್ಯಕ್ಷರನ್ನಾಗಿ ಮಾಡಿದ್ದರು. ಜಾರಂದಾಯ ದೈವಸ್ಥಾನ ನಮಗೆ ಸೇರಿದ್ದು ಎಂದು ಜಯಪೂಜಾರಿ ಮೂಲಕ ಹಕ್ಕು ಸ್ಥಾಪನೆಗೆ ಯತ್ನಿಸಿದ್ದರು. ಜಯಾಕ್ಷ ಸುವರ್ಣ ಎಂಬುವವರ ಮನೆ ಜಾರಂದಾಯ ದೈವದ ಬಂಡಾರದ ಮನೆ. ಈ ಮನೆಗೆ ನೂರಾರು ವರ್ಷಗಳ ಇತಿಹಾಸವಿದೆ. ಈ ಕುಟುಂಬಕ್ಕೆ ಸೇರಿದವರು ಜಯಾಪೂಜಾರಿ.
ಅತ್ತ ಪ್ರತಿ ವರ್ಷದಂತೆ ಈ ವರ್ಷವೂ ನೇಮೋತ್ಸವ ನಡೆಸಲು ನಿರ್ಧರಿಸಿದ ಪಡ್ಲುಹಿತ್ಲು ಜಾರಂದಾಯ ಬಂಟ ಸೇವಾ ಸಮಿತಿಯು ಇದೇ ಜನವರಿ 7ರಂದು ಕೋಲ ನಡೆಸಲು ಸಜ್ಜಾಗಿತ್ತು. ಇದರ ವಿರುದ್ಧ ಕೋರ್ಟ್​ ಮೆಟ್ಟಿಲೇರಿದ್ದ ಪ್ರಕಾಶ್​ ಶೆಟ್ಟಿ ಮತ್ತು ಜಯಪೂಜಾರಿ ಇಬ್ಬರೂ, ದೈವಕೋಲವನ್ನು ಟ್ರಸ್ಟ್​ನಿಂದ ನಡೆಸುತ್ತೇವೆ ಎಂದು ಜ.7ರಂದು ನಡೆಯಬೇಕಿದ್ದ ಕೋಲಕ್ಕೆ ಡಿ.23ರಂದು ತಡೆಯಾಜ್ಞೆ ತಂದಿದ್ದರು. ಇದಾದ ಮರುದಿನವೇ ಅಂದರೆ ಡಿ.24ರಂದು ಪಕ್ಕದ ಕೊಡಮಣಿತ್ತಾಯ ದೈವಕೋಲಕ್ಕೆ ಜಯಪೂಜಾರಿ ತಂಡ ತೆರಳಿತ್ತು. ಕೊಡಮಣಿತ್ತಾಯ ದೈವಕೋಲ ನಡೆಯುವಾಗಲೇ ಕುಸಿದು ಬಿದ್ದು ಜಯಪೂಜಾರಿ ಮೃತಪಟ್ಟಿದ್ದಾರೆ. ‘ಕೊಡಮಣಿತ್ತಾಯ ದೈವಕೋಲದಲ್ಲಿ ಟ್ರಸ್ಟ್ ವಿಚಾರ ಪ್ರಸ್ತಾಪಿಸಿದ ಬಳಿಕ ಕುಸಿದು ಬಿದ್ದು ಜಯಪೂಜಾರಿ ಮೃತಪಟ್ಟಿದ್ದಾರೆ’ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮಂಗಳಮುಖಿಯಾಗಿ ಲಿಂಗಪರಿವರ್ತನೆ ಮಾಡಿಸಿಕೊಂಡ ಬಂಟ್ವಾಳ ಮೂಲದ ಮುಸ್ಲಿಂ ಯುವಕ! ಆಡಿಯೋ ವೈರಲ್​ ಬೆನ್ನಲ್ಲೇ ಆಘಾತಕಾರಿ ವಿಷಯ ಚರ್ಚೆ

ಕುಣಿಗಲ್​ ಸ್ಟಡ್​ ಫಾರಂನಲ್ಲಿ ದುರಂತ: ಹೆಜ್ಜೇನು ದಾಳಿಗೆ ಕೋಟ್ಯಂತರ ಬೆಲೆಬಾಳುವ ವಿದೇಶಿ ತಳಿಯ 2 ಕುದುರೆಗಳ ಸಾವು

‘ಯಾವನ್ಲಾ ನೀನು? ತಿ* ಮುಚ್ಕಂಡು ಫೈಲ್ ತಗೋ ಬಾ…’ ಜನರ ಎದುರೇ ಅಧಿಕಾರಿಗೆ ಬೈದ ಸೋಮಣ್ಣ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + five =
Remember me
