ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಭಾರತದ ವಿವಿಧೆಡೆ ರೈಲು ಹಳಿ, ಗ್ಯಾಸ್ ಪೈಪ್​ಲೈನ್​ಗಳ ಮೇಲೆ ಸ್ಲೀಪರ್ ಸೆಲ್​ಗಳ ಮೂಲಕ ದಾಳಿ ನಡೆಸುವುದಾಗಿ ಪಾಕಿಸ್ತಾನಿ ಉಗ್ರನೊಬ್ಬ ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ. ಫರ್ಹತುಲ್ಲಾ ಘೋರಿ ಎಂಬ ಉಗ್ರ ಈ ಬೆದರಿಕೆ ಒಡ್ಡಿದ್ದು, ಈತನೇ ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಸಂಚುಕೋರ ಎನ್ನಲಾಗುತ್ತಿದೆ. ಆದರೆ, ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಈ ವಿಚಾರ ಖಚಿತಪಡಿಸಿಲ್ಲ. ಆದರೂ, ಟೆಲಿಗ್ರಾಂನಲ್ಲಿ ಬಿಡುಗಡೆಯಾಗಿರುವ 3 ನಿಮಿಷಗಳ ವಿಡಿಯೋ ಕುರಿತು ಎನ್​ಐಎ ಹೈಅಲರ್ಟ್ ಆಗಿರುವುದಾಗಿ ತಿಳಿದು ಬಂದಿದೆ. ಮುಂಬೈ, ದೆಹಲಿ ಸೇರಿ ಮಹಾನಗರಗಳಲ್ಲಿ ರೈಲ್ವೆ ಸಂಪರ್ಕವನ್ನು ಹಳಿತಪ್ಪಿಸಲು ಘೋರಿ ವಿಡಿಯೋದಲ್ಲಿ ಸ್ಲೀಪರ್ ಸೆಲ್​ಗಳಿಗೆ ಕರೆ ಕೊಟ್ಟಿದ್ದಾನೆ.
ಆಸ್ತಿ ಟಾರ್ಗೆಟ್ ಸಿಟ್ಟು:ಭಾರತ ಸರ್ಕಾರ ಜಾರಿ ನಿರ್ದೇಶನಾಲಯ ಮತ್ತು ರಾಷ್ಟ್ರೀಯ ಗುಪ್ತಚರ ಸಂಸ್ಥೆ ಮೂಲಕ ಸ್ಲೀಪರ್ ಸೆಲ್​ಗಳ ಆಸ್ತಿ ದುರ್ಬಲಗೊಳಿಸುತ್ತಿದೆ. ಹೀಗಾಗಿ ರೈಲುಗಳು ಅಲ್ಲದೆ ಭಾರತದ ಪೆಟ್ರೋಲಿಯಂ ಪೈಪ್​ಲೈನ್​ಗಳನ್ನು ನಾಶ ಮಾಡಬೇಕು. ಈ ಮೂಲಕ ಭಾರತ ಸರ್ಕಾರವನ್ನು ಅಲುಗಾಡಿಸಬೇಕು ಎಂದು ಘೋರಿ ಹೇಳಿದ್ದಾನೆ. ಬೆದರಿಕೆ ವಿಡಿಯೋ 3 ವಾರಗಳ ಹಿಂದೆ ಟೆಲಿಗ್ರಾಮ್ಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಗುಪ್ತಚರ ಸಂಸ್ಥೆಗಳ ಮೂಲಗಳು ತಿಳಿಸಿವೆ.
ಬೆಂಗಳೂರು ಸ್ಫೋಟ ನಂಟು:ಮಾ.1ರಂದು ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಘೋರಿಯ ಪಾತ್ರ ಇರುವ ಬಗ್ಗೆ ಎನ್​ಐಎ ಅಧಿಕಾರಿಗಳು ಖಚಿತ ಪಡಿಸಿಲ್ಲ. ಈಗಾಗಲೇ ಈ ಪ್ರಕರಣ ಸಂಬಂಧ ಏ.12ರಂದು ಪಶ್ಚಿಮ ಬಂಗಾಳದಲ್ಲಿ ಪ್ರಮುಖ ಆರೋಪಿಗಳಾದ ಅಬ್ದುಲ್ ಮಥೀನ್ ಅಹ್ಮದ್ ತಾಹಾ ಮತ್ತು ಮುಸ್ಸಾವಿರ್ ಹುಸೇನ್ ಶಾಜಿಬ್ ಎಂಬುವರನ್ನು ಬಂಧಿಸಿದ್ದಾರೆ. ಆದರೆ, ಫರ್ಹತುಲ್ಲಾ ಘೋರಿ ಅಳಿಯ ದಕ್ಷಿಣ ಭಾರತದಲ್ಲಿ ಸ್ಲೀಪರ್ ಸೆಲ್​ಗಳ ಸಂಪರ್ಕ ಹೊಂದಿದ್ದಾನೆ. ಈ ವಿಷಯ ಕಳೆದೊಂದು ವರ್ಷದ ಹಿಂದೆ ದೆಹಲಿ ಮತ್ತು ಉತ್ತರ ಪ್ರದೇಶದಿಂದ ಮೂವರು ವಾಂಟೆಡ್ ಉಗ್ರರನ್ನು ಬಂಧಿಸಿದಾಗ ಮಾಹಿತಿ ಬಹಿರಂಗವಾಗಿತ್ತು ಎನ್ನಲಾಗಿದೆ.
ಹಿಂದುಗಳೇ ಟಾರ್ಗೆಟ್:ವಿಡಿಯೋದಲ್ಲಿ ‘ಫಿದಾಯೀನ್ ಯುದ್ಧ’ ಸಾರಿರುವ ಘೋರಿ ಹಿಂದು ಮುಖಂಡರ ಮತ್ತು ಪೊಲೀಸರ ವಿರುದ್ಧ ಆತ್ಮಹುತಿ ದಾಳಿ ನಡೆಸುವ ಬೆದರಿಕೆ ಒಡ್ಡಿದ್ದಾನೆ. ಇತ್ತೀಚೆಗೆ ವಂದೇ ಭಾರತ್ ರೈಲು ಹಳಿತಪ್ಪಿಸುವ ಉದ್ದೇಶದಿಂದ ಆ.23 ಮತ್ತು 24ರಂದು ರೈಲು ಹಳಿಯ ಮೇಲೆ ಸಿಮೆಂಟ್ ಬ್ಲಾಕ್ ಇರಿಸಿದ್ದು ಬೆಳಕಿಗೆ ಬಂದಿತ್ತು.
ಯಾರು ಈ ಘೋರಿ?:ಅಬು ಸೂಫಿಯಾನ್, ಸರ್ದಾರ್ ಸಾಹಬ್ ಮತ್ತು ಫಾರೂ ಎಂದು ಕರೆಯುವ ಫರ್ಹತುಲ್ಲಾ ಘೊರಿ, 2002ರಲ್ಲಿ ಗುಜರಾತ್​ನ ಅಕ್ಷರಧಾಮ ದೇವಾಲಯದ ಮೇಲೆ ದಾಳಿ ನಡೆಸಿದ್ದ. ಜತೆಗೆ 2005ರಲ್ಲಿ ಹೈದರಾಬಾದ್​ನ ಟಾಸ್ಕ್ ಫೋರ್ಸ್ ಕಚೇರಿ ಮೇಲೆ ನಡೆದ ದಾಳಿಯಲ್ಲಿ ಈತನ ಕೈವಾಡ ಇರುವುದು ದೃಢಪಟ್ಟಿತ್ತು. ಅಲ್ಲದೆ, ಐಸಿಸ್ ಅನ್ನು ಭಾರತದಲ್ಲಿ ಬಲಗೊಳಿಸುವ ಸಲುವಾಗಿ ಅಮಾಯಕ ಮುಸ್ಲಿಂ ಯುವಕರಿಗೆ ಜಿಹಾದ್ ಬೋಧನೆ ಮಾಡಿ ಉಗ್ರ ಸಂಘಟನೆಗೆ ನೇಮಕ ಮಾಡುವಲ್ಲಿ ನಿರತನಾಗಿದ್ದಾನೆ.
ಕಾರವಾರ:ಭಾರತೀಯ ನೌಕಾಸೇನೆಯ ಮಾಹಿತಿಗಳನ್ನು ಶತ್ರು ರಾಷ್ಟ್ರಗಳಿಗೆ ಬಹಿರಂಗ ಮಾಡುತ್ತಿದ್ದ ಅನುಮಾನದ ಮೇಲೆ ರಾಷ್ಟ್ರೀಯ ತನಿಖಾ ದಳದ (ಎನ್​ಐಎ) ಅಧಿಕಾರಿಗಳು ಬುಧವಾರ ಕಾರವಾರ, ಅಂಕೋಲಾದ ಮೂವರನ್ನು ವಿಚಾರಣೆ ನಡೆಸಿ ಬಳಿಕ ನೋಟಿಸ್ ನೀಡಿ ಬಿಡುಗಡೆ ಮಾಡಿದ್ದಾರೆ.
ಬಳ್ಳಾರಿ ಜೈಲಿಗೆ ನಾಳೆ ನಟ ದರ್ಶನ್ ತೂಗದೀಪ, ಸಂಚಾರ ಮಾರ್ಗ ವಿವರ ಹೀಗಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − three =
Remember me
