ಬೆಂಗಳೂರು: ಪ್ರತಿಷ್ಠಿತ ‘ಪಂಪ ಪ್ರಶಸ್ತಿ’ ಪ್ರಕಟಗೊಂಡು ಆರು ತಿಂಗಳಾದರೂ, ಪುರಸ್ಕೃತರಿಗೆ ಪ್ರಶಸ್ತಿ ತಲುಪಿಸುವುದನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮರೆತು ಹೋಗಿದೆ.
ಪ್ರತಿ ಬಾರಿ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ನೀಡುವ ಸಂಪ್ರದಾಯವಿದ್ದು, ಕರೊನಾ ಕಾರಣದಿಂದ ಎರಡು ವರ್ಷ ಉತ್ಸವ ನಡೆದಿರಲಿಲ್ಲ. ಈ ಕಾರಣಕ್ಕೆ ಮೂರು ವರ್ಷಗಳ ಪ್ರಶಸ್ತಿಯನ್ನು ಒಟ್ಟಿಗೆ ೋಷಿಸಿ, 2020-21ನೇ ಸಾಲಿಗೆ ಮೈಸೂರಿನ ಪ್ರೊ.ಸಿ.ಪಿ.ಕೃಷ್ಣಕುಮಾರ್, 2021-22ನೇ ಸಾಲಿಗೆ ಬೆಂಗಳೂರಿನ ಬರಹಗಾರ ಡಾ.ಬಾಬು ಕೃಷ್ಣಮೂರ್ತಿ ಹಾಗೂ 2022-23ನೇ ಸಾಲಿಗೆ ಬೆಂಗಳೂರಿನ ಡಾ.ಎಸ್.ಆರ್.ರಾಮಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿತ್ತು.
ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ೆ.28ರಂದು ನಡೆದ ‘ಕಂದಂಬೋತ್ಸವ’ದಲ್ಲಿ ಪ್ರದಾನ ಮಾಡಬೇಕಿದ್ದ ‘ಪಂಪ ಪ್ರಶಸ್ತಿ’ಯನ್ನು ಹಿಂದಿನ ದಿನ (ೆ.27) ಪ್ರಕಟಿಸಲಾಗಿತ್ತು. ಕೊನೆ ಕ್ಷಣದಲ್ಲಿ ಪ್ರಶಸ್ತಿ ೋಷಿಸಿದ್ದರಿಂದ ಡಾ.ಬಾಬು ಕೃಷ್ಣಮೂರ್ತಿ ಮಾತ್ರ ಉತ್ಸವಕ್ಕೆ ತೆರಳಿ ಪ್ರಶಸ್ತಿ ಸ್ವೀಕರಿಸಿದ್ದರು. ಪ್ರೊ.ಸಿ.ಪಿ.ಕೃಷ್ಣಕುಮಾರ್ ಹಾಗೂ ಡಾ.ಎಸ್.ಆರ್.ರಾಮಸ್ವಾಮಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದರೆ ಈವರೆಗೂ ಈ ಇಬ್ಬರು ಸಾಧಕರಿಗೆ ಪ್ರಶಸ್ತಿ ತಲುಪಿಸಲು ಯಾವುದೇ ಕ್ರಮವನ್ನು ಇಲಾಖೆ ಕೈಗೊಂಡಿಲ್ಲ.
ಇಲಾಖೆ ಕ್ರಮಕ್ಕೆ ಆಕ್ಷೇಪ: ಉತ್ಸವಕ್ಕಿಂತ ಒಂದು ವಾರ ಮೊದಲು ಪ್ರಶಸ್ತಿ ೋಷಿಸಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಪ್ರಶಸ್ತಿ ೋಷಿಸಿದ್ದು ಸರಿಯಲ್ಲ ಎಂದು ಬನವಾಸಿ ತಾಲೂಕು ಹೋರಾಟ ಸಮಿತಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದೀಗ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದ ಪುರಸ್ಕೃತರಿಗೆ 6 ತಿಂಗಳಾದರೂ ಪ್ರಶಸ್ತಿ ತಲುಪಿಸದ ಇಲಾಖೆ ಕ್ರಮಕ್ಕೆ ಸಾಹಿತಿ ವಲಯ ಬೇಸರ ವ್ಯಕ್ತಪಡಿಸಿದೆ.
30ಕ್ಕೂ ಅಧಿಕ ಪ್ರಶಸ್ತಿ ಬಾಕಿ: ಅನುದಾನದ ಕೊರತೆಯಿಂದಾಗಿ ‘ಪಂಪ ಪ್ರಶಸ್ತಿ’ ಅಲ್ಲದೆ ಗುಬ್ಬಿ ವೀರಣ್ಣ ಪ್ರಶಸ್ತಿ, ಬಿ.ವಿ.ಕಾರಂತ ಪ್ರಶಸ್ತಿ ಸೇರಿ ಪ್ರಕಟಗೊಂಡಿರುವ 30ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪ್ರದಾನ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಬಾಕಿ ಇರುವ ಎಲ್ಲ ಪ್ರಶಸ್ತಿಗಳನ್ನು ಒಂದೇ ವೇದಿಕೆಯಲ್ಲಿ ಪ್ರದಾನ ಮಾಡಲು ಇಲಾಖೆ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಸಿದ್ಧತೆ ನಡೆಯುತ್ತಿದ್ದು, ಶೀಘ್ರದಲ್ಲೇ ದಿನಾಂಕ ಪ್ರಕಟಿಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪುರಸ್ಕೃತರ ಸೇವೆ, ಸಾಧನೆ ಆಧರಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಅದನ್ನು ನಿಗದಿತ ಅವಧಿಯೊಳಗೆ ತಲುಪಿಸುವ ಕಾರ್ಯ ಆಗಬೇಕು. ಈಗಾಗಲೆ ವಿಳಂಬವಾಗಿರುವ ಪಂಪ ಪ್ರಶಸ್ತಿ ಸೇರಿ ಇತರ ಪ್ರಶಸ್ತಿಗಳನ್ನು ತುರ್ತಾಗಿ ಪ್ರದಾನ ಮಾಡುವ ಮೂಲಕ ಸರ್ಕಾರ ಸಾಂಸ್ಕೃತಿಕ ಜವಾಬ್ದಾರಿ ಮೆರೆಯಲಿ. ಡಾ.ಜಿ.ಬಿ.ಹರೀಶ್, ಅಧ್ಯಕ್ಷರು, ಪಂಪ ಪ್ರಶಸ್ತಿ ಆಯ್ಕೆ ಸಮಿತಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
