ಬೆಂಗಳೂರು:ಪೆನೇಶಿಯಾ ನ್ಯಾಚುರಲ್​ ಪ್ರಾಡಕ್ಟ್ಸ್ ಎಕ್ಸ್​ಪೋ ಇಂಡಿಯಾ ಬೆಂಗಳೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ (ಜಿಕೆವಿಕೆ) ಮೇ 6ರಿಂದ 8ರವರೆಗೆ ನಡೆಯಲಿದೆ. ನೈಸರ್ಗಿಕ, ಸಾವಯವ ಮತ್ತು ಆರೋಗ್ಯ ಉತ್ಪನ್ನಗಳ ಮೇಲಿನ ಭಾರತದ ಏಕೈಕ ವ್ಯಾಪಾರ ಪ್ರದರ್ಶನ ಇದಾಗಿದೆ.
20 ವರ್ಷಗಳಿಂದ ಮುಂಬೈಯಲ್ಲಿ ಆಯೋಜಿತವಾಗುತ್ತಿತ್ತು. ದೇಶಾದ್ಯಂತ ನೈಸರ್ಗಿಕ ಮತ್ತು ಸಾವಯವ ವಿವಿಧ ವಲಯಗಳಲ್ಲಿ ವ್ಯವಹರಿಸುವ ಸಾವಿರಾರು ಉದ್ಯಮದ ಗೆಳೆಯರೊಂದಿಗೆ ನೆಟ್​ವರ್ಕ್​ ಮಾಡಲು ಮತ್ತು ಸಂವಹನ ನಡೆಸಲು ಇದೊಂದು ಉತ್ತಮ ವೇದಿಕೆಯಾಗಲಿದೆ.
ನೈಸರ್ಗಿಕ ಮತ್ತು ಸಾವಯವ ಉತ್ಪನ್ನಗಳ ಕೃಷಿ ಮತ್ತು ಪ್ರಚಾರವನ್ನು ದೊಡ್ಡ ರೀತಿಯಲ್ಲಿ ಪ್ರೋತ್ಸಾಹಿಸುತ್ತಿರುವ ಪ್ರಮುಖ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ದೇಶದ ತಲಾ ಆದಾಯವು ಶೇ.10-11 ಬೆಳವಣಿಗೆಯಾಗುತ್ತಿರುವ ಪರಿಣಾಮ ಹೂಡಿಕೆದಾರರಿಗೆ ಆಕರ್ಷಕ ಮಾರುಕಟ್ಟೆಯಾಗಿದೆ. ಅಪಾರ ಜನಸಂಖ್ಯೆ, ಮುಕ್ತ ಮತ್ತು ನ್ಯಾಯಸಮ್ಮತ ವ್ಯಾಪಾರ ನೀತಿಗಳು “ನ್ಯಾಚುರಲ್ಸ್​’ ಕಡೆಗೆ ಒಂದು ಮಾದರಿ ಬದಲಾವಣೆಯನ್ನು ದಾಖಲಿಸುತ್ತಿವೆ.
ಎಲ್ಲ ನೈಸರ್ಗಿಕ ಪದಾರ್ಥಗಳು, ಸಾವಯವ ಮತ್ತು ಆರೋಗ್ಯ ಉತ್ಪನ್ನಗಳಿಗೆ ಅತ್ಯಂತ ಭರವಸೆಯ ಮಾರುಕಟ್ಟೆಯನ್ನು ಒದಗಿಸಲಾಗುತ್ತದೆ. ಈ ಉದ್ಯಮದ ಅಭಿವೃದ್ಧಿಯು ಸಹ ಅದ್ಭುತವಾಗಿದೆ.
ನ್ಯಾಚುರಲ್​ ಪ್ರಾಡಕ್ಟ್ಸ್ಎಕ್ಸ್​ಪೋ ಇಂಡಿಯಾ, ಉದಯೋನ್ಮುಖ ಮಾರುಕಟ್ಟೆಯ ಅಗತ್ಯಗಳನ್ನು ಪೂರೈಸುವ ಏಕೈಕ ವೇದಿಕೆಯಾಗಿದೆ. ಇದು ದಣ ಏಷ್ಯಾದ್ಯಂತ ಅತ್ಯುತ್ತಮ ಫಲಿತಾಂಶಗಳನ್ನು ಮತ್ತು ಮಾರುಕಟ್ಟೆಯ ಮಾನ್ಯತೆಯನ್ನು ಒದಗಿಸುತ್ತದೆ.
ಪ್ರತಿ 2 ವರ್ಷಗಳಿಗೊಮ್ಮೆ ಸಾವಿರಾರು ಉದ್ಯಮ ವೃತ್ತಿಪರರು ಮತ್ತು ಖರೀದಿದಾರರು ನ್ಯಾಚುರಲ್​ ಪ್ರಾಡಕ್ಟ್ಸ್ ಎಕ್ಸ್​ಪೋ ಇಂಡಿಯಾದಲ್ಲಿ ಭಾಗಿಯಾಗಿ ಹಲವು ಪ್ರಯೋಜನಗಳನ್ನು ಪಡೆದಿದ್ದಾರೆ. ಉದ್ಯಮದ ಪ್ರವೃತ್ತಿಗಳು ಮತ್ತು ಅಭ್ಯಾಸಗಳನ್ನು ವಿಶ್ಲೇಷಿಸಲು ತಮ್ಮ ವ್ಯಾಪಾರವನ್ನು ಹೆಚ್ಚಿಸಲು ಈ ಎಕ್ಸ್​ಪೋದಲ್ಲಿ ಭಾಗಿಯಾಗುತ್ತಾರೆ.
ಸ್ವಾಭಾವಿಕ ಮತ್ತು ಸಾವಯವ ಕೃಷಿ, ಆಹಾರ ಮತ್ತು ಪಾನೀಯಗಳು, ವೈಯಕ್ತಿಕ ಕಾಳಜಿ ಇತ್ಯಾದಿ ವಲಯದ ಆಸಕ್ತಿದಾಯಕ ಕಂಪನಿಗಳು ಮತ್ತು ಉತ್ಪನ್ನಗಳ ಸಮೃದ್ಧಿಯನ್ನು ಈ ಎಕ್ಸ್​ಪೋದಲ್ಲಿ ಕಾಣಬಹುದಾಗಿದೆ.
ಹೆಚ್ಚಿನ ಮಾಹಿತಿಗೆhttp://www.naturalproductsexpoindia.comಅಥವಾ ಸಂಘಟಕರಿಗಾಗಿ ದೂ: 98693 33310, 98195 12127 ಅಥವಾ[email protected]ಸಂಪರ್ಕಿಸಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
