ಮೈಸೂರು:ತಿ. ನರಸೀಪುರ ತಾಲೂಕು ತಲಕಾಡಿನ ಪಂಚಲಿಂಗದರ್ಶನ ಮಹೋತ್ಸವದ ಪ್ರಮುಖ ಕಾರ್ಯಕ್ರಮ ಪಂಚಲಿಂಗ ದರ್ಶನ ಪೂಜಾ ಮಹೋತ್ಸವವು ಕಡೆ ಕಾರ್ತಿಕ ಸೋಮವಾರ ದಂದು ಮುಂಜಾನೆ 4 30ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ನೆರವೇರಿತು. ಸೋಮವಾರ ಮುಂಜಾನೆ 4.30ಕ್ಕೆ ಸಲ್ಲುವ ಶುಭ ಲಗ್ನವಾದ ವೃಶ್ಚಿಕ ಲಗ್ನದಲ್ಲಿ ಏಕ ಕಾಲದಲ್ಲಿ ಪಂಚಲಿಂಗಗಳಿಗೂ ಮಹಾನ್ಯಾಸಪೂರ್ವಕ ರುದ್ರ ಅಭಿಷೇಕ ನೆರವೇರಿಸಲಾಯಿತು. ಪ್ರಧಾನ ದೇಗುಲವಾದ ವೈದ್ಯನಾಥೇಶ್ವರನಿಗೆ ಆನಂದ್ ದೀಕ್ಷಿತ್ ಅವರ ನೇತೃತ್ವದಲ್ಲಿ ರುದ್ರ ಪಾರಾಯಣದೊಂದಿಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ ನೆರವೇರಿತು.
ಐತಿಹಾಸಿಕ ಪಂಚಲಿಂಗ ದರ್ಶನ ವೈಭವ

ಶ್ರೀ ವೈದ್ಯನಾಥನ ಸನ್ನಿಧಿಯಲ್ಲಿ ಮೇಳೈಸಿದ ಧಾರ್ಮಿಕ ಕೈಂಕರ್ಯಗಳು. ನಸುಕಿನಲ್ಲೇ ಕಲ್ಯಾಣಿಯಿಂದ ಪವಿತ್ರ ಜಲಾಗಮನವಾಗಿದೆ. ಪೂರ್ಣಕುಂಭದಲ್ಲಿ ಹೊಸ ನೀರು ಹೊತ್ತು ತಂದ ಪ್ರಧಾನ ಅರ್ಚಕ ಆನಂದ್ ದೀಕ್ಷಿತ್ ಅವರಿಂದ ಶ್ರೀ ವೈದ್ಯನಾಥನಿಗೆ ಮುಂಜಾವಿನ ಮಹಾಭಿಷೇಕ ನಡೆಯಿತು. ಕುಹುಯೋಗ, ಜೇಷ್ಠ ನಕ್ಷತ್ರದ ಮುಂಜಾನೆ 4.30ರಿಂದ 7.30ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಮಹಾಭಿಷೇಕ ಸಂಪನ್ನವಾಗಿದ್ದು, ಮುಂಡಿಬೆಟ್ಟದ ಪ್ರಧಾನ ಅರ್ಚಕ ಡಾ.ಶಶಿಶೇಖರ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿಸಿದರು.  ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್, ಶಾಸಕರಾದ ಎಂ.ಅಶ್ವಿನ್ ಕುಮಾರ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದಾರೆ. ವರ್ಚ್ಯುಯಲ್ ಮೂಲಕ ಸಾರ್ವಜನಿಕರಿಗೆ ಪಂಚಲಿಂಗ ದರ್ಶನಕ್ಕೆ ಅನುವು ಮಾಡಲಾಯಿತು. ದೇವಾಲಯದ ಒಳಾಂಗಣದಲ್ಲಿ ಆನ್‌ಲೈನ್ ದರ್ಶನ ಉದ್ಘಾಟನೆಯಾಗಿದೆ.
ಕಾರ್ತಿಕ ಮಾಸದಲ್ಲಿ ಐದು ಸೋಮವಾರಗಳು ಬಂದು, ಕಡೆಯ ಸೋಮವಾರ ಅಮವಾಸ್ಯೆ ಬಂದರೆ ಆ ದಿನ ಪಂಚಲಿಂಗ ದರ್ಶನ ಪೂಜಾ ಮಹೋತ್ಸವ ನಡೆಯುತ್ತದೆ. ಇದು ಮಾತ್ರವಲ್ಲದೇ ಅನುರಾಧ, ಜೇಷ್ಠಾ ಅಥವಾ ವಿಶಾಖ ನಕ್ಷತ್ರ ಗಳಲ್ಲಿ  ಯಾವುದಾದರೊಂದು ನಕ್ಷತ್ರ ಬದು ಸೂರ್ಯ ಚಂದ್ರ ರಿಬ್ಬರೂ ವೃಶ್ಚಿಕ ಲಗ್ನದಲ್ಲಿ ಸೇರಿದಾಗ ಆ ದಿನದ ಉಷಾ ಕಾಲದಲ್ಲಿ ಬರುವ ಕುಹೂ ಯೋಗ, ಅಥವಾ ಪದ್ಮಕ ಯೋಗವು ಅತ್ಯಂತ ಫಲಪ್ರದಾಯಕ ಕಾಲವಾಗಿರುತ್ತದೆ. ಈ ವೇಳೆ ಪಂಚಲಿಂಗ ದರ್ಶನದ ಪುಣ್ಯಕಾಲ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ:ಪಟ್ಟು ಬಿಡದ ಸಾರಿಗೆ ನೌಕರರು: ಸಂಧಾನಕ್ಕೆ ಪ್ರತಿಷ್ಠೆಯ ಕೊಳ್ಳಿ
ಈ ಪುಣ್ಯ ಕಾಲ ಪ್ರತಿ ಸಂವತ್ಸರದಲ್ಲಿ ಬರುವುದಿಲ್ಲ. 3 ರಿಂದ 14 ವರ್ಷದೊಳಗೆ ಒಮ್ಮೆ ಒಂದು ಸಂವತ್ಸರದಲ್ಲಿ ಬರುತ್ತದೆ. ಆಸಂವತ್ಸರದಲ್ಲಿ ಪಂಚಲಿಂಗ ದರ್ಶನ ಮಹೋತ್ಸವ ಜರುಗಲಿದೆ.  ಪಂಚಲಿಂಗ ದರ್ಶನ ದಿನದಂದು ಭಕ್ತರು ನದಿಯಲ್ಲಿ ಮಿಂದು ಐದು ದೇವಾಲಯಗಳಿಗೂ ಭೇಟಿ ನೀಡಿ ಪಂಚಲಿಂಗ ದರ್ಶನ ಮಾಡಿ ಪುನೀತರಾಗುವುದು ವಾಡಿಕೆ. ತಲಕಾಡಿನಲ್ಲಿ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಪಂಚಮುಖಗಳ ಶಿವನನ್ನು  ಅರ್ಕೆಶ್ವರ, ಮುಡುಕುತೊರೆ ಮಲ್ಲಿಕಾರ್ಜುನ, ಮರಳೇಶ್ವರ, ಪಾತಾಳೇಶ್ವರ, ವೈದ್ಯನಾಥೇಶ್ವರ ಎಂಬ ಹೆಸರಿನಲ್ಲಿ ಪೂಜಿಸಲಾಗುತ್ತಿದ್ದು, ಈಶಾನ ಮುಖವೇ ಶಿವನ ಪ್ರಧಾನ ಮುಖವಾದಕಾರಣ ವೈದ್ಯಾನಾಥೇಶ್ವರನಿಗೆ ಅಗ್ರ ಪೂಜೆ ಸಲ್ಲಿಸಲಾಗುತ್ತದೆ.
ಇದನ್ನೂ ಓದಿ:ಅಪಾರ ಕೃಷಿ ಭೂಮಿ ಜಲಾವೃತ, ಅವೈಜ್ಞಾನಿಕ ಉಪ್ಪು ನೀರು ತಡೆ ಅಣೆಕಟ್ಟೆಯಿಂದ ಅವಾಂತರ
ಕಳೆದ 2013 ರಲ್ಲಿ ನಡೆದ ಪಂಚಲಿಂಗ ದರ್ಶನದಲ್ಲಿ ನಡೆದ 10 ದಿನಗಳ ಉತ್ಸವದಲ್ಲಿ 6-7 ಲಕ್ಷ ಮಂದಿ ರಾಜ್ಯವಲ್ಲದೇ ನೆರೆ ರಾಜ್ಯಗಳಿಂದ ಭಕ್ತರು ಭಾಗವಹಿಸಿದ್ದರು. ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಪಂಚಲಿಂಗ ದರ್ಶನಕ್ಕೆ ಸ್ಥಳೀಯರಿಗೆ ಮಾತ್ರ ಅವಕಾಶ ಲಭ್ಯವಾಗಿದ್ದು, ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯ ಮಾಡಿಸಿಕೊಂಡು ದರ್ಶನ ಮಾಡಲು ಸೂಚಿಸಲಾಗಿದೆ. ಪಂಚಲಿಂಗ ದರ್ಶನದ ವಿಷಯ ಪೂಜೋತ್ಸವ ಕಾರ್ಯಕ್ರಮ ವರ್ಚ್ಯುಯಲ್ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಇದನ್ನೂ ಓದಿ:ಹಳ್ಳಿ ಫೈಟ್​ನಲ್ಲಿ ರಾಜಕೀಯ ಪಕ್ಷಗಳ ಮೇಲೆ ಚುನಾವಣಾ ಆಯೋಗ ಕಣ್ಗಾವಲು
ಪಂಚಲಿಂಗ ದರ್ಶನಕ್ಕೆ ಮುಖ್ಯಮಂತ್ರಿ ಗೈರು:ತಲಕಾಡಿಗೆ ಆಗಮಿಸದ ಸಿಎಂ ಬಿ.ಎಸ್.ಯಡಿಯೂರಪ್ಪ. ಮಹಾಭಿಷೇಕ ಬಳಿಕ ಸಿಎಂ ಪೂಜಾ ವಿಧಿವಿಧಾನ ನೆರವೇರಿಸುವುದು ವಾಡಿಕೆ. 1993ರಿಂದ ನಡೆದ ಎಲ್ಲ ಪಂಚಲಿಂಗ ದರ್ಶನದಲ್ಲೂ ಸಿಎಂಗಳೇ ಪೂಜೆ ಮಾಡಿದ್ದಾರೆ. 2009ರಲ್ಲಿ ಯಡಿಯೂರಪ್ಪ ಅವರೇ ನಡುರಾತ್ರಿ ಪೂಜೆ ನೆರವೇರಿಸಿದ್ದರು. ಈ ಬಾರಿ ಪಂಚಲಿಂಗ ದರ್ಶನ ಮಾಡದ ಬಿಎಸ್‌ವೈ. ಸಿಎಂ ಅನುಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಪೂಜೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮಫೇಸ್​ಬುಕ್​ ಪುಟಲೈಕ್ ಮಾಡಿ ಮತ್ತು ಫಾಲೋ ಮಾಡಿ..


ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮಟೆಲಿಗ್ರಾಮ್ ಗ್ರೂಪ್ ಸೇರಿರಿ
Sponsored
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ– ನೋಂದಣಿ ಉಚಿತ!
Watch Your Favorite Movie Streaming Sites Without Restrictions In India Using A VPNTheTopFiveVPN|
Smart and Sustainable Fashion In IndiaCNN with IBM|
Let Your NETFLIX Experience In Mysore Without Restrictions With A VPN NowTheTopFiveVPN|
This Private Resort is Making Hay While The Sun ShinesThe Better Traveller|
2220 Mobile Phone @ Rs.12992220 Mobile Phone @ Rs.1299Reboxed|
Keep Prying Eyes Away From Your DevicesUtilize free VPN offered with the Norton™ 360 suite to keep your transactions safe and hackers away.Norton|
N73 Mobile Phone @ Rs.1350N73 Mobile Phone @ Rs.1350Reboxed|
Invest in Amazon from 200$. You could earn, up to $2000! Don’t miss this chance!Smart Investors|
UK Immigration Consultants – Start A New Life In The United Kingdom In 2021!UK Immigration Consultants|
Term Life Insurance – 1 Cr Life Cover @ 490/month*. Get Free Quote!Term Plans -Compare & Buy Now!|
ಬ್ರೇಕಿಂಗ್ ನ್ಯೂಸ್​: ಒಂದು ವಾರ ಕರ್ನಾಟಕ ಬಂದ್​- ಆರೋಗ್ಯ ತುರ್ತುಪರಿಸ್ಥಿತಿ: ಸಿಎಂ ಯಡಿಯೂರಪ್ಪ ಅವರ ಪತ್ರಿಕಾಗೋಷ್ಠಿ ವಿಡಿಯೋ ಇಲ್ಲಿದೆ..Vijayavani
ಮಗಳಿಗೆ ಮದ್ಯ ಕುಡಿಸಿ ವಿಡಿಯೋ ಚಿತ್ರೀಕರಣ ಮಾಡಿದ ರೌಡಿ ಶೀಟರ್​ ತಂದೆVijayavani
Start The New Year Living In The United Kingdom!Find out if you qualify for the new points-based UK immigration program!UK Immigration Consultants|
Put an onion in your sock before bedtime – You can thank us laterHappy Lifehacks|
Don’t wait, invest $200 in Amazon and earn with a certified platformSmart Investors|
Are You Above 35 Yrs? Get 1 Cr Term Insurance @1298/month*Term Plans -Compare & Buy Now!|
ಪುರುಷರೇ ಎಚ್ಚರ…ಕರೊನಾ ವೈರಸ್​ ಬಗ್ಗೆ ನಿರ್ಲಕ್ಷ್ಯ ಬೇಡ; ಬೆಳಕಿಗೆ ಬಂದಿದೆ ಆತಂಕಕಾರಿ ವಿಷಯVijayavani
Mom Belly Keeps Growing, Doctor Sees Scan And Calls CopsBeach Raider|
VIDEO: ಹಳೆಯ ವಿದ್ಯಾರ್ಥಿನಿ ಜತೆಗೆ ಪ್ರೈಮರಿ ಶಾಲಾ ಶಿಕ್ಷಕನ ಕಾಮ ಪುರಾಣ ಈಗ ವೈರಲ್​Vijayavani
ರೈಲು ನಿಲ್ದಾಣದ ಹೊರಭಾಗದಲ್ಲಿ ಸಿಕ್ಕ ಸಿಕ್ಕ ಮಹಿಳೆಯರಿಗೆ ಚುಂಬಿಸುತ್ತಿದ್ದ ಸರಣಿ ಕಿರುಕುಳ ಆರೋಪಿ ಬಂಧನVijayavani
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
