ಬಾಗಲಕೋಟೆ:ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯದ ಪಂಚಮಸಾಲಿ 3ನೇ ಪೀಠದ ಪೀಠಾಧೀಶರ ಪಟ್ಟಾಭಿಷೇಕ ಕಾರ್ಯಕ್ರಮ ಭಾನುವಾರ ನಸುಕಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಶಾಸ್ತ್ರೋಕ್ತವಾಗಿ ಜರುಗಿತು.
ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದಿಂದ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ಒಕ್ಕೂಟದ ಜಾಗೆಯಲ್ಲಿ ಈ ಕಾರ್ಯಕ್ರಮ ನಡೆಯಿತು.
3ನೇ ಪೀಠದ ಪೀಠಾಧಿಕಾರಿ ಆಗುತ್ತಿರುವ ಷ. ಬ್ರ. ಡಾ. ಮಹದೇವ ಶಿವಾಚಾರ್ಯ ಸ್ವಾಮೀಜಿಗಳಿಗೆ ಪಟ್ಟಾಭಿಷೇಕ ಕಾರ್ಯ ನಡೆಯಿತು. ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠ ಹೆಸರಿನಲ್ಲಿ ಜಗದ್ಗುರು ಡಾ.ಮಹಾದೇವ ಶಿವಾಚಾರ್ಯ ಸ್ವಾಮೀಜಿಗೆ ಒಕ್ಕೂಟದ ಸ್ವಾಮೀಜಿಗಳು ರುದ್ರಾಭಿಷೇಕ ನೆರವೇರಿಸಿದರು.
ನಸುಕಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಅಷ್ಟ ದುರ್ಗಾ ಪೂಜಾ, ಪಾರ್ವತಿ ಪೂಜಾ, ಏಕಾದಶಿ ಮಹಾರುದ್ರ ಪೂಜಾ, ಸ್ವಸ್ತಿಪುಣ್ಯ ಆಹ್ವಾಚನ ಪೂಜೆ ನಡೆಯಿತು.
ಪೀಠಾರೋಹಣ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿದ‌ ಮಹದೇವ ಶಿವಾಚಾರ್ಯ ಸ್ವಾಮೀಜಿ ಆಗಮಿಸಿದ ಬಳಿಕ ನೂತನ ಜಗದ್ಗುರುಗಳ ರುದ್ರಾಭಿಷೇಕ ಕೈಂಕರ್ಯ ಆರಂಭವಾಯಿತು.
ರುದ್ರಾಭಿಷೇಕ ಆಸನದಲ್ಲಿ ಮಹದೇವ ಶಿವಾಚಾರ್ಯ ಸ್ವಾಮೀಜಿ ಅವರನ್ನ ಕೂರಿಸಿ, ಮಂತ್ರ ಪಠಣ, ಪೂಜಾ ವಿಧಿವಿಧಾನಗಳು ಜರುಗಿದವು.
ರುದ್ರಾಭಿಷೇಕ ಹಿನ್ನೆಲೆ ಮಹದೇವ ಶಿವಾಚಾರ್ಯ ಅವರಿಗೆ ಅರಿಶಿಣ ಲೇಪನ ಮಾಡಲಾಯಿತು. ಒಕ್ಕೂಟದ ಸ್ವಾಮೀಜಿಗಳು ಸಹ ಪರಸ್ಪರ ಅರಿಷಿಣ ಬಳಿದುಕೊಂಡರು. ಜಗದ್ಗುರುಗಳಿಗೆ ಹಾಲು,ಜೇನು ತುಪ್ಪ,,ಸಕ್ಕರೆ ಜಲದಿಂದ ಪಂಚಾಮೃತಾಭಿಷೇಕ ಮಾಡಿದರು.
ಪಂಚಮಸಾಲಿ ಸ್ವಾಮೀಜಿಗಳ ಒಕ್ಕೂಟದ ಕಾರ್ಯದರ್ಶಿ ಅಭಿನವ ಸಂಗನಬಸವ ಸ್ವಾಮೀಜಿ, ಉಪಾಧ್ಯಕ್ಷ ಬೆಂಡವಾಡದ ರೇವಣಸಿದ್ದ ಸ್ವಾಮೀಜಿ, ಸಿದ್ದಲಿಂಗದೇವರು ಸೇರಿದಂತೆ ಒಕ್ಕೂಟದ ಸ್ವಾಮೀಜಿಗಳು ಭಾಗಿಯಾಗಿದ್ರು.(ದಿಗ್ವಿಜಯ ನ್ಯೂಸ್​)
ಮಾಡೆಲ್​ಗಳಿಬ್ಬರ ಸಾವಿಗೂ ಮುನ್ನ ಅಪ್ರಾಪ್ತೆ ಮೇಲೆ ದೌರ್ಜನ್ಯ: ಹೋಟೆಲ್​ ಮಾಲೀಕನ ಕರಾಳ ಮುಖ ಮತ್ತೆ ಬಯಲು

ಹೈಸ್ಕೂಲ್‌ 14ರಂದು ಓಪನ್- 15ರವರೆಗೆ ಪಿಯು ಕಾಲೇಜುಗಳಿಗೆ ರಜೆ

ರಾಜ್ಯದಲ್ಲಿ 430 ಅನಧಿಕೃತ ಲೇಔಟ್​ ಪತ್ತೆ: ನಗರಸಭೆ ವ್ಯಾಪ್ತಿಯಲ್ಲಿ ನಿರ್ಮಾಣ – ಆತಂಕದಲ್ಲಿ ನಿವೇಶನದಾರರು

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:five × two =
Remember me
