ಬೆಂಗಳೂರು:ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂಬ ಆಗ್ರಹ ಈಗ ಮತ್ತಷ್ಟು ಬಿರುಸು ಪಡೆದಿದೆ. ಈ ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸಬೇಕೆಂಬ ಒಗ್ಗಟ್ಟಿನ ನಿರ್ಣಯ ಕೂಡಲಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಸಮುದಾಯದ ಬೃಹತ್ ಸಮಾವೇಶದಲ್ಲಿ ಹೊರಹೊಮ್ಮಿತು.
ಫಲಕೊಡದ ಮನವಿ:ಸರ್ಕಾರದ ಪರವಾಗಿ ಸಚಿವರಾದ ಸಿ.ಸಿ.ಪಾಟೀಲ್ ಮತ್ತು ಮುರುಗೇಶ ನಿರಾಣಿ ಅವರು, ‘ನಾವು ಸರ್ಕಾರವನ್ನು ಒಪ್ಪಿಸುತ್ತೇವೆ, ತಾತ್ಕಾಲಿಕವಾಗಿ ಪ್ರತಿಭಟನೆ ಕೈಬಿಡಿ’ ಎಂದು ಮನವಿ ಮಾಡಿದರು. ಆದರೆ, ಮೀಸಲಾತಿ ಸಿಗುವವರೆಗೆ ಹಿಂದೆ ಸರಿಯುವುದು ಬೇಡ ಎಂಬ ಒಕ್ಕೊರಲ ಅಭಿಪ್ರಾಯ ಸಮಾವೇಶದಲ್ಲಿ ಸೇರಿದ್ದ ಜನಸ್ತೋಮದಿಂದ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾ.4ರವರೆಗೆ ಧರಣಿ ನಡೆಸಲು ತೀರ್ವನಿಸಲಾಯಿತು. ಆಗಲೂ ಸರ್ಕಾರ ಬೇಡಿಕೆ ಈಡೇರಿಸದಿದ್ದಲ್ಲಿ ತಾವು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಘೋಷಿಸಿದರು.
ನಾವು ಮೀಸಲಾತಿ ಭಿಕ್ಷೆ ಕೇಳಲು ಬಂದಿಲ್ಲ. ಎಷ್ಟು ಸಾರಿ ಮನವಿ ಕೊಡುವುದು. ಮನವಿ ಕೊಟ್ಟು ಕೊಟ್ಟು ಕೈ ಸೋತು ಹೋಗಿವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು. ನಾವೀಗ ಮನವಿ ಕೊಡಲು ಬಂದಿಲ್ಲ. ಮೀಸಲಾತಿ ತೆಗೆದುಕೊಂಡು ಹೋಗಲು ಬಂದಿದ್ದೇವೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ’ ಎಂದು ಸಮಾವೇಶದ ಮೂಲಕ ಸರ್ಕಾರಕ್ಕೆ ಸ್ಪಷ್ಟ ಸಂದೇಶ ರವಾನಿಸಲಾಯಿತು.
ಲಕ್ಷ ಲಕ್ಷ ಜನ:ಕೂಡಲಸಂಗಮದಿಂದ ಹೊರಟ ಪಾದಯಾತ್ರೆ 708 ಕಿ.ಮೀ. ದೂರ ಕ್ರಮಿಸಿ ಬೆಂಗಳೂರು ತಲುಪಿದ್ದು, ಭಾನುವಾರ ಸಮಾವೇಶ ನಡೆಯಿತು. ಕರ್ನಾಟಕ, ಮಹಾರಾಷ್ಟ್ರ, ಆಂಧ್ರ್ರ್ರದೇಶ, ತಮಿಳುನಾಡು ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಮೂಲಕ ಪಂಚಮಸಾಲಿ ಸಮುದಾಯದವರು ಶಕ್ತಿ ಪ್ರದರ್ಶನ ನಡೆಸಿದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಮೂರೂ ಪಕ್ಷಗಳ ಮುಖಂಡರು ಪಕ್ಷ ಬೇಧ ಮರೆತು ಸಮಾವೇಶದಲ್ಲಿ ಭಾಗವಹಿಸಿದ್ದರು. ಅಖಿಲ ಭಾರತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ್, ಸಚಿವರಾದ ಮುರುಗೇಶ್ ನಿರಾಣಿ, ಸಿ.ಸಿ.ಪಾಟೀಲ್, ಶಾಸಕರಾದ ಲಕ್ಷಿ್ಮ ಹೆಬ್ಬಾಳ್ಕರ್, ಶಿವಾನಂದ ಪಾಟೀಲ್, ಮಹಾಂತೇಶ್ ದೊಡ್ಡನಗೌಡರ್, ನಿಂಬಣ್ಣನವರ್, ಅರುಣ್​ಕುಮಾರ್, ಶಂಕರ ಪಾಟೀಲ ಮುನೇನಕೊಪ್ಪ, ಸಿದ್ದು ಸವದಿ, ಬಿ.ಆರ್.ಪಾಟೀಲ್, ಕಳಕಪ್ಪ ಬಂಡಿ, ಶಿವಶಂಕರ್, ಲೋಕಸಭೆ ಸದಸ್ಯ ಕರಡಿ ಸಂಗಣ್ಣ, ಮಾಜಿ ಸಂಸದ ಶಿವರಾಮೇಗೌಡ, ಮಾಜಿ ಸಚಿವ ಎ.ಬಿ.ಪಾಟೀಲ್, ರಾಜಕುಮಾರ್ ತೇಲ್ಕರ್, ಉಮಾಪತಿ, ಬಾವಿ ಬೆಟ್ಟಪ್ಪ, ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಮತ್ತಿತರರು ಉಪಸ್ಥಿತರಿದ್ದರು.
ಹೋರಾಟ ಕೈಬಿಡುವಂತೆ ಸಚಿವ ಸಿ.ಸಿ.ಪಾಟೀಲ್ ಸರ್ಕಾರದ ಪ್ರತಿನಿಧಿಯಾಗಿ ಮಾಡಿದ ಪ್ರಯತ್ನ ವಿಫಲವಾಯಿತು. ‘ನಾವು ನಿಮ್ಮ ಪರವಾಗಿ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ತಾತ್ಕಾಲಿಕವಾಗಿ ಹೋರಾಟ ಸ್ಥಗಿತಗೊಳಿಸಿ’ಎಂದು ಸಚಿವ ಪಾಟೀಲ ಮನವಿ ಮಾಡಿದರು. ಆಗ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್, ‘ನಾವು ಕಹಳೆ ಮೊಳಗಿಸಿದ್ದೇವೆ. ಮಾಡು ಇಲ್ಲವೆ ಮಡಿ ಎಂದು ಮನೆಯಿಂದ ಹೊರಟಿದ್ದೇವೆ. ಮೀಸಲಾತಿ ಪಡೆದುಕೊಂಡೇ ಮನೆಗೆ ಹೋಗುವುದು’ ಎಂದರು. ಆಗ ಮಧ್ಯಪ್ರವೇಶಿಸಿದ ಜಯಮೃತ್ಯುಂಜಯ ಸ್ವಾಮೀಜಿ, ‘ಇತ್ತ ಸಮಾಜ, ಅತ್ತ ಸರ್ಕಾರ. ನಾನು ಸಂದಿಗ್ಧ ಸ್ಥಿತಿಯಲ್ಲಿದ್ದೇನೆ’ ಎಂದಾಗ ಬಸವರಾಜ ಪಾಟೀಲ ಯತ್ನಾಳ್, ‘ಸರ್ಕಾರದ ಯಾವ ಆಶ್ವಾಸನೆಯೂ ನಮಗೆ ಬೇಡ. ಧರಣಿ ಮುಂದುವರಿಸೋಣ. ಮೀಸಲಾತಿ ಘೋಷಿಸಿಕೊಂಡೇ ಹೋಗೋಣ’ ಎಂದು ಹೇಳಿದಾಗ ನೆರೆದ ಜನರು ಕೂಡ ಈ ಮಾತು ಬೆಂಬಲಿಸಿ ಜೈಕಾರ ಕೂಗಿದರು. ಮನವೊಲಿಕೆಗೆ ಒಪ್ಪದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಸಚಿವ ಸಿ.ಸಿ.ಪಾಟೀಲ್ ವೇದಿಕೆಯಿಂದ ಕೆಳಗಿಳಿದು ಹೊರನಡೆಯಲು ಮುಂದಾದರು. ಆಗ ಸ್ವಾಮೀಜಿ ಮತ್ತು ಇತರ ಮುಖಂಡರು ತಡೆದರೂ ತೆರಳಿದರು.
ನಮಗೆ ನಿಗಮ, ಮಂಡಳಿ, ಪ್ರಾಧಿಕಾರ ಬೇಡ, ಅನುದಾನವೂ ಬೇಡ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ 2ಎ ಮೀಸಲಾತಿ ಬೇಕು. ದೇವೇಗೌಡರು, ದೇವರಾಜ ಅರಸರು ತಮ್ಮ ತಮ್ಮ ಸಮಾಜಕ್ಕೆ ನ್ಯಾಯ ಕೊಟ್ಟಿದ್ದಾರೆ. ನಮ್ಮ ಸಮಾಜಕ್ಕೆ ಯಡಿಯೂರಪ್ಪ 2ಎ ಮೀಸಲಾತಿ ಕೊಡುವ ವಿಶ್ವಾಸವಿದೆ. ವೀರಶೈವ ಲಿಂಗಾಯತರೂ ಒಬಿಸಿ ಮೀಸಲು ಕೇಳುತ್ತಿದ್ದಾರೆ. ಅವರ ಹೋರಾಟವನ್ನೂ ನಾವು ಬೆಂಬಲಿಸುತ್ತೇವೆ.
|ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿಪೀಠಾಧ್ಯಕ್ಷರು, ಕೂಡಲಸಂಗಮ ಪೀಠ
ನಮ್ಮ ಮೀಸಲಾತಿ ಹೋರಾಟ ಇಂದು, ನಿನ್ನೆಯದ್ದಲ್ಲ. 4 ದಶಕಗಳ ಇತಿಹಾಸವಿದೆ. ನಮ್ಮ ನೋವು, ಕೂಗು ಯಾರಿಗೂ ಕೇಳಲಿಲ್ಲ. ಹಾವನೂರು ಆಯೋಗ, ಚಿನ್ನಪ್ಪರೆಡ್ಡಿ ಆಯೋಗಗಳಿಂದಲೂ ನ್ಯಾಯ ಸಿಕ್ಕಿಲ್ಲ. ಈ ಬಾರಿ ಮೀಸಲಾತಿ ಸಿಗುವವರೆಗೆ ಹೋರಾಟದಿಂದ ಹಿಂದೆ ಸರಿಯಲ್ಲ.
|ಅರವಿಂದ ಬೆಲ್ಲದಶಾಸಕ, ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ.
ಪಂಚಮಸಾಲಿ ಸಮುದಾಯದ ಹಕ್ಕೊತ್ತಾಯಕ್ಕೆ ಸಿಎಂ ಸ್ಪಂದಿಸಿದ್ದಾರೆ. ಕಾನೂನು ತೊಡಕಾಗಬಾರದೆಂಬ ಕಾರಣಕ್ಕೆ ಎಲ್ಲ ಪ್ರಕ್ರಿಯೆ ಮುಗಿದ ಬಳಿಕ ಬೇಡಿಕೆ ಈಡೇರಿಸುವುದು ಅವರ ಉದ್ದೇಶ. ಸಮುದಾಯದ ಬೇಡಿಕೆ ಈಡೇರಿಸಲು ನಾವು ಎಲ್ಲ ರೀತಿಯ ಹೋರಾಟ ಮಾಡುತ್ತೇವೆ.
|ಮುರುಗೇಶ ನಿರಾಣಿಗಣಿ ಸಚಿವ
ಕಾವೇರಿದ ಮೀಸಲಾತಿ ಹೋರಾಟ; ವಿಧಾನಸೌಧದತ್ತ ಪಂಚಮಸಾಲಿ ಲಿಂಗಾಯತರು, ತಡೆಯಲು ಪೊಲೀಸರ ಹರಸಾಹಸ

ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಮಹಾಸಭಾ ಅಸ್ತಿತ್ವಕ್ಕೆ

ಪಂಚಮಸಾಲಿ ಸಮಾವೇಶದಲ್ಲಿ ಕಣ್ಣೀರಿಟ್ಟ ವಿನಯ್ ಕುಲಕರ್ಣಿ ಪತ್ನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
