ಮೈಸೂರು/ಮುಳಬಾಗಿಲು:“ನವ ಕರ್ನಾಟಕ ನವ ನಿರ್ಮಾಣಕ್ಕಾಗಿ’ ಜೆಡಿಎಸ್​ ಆಯೋಜಿಸಿರುವ ಪಂಚರತ್ನ ರಥಯಾತ್ರೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಇಂದು(ಶುಕ್ರವಾರ) ಬೃಹತ್​ ಸಮಾವೇಶ ನಡೆಯಲಿದ್ದು, ಇದಕ್ಕೂ ಮುನ್ನ ಬೆಳಗ್ಗೆಯೇ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ವಿಶೇಷ ಪೂಜೆ ಸಲ್ಲಿಸಿದರು. ಶಾಸಕರಾದ ಜಿ.ಟಿ. ದೇವೇಗೌಡ, ಸಿ.ಎಸ್.ಪುಟ್ಟರಾಜು ಸೇರಿದಂತೆ ಜೆಡಿಎಸ್ ಮುಖಂಡರು ಕುಮಾರಸ್ವಾಮಿಗೆ ಸಾಥ್ ನೀಡಿದರು.
ಸಮಾವೇಶದಲ್ಲಿ ದಳಪತಿಗಳು ಚುನಾವಣೆ ರಣಕಹಳೆ ಊದಲು ಸಜ್ಜಾಗಿದ್ದು. ಮುಳಬಾಗಿಲು ನಗರವಿಡೀ ಹಸಿರುಮಯವಾಗಿದೆ. ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಮಧ್ಯಾಹ್ನ 12.30ಕ್ಕೆ ಬೃಹತ್​ ಸಮಾವೇಶ ಉದ್ಘಾಟಿಸಲಿದ್ದು, ಎಚ್​.ಡಿ. ಕುಮಾರಸ್ವಾಮಿ, ಜೆಡಿಎಸ್​ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಎಚ್​.ಡಿ.ರೇವಣ್ಣ, ಜೆಡಿಎಸ್​ ಜಿಲ್ಲಾಧ್ಯಕ್ಷ ಜಿ.ಕೆ. ವೆಂಕಟಶಿವಾರೆಡ್ಡಿ, ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಹಿರಿಯ ಮುಖಂಡರು, ಸಂಭವನೀಯ ಅಭ್ಯರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದ ಉಸ್ತುವಾರಿಯನ್ನು ರಾಜ್ಯ ಕೋರ್​ ಕಮಿಟಿ ಸದಸ್ಯ ಸಮೃದ್ಧಿ ವಿ.ಮಂಜುನಾಥ್​ ವಹಿಸಿದ್ದಾರೆ.
ಪಂಚರತ್ನ ರಥಯಾತ್ರೆಗೆ ನ.1ರಂದು ಕುರುಡುಮಲೆಯ ವಿನಾಯಕ ದೇವರಿಗೆ ಪೂಜೆ ಸಲ್ಲಿಸಿ ಚಾಲನೆ ನೀಡಲಾಗಿತ್ತು. ನಿರಂತರ ಮಳೆಯಿಂದಾಗಿ ಸಾರ್ವಜನಿಕ ಬೃಹತ್​ ಸಮಾವೇಶ ರದ್ದುಗೊಂಡಿತ್ತು. ಇದೀಗ 2 ಜರ್ಮನ್​ ಶೆಡ್​ಗಳನ್ನು ಅಳವಡಿಸಿ 1.5 ಲಕ್ಷ ಆಸನ ವ್ಯವಸ್ಥೆಗಳನ್ನು ಮಾಡಲಾಗಿದೆ.
ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಸಮಾವೇಶ ಮುಗಿದ ಬಳಿಕ ರಾತ್ರಿ ಆವನಿ ಹೋಬಳಿಯ ಊರುಕುಂಟೆ ಮಿಟ್ಟೂರಿನಲ್ಲಿ ಗ್ರಾಮವಾಸ್ತವ್ಯ ಹೂಡಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಲಿದ್ದಾರೆ.
ಜೆಡಿಎಸ್​ ರಾಜ್ಯದಲ್ಲಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆಗಳಾದ ಶಿಕ್ಷಣವೇ ಆಧುನಿಕ ಶಕ್ತಿ, ಆರೋಗ್ಯವೇ ಸಂಪತ್ತು, ರೈತ ಚೈತನ್ಯ, ವಸತಿ ಆಸರೆ, ಯುವನವ ಮಾರ್ಗ ಮತ್ತು ಮಹಿಳಾ ಸಬಲೀಕರಣ ಜಾರಿಗೊಳಿಸುವ ಉದ್ದೇಶ ಹೊಂದಿದೆ.
ಬಿಗಿ ಭದ್ರತೆ:ಎಸ್ಪಿ ದೇವರಾಜ್​ ನೇತೃತ್ವದಲ್ಲಿ ಸಮಾವೇಶಕ್ಕೆ ಬಿಗಿ ಬಂದೋಬಸ್ತ್​ ಮಾಡಲಾಗಿದೆ. ಅಡಿಷನಲ್​ ಎಸ್ಪಿ ಸಚಿನ್​ ಘೋರ್ಪಡೆ, ಮುಳಬಾಗಿಲು ಉಪ ವಿಭಾಗದ ಡಿವೈಎಸ್​ಪಿ ಟಿ.ಆರ್​. ಜೈಶಂಕರ್​ ಉಸ್ತುವಾರಿಯಲ್ಲಿ ಪೊಲೀಸ್​ ರಕ್ಷಣೆ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. 4 ಡಿವೈಎಸ್​ಪಿ, 24 ಸಿಪಿಐ, 49 ಪಿಎಸ್​ಐ, 40 ಎಎಸ್​ಐ, 605 ಪೇದೆಗಳು, 94 ಮಹಿಳಾ ಪೇದೆಗಳು, 100 ಹೋಂಗಾರ್ಡ್​ಗಳು, 4 ಡಿಆರ್​ ವ್ಯಾನ್​ಗಳ ಸೇರಿದಂತೆ ಒಟ್ಟು 1000ಕ್ಕೂ ಅಧಿಕ ಪೊಲೀಸ್​ ಸಿಬ್ಬಂದಿ ನಿಯೋಜಿಸಲಾಗಿದೆ.
8 ಕಡೆ ಪಾರ್ಕಿಂಗ್​​ ವ್ಯವಸ್ಥೆ:ಬೆಂಗಳೂರು ಹಾಗೂ ಕೋಲಾರ ಕಡೆಯಿಂದ ಬರುವ ವಾಹನಗಳಿಗೆ ಕಾರ್ಯಕ್ರಮದ ಸಮೀಪ ಇರುವ ಹೆದ್ದಾರಿಗೆ ಹೊಂದಿಕೊಂಡ ವಿ.ಗುಟ್ಟಹಳ್ಳಿ ಬಳಿ ಮುಳಬಾಗಿಲು ಕಡೆಯಿಂದ ವಾಹನಗಳಿಗೆ ಕೆಜಿಎಫ್​ ಬೈಪಾಸ್​ ಬಳಿಯ 8 ಸ್ಥಳಗಳಲ್ಲಿ ಪಾರ್ಕಿಂಗ್​ ವ್ಯವಸ್ಥೆ ಕಲ್ಪಿಸಲಾಗಿದೆ.
ಎಸ್​ಐ ನೇಮಕಾತಿಗೆ ಶ್ರೀಘ್ರ ಪರೀಕ್ಷೆ: ಡಿಜಿಪಿ ಪ್ರವಿಣ್​ ಸೂದ್​ ಟ್ವೀಟ್, ಆಕಾಂಕ್ಷಿಗಳಲ್ಲಿ ಆಶಾಭಾವನೆ

ಕುಕ್ಕೆಯಲ್ಲಿ ನ.20ರಂದು ಮಧ್ಯಾಹ್ನವರೆಗೆ ದೇವರ ದರ್ಶನವಿಲ್ಲ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + six =
Remember me
