ಮಂಡ್ಯ:ಪಂಚರತ್ನ ರಥಯಾತ್ರೆ ವೇಳೆ ಸ್ಟೀಲ್ ಬಿಂದಿಗಾಗಿ ನಾರಿಯರು ಮುಗಿಬಿದ್ದ ಘಟನೆ ಕೆ.ಆರ್. ಪೇಟೆಯಲ್ಲಿ ಸಂಭವಿಸಿದೆ. ಟ್ರ್ಯಾಕ್ಟರ್​ನಲ್ಲಿ ಹೊಸ ಸ್ಟೀಲ್ ಬಿಂದಿಗೆಗಳನ್ನು ತುಂಬಿಕೊಂಡು ಬಂದ ಜೆಡಿಎಸ್​ ಮುಖಂಡರು, ಮಹಿಳೆಯರಿಗೆ ಹಂಚುತ್ತಿದ್ದರು. ಈ ವೇಳೆ ನಾ ಮುಂದು, ತಾ ಮುಂದು ಎಂಬಂತೆ ಮುಗಿಬಿದ್ದರು. ಒಂದೊಂದೇ ವಿತರಿಸಲು ಸಾಧ್ಯವಾಗದೇ ಮಹಿಳೆಯರತ್ತ ಬಿಂದಿಗೆಗಳನ್ನು ಎಸೆಯುತ್ತಿದ್ದ ದೃಶ್ಯ ವೈರಲ್​ ಆಗಿದೆ.
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಿನ್ನೆ(ಭಾನುವಾರ) ಪಂಚರತ್ನ ರಥಯಾತ್ರೆ ನಡೆಯಿತು. ಈ ವೇಳೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನ ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಗಿತ್ತು. ಜೆಡಿಎಸ್‌ ಅಭ್ಯರ್ಥಿ ಮಂಜು ಅವರು ಪೂರ್ಣಕುಂಭ ಸ್ವಾಗತಕ್ಕಾಗಿ 5 ಸಾವಿರ ಬಿಂದಿಗೆಗಳನ್ನು ತರಿಸಿದ್ದರು. ಆದರೆ 1 ಸಾವಿರ ಮಂದಿ ಪೂರ್ಣಕುಂಭ ಸಿದ್ಧತೆ ಮಾಡಲಾಗಿತ್ತು. ಈ ವೇಳೆ ಉಳಿದ ಬಿಂದಿಗೆಗಳನ್ನು ಜನರಿಗೆ ವಿತರಿಸಲಾಗಿದೆ.
ಮೂರು ಸರ್ಜರಿಯಾದ್ರೂ ಕಡಿಮೆಯಾಗದ ನೋವು: ಗಂಡ ಮರಳಿ ಬರುವಷ್ಟರಲ್ಲಿ ಮರೆಯಾದ ಮಹಿಳೆ

ಕರೊನಾ ಭಯ: ಮೊದಲ ಲಾಕ್​ಡೌನ್​ನಿಂದಲೂ ಅಮ್ಮ-ಮಗಳ ಸ್ವಯಂ ಗೃಹಬಂಧನ, ಬದಲಾಯ್ತು ಇಬ್ಬರ ವರ್ತನೆ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 − seven =
Remember me
