ತುಮಕೂರು:ಜೆಡಿಎಸ್​ನ ಪಂಚರತ್ನ ರಥಯಾತ್ರೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದ್ದು, ಹೋದ ಕಡೆಯಲ್ಲೆಲ್ಲಾ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರನ್ನ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದಾರೆ. ದಾರಿಯುದ್ದಕ್ಕೂ ಪ್ರತಿ ಗ್ರಾಮದಲ್ಲೂ ನೂರಾರು ಬಗೆಯ ವಿಶೇಷ ಬೃಹತ್​ ಹಾರಗಳನ್ನು ಹಾಕಿ ಅಭಿಮಾನ ಮೆರೆಯುತ್ತಿದ್ದಾರೆ. ದೇಶದಲ್ಲಿ ಯಾವ ನಾಯಕರಿಗೂ ಇಂತಹ ವಿಶೇಷ ಹಾರಗಳ ಸ್ವಾಗತ ಸಿಕ್ಕಿರಲಿಲ್ಲ. ಇದೀಗ ಈ ಯಾತ್ರೆ ಏಷ್ಯಾ​ ಬುಕ್​ ಆಫ್​ ರೆಕಾರ್ಡ್ಸ್​ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದೆ.


ಕೋಲಾರದ ಮುಳಬಾಗಿಲುನಿಂದ ಶುರುವಾದ ಯಾತ್ರೆ ಇದೀಗ ತುಮಕೂರು ಜಿಲ್ಲೆಯ ಕುಣಿಗಲ್​ಗೆ ಆಗಮಿಸಿದೆ. ಚಕೋತಾ ಹಣ್ಣಿನ ಬೃಹತ್​ ಹಾರ, ಕಬ್ಬಿನ ಜಲ್ಲೆಯ ಹಾರ, ಬೆಲ್ಲದ ಹಾರ, ಕೊಬ್ಬರಿ ಹಾರ, ಕೊಬ್ಬರಿ ಹಾರ, ಸ್ಕೂಲ್​ ಬ್ಯಾಗ್​ ಹಾರ, ನೇಗಿಲು ಹಾರ, ಕಾಯಿನ್​ ಹಾರ, ಹೊಂಬಾಳೆ ಹಾರ, ಜೆಡಿಎಸ್​ ಚಿಹ್ನೆಯ ಹಾರ, ಮಣ್ಣಿನ ಹಾರ, ಕಿರೀಟ ಹಾರ… ಅಬ್ಬಬ್ಬಾ ದಾರಿಯುದ್ದಕ್ಕೂ ವಿಶೇಷ ರೀತಿಯ ವಿಭಿನ್ನ ಹಾರಗಳದ್ದೇ ಸದ್ದು. ಕುಮಾರಸ್ವಾಮಿ ಅವರನ್ನ ಅಭಿಮಾನಿಗಳು ವಿಶೇಷ ರೀತಿಯಲ್ಲಿ ಸ್ವಾಗತಿಸುತ್ತಾ, ತಮ್ಮ ಊರಿನ ಪ್ರಮುಖ ಬೆಳೆಗಳನ್ನೇ ಹಾರವಾಗಿ ಹಾಕುತ್ತಾ ತಮ್ಮೂರಿನ ಸೊಗಡನ್ನ ಪರಿಚಯಿಸುತ್ತಿದ್ದಾರೆ. ತುಮಕೂರಲ್ಲಿ ಬಡಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಆ ಶಕ್ತಿ ಭಗವಂತ ನಿಮಗೆ ನೀಡಲೆಂದು ಹಾರೈಸುತ್ತಿದ್ದಾರೆ.


ಮುಸುಕಿನ ಜೋಳದ ಹಾರ, ಸೇಬಿನ ಹಾರ, ಅನಾನಸ್​ ಹಣ್ಣಿನ ಹಾರ, ಮೂಸಂಬಿ ಹಾರ, ಗುಲಾಬಿ, ಸೇವಂತಿಗೆ, ಸೇಬಿನ ಹಾರ, ದಪ್ಪ ಮೆಣಸಿನಕಾಯಿ, ಎಲೆಕೋಸು, ಕ್ಯಾರೆಟ್​… ತರಕಾರಿ-ಹೂವಿನ ಹಾರಗಳನ್ನ ದಾರಿಯುದ್ದಕ್ಕೂ ಹಾಕುತ್ತಿದ್ದಾರೆ. ದೇವನಹಳ್ಳಿಯಲ್ಲಿ ಚಕೋತಾ ಹಣ್ಣಿನ ಬೃಹತ್​ ಹಾರ, ಮಂಡ್ಯದಲ್ಲಿ ಸಕ್ಕಾರೆ ನಾಡಿದ ಸೊಬಗನ್ನ ಪರಿಚಯಿಸುವ ನಿಟ್ಟಿನಲ್ಲಿ ಕಬ್ಬಿನ ಜಲ್ಲೆಗಳಿಂದಲೇ ತಯಾರಿಸಿದ ಹಾರ, ಬೆಲ್ಲದಿಂದ ಮಾಡಿದ ಹಾರಗಳು, ಕೊಬ್ಬರಿ ಹಾರ ಗಮನ ಸೆಳೆದವು. ಮಂಡ್ಯದಲ್ಲಿ ಹೆಲಿಕಾಪ್ಟರ್​ ಮೂಲಕ ಪುಷ್ಪವೃಷ್ಟಿ ಸುರಿಸಿ ಅಭಿಮಾನ ಮೆರೆದರು. ಕಲ್ಪತರು ನಾಡು ತುಮಕೂರಲ್ಲಿ ಕೊಬ್ಬರಿ ಹಾರ, ಸ್ಕೂಲ್​ ಬ್ಯಾಗ್​ಗಳಿಂದಲೇ ನಿರ್ಮಿಸಿದ್ದ ಬೃಹತ್​ ಹಾರ, ನೇಗಿಲು ಹಾರ, 15 ಸಾವಿರ ಕಾಯಿನ್​ ಬಳಸಿ ತಯಾರಿಸಿದ್ದ ಹಾರ, ಹೊಂಬಾಳೆ ಹಾರ, ಸೌತೆಕಾಯಿ ಹಾರ, ಜೆಡಿಎಸ್​ ಚಿಹ್ನೆಯ ಹಾರ, ಮಣ್ಣಿನ ಹಾರ, ಕಿರೀಟ ಹಾರ, ಭತ್ತ ನೇಗಿಲು ಹಾರ, ಅತ್ತಿನ ಲಾಳದ ಹಾರಗಳನ್ನ ಹಾಕಿ ಎಚ್​ಡಿಕೆಯನ್ನು ಸ್ವಾಗತಿಸಿದ್ದರು. ಈ ಅಭಿಮಾನ ಮುಂದುವರಿದಿದೆ.


ಪಂಚರತ್ನ ಯಾತ್ರೆಯಲ್ಲಿ ಈಗಾಗಲೇ ಹಾರಗಳ ಸಂಖ್ಯೆ 500ರ ಗಡಿ ದಾಟಿದೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಹಾರಗಳನ್ನ ಹಾಕಿ ಸ್ವಾಗತ ಮಾಡಿರೋದು. ರೈತರೇ ಹಾರಗಳನ್ನ ತಯಾರಿಸಿದ್ದಾರೆ. ಇದು ಏಷ್ಯಾ​ ಬುಕ್​ ಆಫ್​ ರೆಕಾರ್ಡ್ಸ್​ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ದಾಖಲಾಗಿದ್ದು, ಖುದ್ದು ಕುಮಾರಸ್ವಾಮಿ ಅವರಿಗೆ ಮೆಡಲ್​ಗಳನ್ನು ಕೊಟ್ಟು ಗೌರವಿಸಲಾಗಿದೆ.

ಭೀಕರ ಅಪಘಾತ: ಭಾರತದ ಕ್ರಿಕೆಟಿಗ ರಿಷಬ್ ಪಂತ್​ಗೆ ಗಂಭೀರ ಗಾಯ

ಬೆಡ್​ ರೂಂನಲ್ಲಿ ಕಾಣಿಸಿಕೊಂಡ 6 ಅಡಿ ಉದ್ದದ ಹಾವು! ಬೆಚ್ಚಿಬಿದ್ದ ಕುಟುಂಬಸ್ಥರು, ತುಮಕೂರಲ್ಲಿ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
