ಬಾಗಲಕೋಟೆ:ಪಂಚಮಸಾಲಿ ಮುಖಂಡರಾದ ವಿನಯ್ ಕುಲಕರ್ಣಿ ಹಾಗೂ ವಿಜಯಾನಂದ ಕಾಶಪ್ಪನವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಪಂಚಮಸಾಲಿ ಫೇಸ್​ಬುಕ್​ ಪೇಜ್​ನಲ್ಲಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಪಂಚಮಸಾಲಿ ಮುಂಚೂಣಿ ನಾಯಕರಾದ ಈ ಇಬ್ಬರನ್ನು ಸೇರಿಸಿಕೊಳ್ಳದಿದ್ರೆ ಸಮೂಹವನ್ನು ಕಡೆಗಣಿಸಿದಂತೆ. ಪಂಚಮಸಾಲಿ ಮೀಸಲಾತಿಗಾಗಿ ದುಡಿದವರಿಗೆ ಅವಕಾಶ ಸಿಗಬೇಕು. ಸಮಾಜದಲ್ಲಿ ಈ ಇಬ್ಬರು ಯುವ ನಾಯಕರು ಬೆಳೆಯುತ್ತಾರೆ ಅಂತ ಕುಂಟು ನೆಪಹೇಳಿ, ಕಾಂಗ್ರೆಸ್ ಪಕ್ಷದ ಪಟ್ಟಭದ್ರ ಹಿತಾಸಕ್ತಿಗಳು ಕುತಂತ್ರದಿಂದ ಇಬ್ಬರಿಗೂ ಸಚಿವ ಸ್ಥಾನ ತಪ್ಪಿಸಿದ್ದಾರೆಂದು ಅನುಮಾನ ಹೊರಹಾಕಿದ್ದಾರೆ.
ಇದನ್ನೂ ಓದಿ:ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ವಿರುದ್ಧ ಪ್ರಕರಣ ಚುರುಕು: ಮಂಡ್ಯ ಗ್ರಾಮಾಂತರ ಠಾಣೆಗೆ ಕೇಸ್ ವರ್ಗಾವಣೆ
ಈ ಬಗ್ಗೆ ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಸಹ ಬೇಸರ ಹೊರಹಾಕಿದ್ದಾರೆ ಎಂದು ಫೇಸ್​ಬುಕ್​ ಪೋಸ್ಟ್​ನಲ್ಲಿ ಉಲ್ಲೇಖಿಸಲಾಗಿದೆ. ಇವರಿಬ್ಬರಿಗೂ ಸಚಿವ ಸ್ಥಾನ ಕೊಡದೇ ಇದ್ದರೆ, ಈಗ ಕಾಂಗ್ರೆಸ್ ಬೆಂಬಲಿಸಿದ ಪಂಚಮಸಾಲಿ ಸಮಾಜ, ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ನೀಡಿದೆ.
ಸಮಾಜದ ಬಾಂಧವರು ಸಚಿವ ಸ್ಥಾನ ತಪ್ಪಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಲು ಫೇಸ್​ಬುಕ್ ಮೂಲಕ ಕರೆ ಕೊಡಲಾಗಿದೆ.(ದಿಗ್ವಿಜಯ ನ್ಯೂಸ್​)
ಎಜುಕೇಷನ್ ಎಕ್ಸ್‌ಪೋ ಇಂದಿನಿಂದ: ಜಯನಗರ 5ನೇ ಬ್ಲಾಕ್‌ನ ಶಾಲಿನಿ ಮೈದಾನದಲ್ಲಿ ಆಯೋಜನೆ, ರಾಮಲಿಂಗಾ ರೆಡ್ಡಿ ಚಾಲನೆ

ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಕೊಡದಿದ್ರೆ ಕಾಂಗ್ರೆಸ್​ ಕಚೇರಿ ಮುಂದೆ ಸಾಯ್ತೀನಿ! ಅಭಿಮಾನಿಯ ಪತ್ರ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
