ಬೆಂಗಳೂರು:ಕಲಿಯುಗ-ಸತ್ಯಯುಗದ ಸಂಧಿಕಾಲ ಆರಂಭವಾಗಿದ್ದು, ರಾಜಕಾರಣಿಗಳು ತಾವು ಮಾಡಿದ ಕರ್ಮಕ್ಕೆ ತಕ್ಕ ಫಲ ಅನುಭವಿಸುತ್ತಿದ್ದಾರೆ ಎಂದು ಓಡಿಶಾದ ಖ್ಯಾತ ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ ತಿಳಿಸಿದ್ದಾರೆ.
ಬಸವನಗುಡಿಯ ಶಂಕರಮಠದ ಶೀ ಭಾರತೀ ತೀರ್ಥ ಸಭಾ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ರಾಜಕಾರಣಿಗಳು ತಮ್ಮ ಕರ್ಮಕ್ಕೆ ಫಲ ಪಡೆಯುವ ದಿನ ಬಂದಿದೆ ಎಂದರು.
ಮುಂದಿನ ಮಾರ್ಚ್​ 29 ರಿಂದ 2034ರ ವರೆಗೆ ವಿಶ್ವ ಸಂಕಷ್ಟದ ದಿನ ಎದುರಿಸಲಿದೆ. ಕೆಲವು ಮಿತ್ರ ದೇಶಗಳು ಕೂಡಾ ಸೇರಿ, ಭಾರತದ ಮೇಲೆ 13 ರಾಷ್ಟ್ರಗಳು ದಾಳಿ ಮಾಡಲಿವೆ. ಈ ಯುದ್ಧದಲ್ಲಿ ಉತ್ತರ ಭಾರತ ಅಪಾರ ಕಷ್ಟ ಎದುರಿಸಲಿದೆ. ಪುರಿ ಜಗನ್ನಾಥ ದೇಗುಲ ಸಮುದ್ರದಲ್ಲಿ ಮುಳುಗುವ ಸಾಧ್ಯತೆ ಇದೆ ಎಂದು ತಿಳಿಸಿದರು. ಈ ಅವಧಿಯಲ್ಲಿ ವಿಶ್ವದಲ್ಲಿ ಹೊಸ ಸಾಂಕ್ರಾಮಿಕ ಮಹಾಮಾರಿ, ಯುದ್ಧ ನಡೆಯಲಿದೆ. 2024ರ ಬಳಿಕ ಸತ್ಯಯುಗ ಆರಂಭವಾಗಿ, ನಂತರದಲ್ಲಿ ಎಲ್ಲವು ಬದಲಾಗಲಿದೆ ಎಂದರು.
ಬಸವನಗುಡಿಯ ಶಂಕರಪುರಂನ ಶಂಕರ ಮಠದ ಶೀ ಭಾರತೀ ತೀರ್ಥ ಸಭಾಭವನದಲ್ಲಿ ಕಾಲಾನಿ ಪಂ.ಶೀ ಕಾಶಿನಾಥ್​ ಮಿಶ್ರ ಅವರು ಜೂ.30ರವರೆಗೆ ಪ್ರತಿದಿನ ಸಂಜೆ 4ರಿಂದ 7ರವರೆಗೆ ಶೀ ಮದ್ಭಾಗವತ ಮಹಾ ಪುರಾಣ ಕಥಾಮೃತ ಹಾಗೂ ಭವಿಷ್ಯ ಮಾಲಿಕಾ ಪುರಾಣ ಕಾಯಕ್ರಮ ನಡೆಸಿಕೊಡಲಿದ್ದಾರೆ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 5 =
Remember me
