ಹಾವೇರಿ:ರಾಜ್ಯದಲ್ಲಿ ಚಿರತೆಗೆಳ ಹಾವಳಿ ಹೆಚ್ಚಾಗಿದ್ದು, ಕುರಿಯನ್ನು ತಿಂದು ಹಾಕಿರುವ ಚಿರತೆಗಳು, ರೈತರ ಜಮೀನಿನ ಪಕ್ಕದ ಮರಗಳ ಮೇಲೆ ಓಡಾಡುತ್ತಿದ್ದ, ಭಯದ ವಾತಾವರಣ ಸೃಷ್ಟಿಸಿವೆ.
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮಾಸಣಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ಇಂದು ಸಂಜೆ ಕುರಿಯನ್ನು ತಿಂದಿರುವ ಚಿರತೆಗಳು ಅಲ್ಲಿರುವ ಮರಗಳನ್ನು ಏರಿ ಓಡಾಡಲಾರಂಭಿಸಿವೆ. ರೈತರ ಕಣ್ಣಿಗೆ ಕಾಣಿಸಿಕೊಂಡ ಚಿರತೆ ಹಾಗೂ ಅದರ ಮರಿಗಳು ಮೆಕ್ಕೆಜೋಳ ಬೆಳೆಯ ನಡುವೆ ಓಡಾಡಿವೆ.
ಮಾತ್ರವಲ್ಲದೆ ಮರಗಳನ್ನು ಏರಿ, ಓಡಾಡುತ್ತಿದ್ದು, ಯಾವಾಗ ಬೇರೆ ಸಾಕುಪ್ರಾಣಿಗಳು ಅಥವಾ ಮನುಷ್ಯರ ಮೇಲೆ ಎರಗುತ್ತವೋ ಎಂಬ ಆತಂಕವೂ ಮೂಡಿದೆ. ಚಿರತೆಗಳ ಈ ಓಡಾಟದ ದೃಶ್ಯವನ್ನು ಸ್ಥಳೀಯರು ಮೊಬೈಲ್​ಫೋನ್​ ಮೂಲಕ ಸೆರೆ ಹಿಡಿದಿದ್ದಾರೆ.
ಮಾಸಣಗಿ ಮಾತ್ರವಲ್ಲದೆ ಶಿಡೇನೂರು, ಕೆರವಡಿ ಹಾಗೂ ನಂದಿಹಳ್ಳಿ ಗ್ರಾಮದಲ್ಲಿ ಭಯದ ವಾತಾವರಣ ಉಂಟಾಗಿದ್ದು, ರೈತರು ಜಮೀನುಗಳಿಗೆ ತೆರಳಲಿಕ್ಕೂ ಹೆದರುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಚಿರತೆಯನ್ನು ಕಂಡು ಅವುಗಳನ್ನು ಹಿಡಿಯಲು ಅರಣ್ಯಾಧಿಕಾರಿಗಳು ಬೋನ್​ಗಳನ್ನು ಇರಿಸಿದ್ದಾರೆ.
ಹಾವೇರಿ ಜಿಲ್ಲೆ ಮಾಸಣಗಿ ಗ್ರಾಮದಲ್ಲಿ ರೈತರ ಜಮೀನಿನ ಬಳಿ ಮರಗಳ ಮೇಲೆ ಓಡಾಡುತ್ತಿರುವ ಚಿರತೆಗಳು. ಭಯದ ವಾತಾವರಣದಲ್ಲಿ ಕೃಷಿಕರು.ವಿವರಗಳಿಗೆhttps://t.co/YaFZZbZDD9ನೋಡಿ..pic.twitter.com/2Eu252tf6M
— Vijayavani (@VVani4U)August 14, 2021

ಮನೆಯಲ್ಲಿದ್ದ ವಸ್ತುಗಳನ್ನು ತಾವೇ ಚೆಲ್ಲಾಡಿ ಕಳ್ಳತನವಾಗಿದೆ ಎಂದು ಪೊಲೀಸರಿಗೆ ಸುಳ್ಳುದೂರು ಕೊಟ್ಟ ದಂಪತಿ: ಆಮೇಲಾಗಿದ್ದೇ ಬೇರೆ…

ಈತ ಡೇಟಿಂಗ್ ಕಿಂಗ್: ಇದುವರೆಗೆ 335 ಮಹಿಳೆಯರ ಜತೆ ಡೇಟ್ ಮಾಡಿರುವ ಇವನ ಟಾರ್ಗೆಟ್ ಎಷ್ಟು ಗೊತ್ತೇ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 3 =
Remember me
