ಎಲ್ಲರ ಹೃದಯದಲ್ಲೂ ಪರಮಾತ್ಮನಿದ್ದಾನೆ. ಮುಂಬರುವ ಕಷ್ಟ ಕಾಲದಲ್ಲಿ ಅಣ್ಣ ತಮ್ಮಂದಿರಂತೆ ನಡೆದುಕೊಳ್ಳಿ ಎಂಬ ಸಂದೇಶವನ್ನು ಭಕ್ತರಿಗೆ ನೀಡಿದವರು ಶ್ರೀ ಯೋಗಾನಂದ ಸರಸ್ವತೀ ಮಹಾರಾಜರು ತಮ್ಮ ಅನೇಕ ಚಮತ್ಕಾರಗಳ ಮೂಲಕ ಜನರ ಕಷ್ಟಗಳಿಗೆ ನೆರವಾದವರು. ಮೋಕ್ಷ ಸಾಧನೆಯ ಗುರಿತಲುಪುವ ಮಾರ್ಗದಲ್ಲಿ ಸಾಗಿದ ಪರಮಯೋಗಿ. ಅವರು ಜೀವಂತ ಸಮಾಧಿಸ್ಥರಾದ ಫಾಲ್ಗುಣ ಶುದ್ಧ ಪಂಚಮಿಯ ದಿನ ಇಂದು.
ಶ್ರೀ ವಿಶ್ವನಾಥ ಚಕ್ರವರ್ತಿಶ್ರೀ ಕ್ಷೇತ್ರ ಆನಂದ ವನ, ಅಗಡಿಶ್ರೀಮದ್ ಯೋಗಾನಂದ ಸರಸ್ವತೀ ಮಹಾರಾಜರ ಪೂರ್ವಾಶ್ರಮದ ಹೆಸರು ಶ್ರೀನಿವಾಸ. ಗದಗ ಜಿಲ್ಲೆಯ ವೆಂಕಟಾಪುರ ಸಮೀಪದ ಸೊರಟಾಪುರ ಅವರ ಹುಟ್ಟೂರು. ತಂದೆ ರಾಮಚಂದ್ರ ಗು. ಕಳಸಾಪುರ. ಶ್ರೀನಿವಾಸರು ಟ್ರೖೆನಿಂಗ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಶಿಕ್ಷಕ ವೃತ್ತಿಯನ್ನು ಕೈಕೊಂಡರು. ಹೊಸರಿತ್ತಿ ಗ್ರಾಮದ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಪತ್ನಿ ಸುಬ್ಬಕ್ಕ. ಒಬ್ಬಳೇ ಮಗಳು.
ಶ್ರೀನಿವಾಸರ ದೈವ ಕಣ್ತೆರೆಯಿತು. ಒಮ್ಮೆ ಆಕಸ್ಮಿಕವಾಗಿ ವಾಸುದೇವಾನಂದ ಸರಸ್ವತೀ ಯತಿಗಳ (ಟೇಂಬೇ ಮಹಾರಾಜರ) ದರ್ಶನವಾಯಿತು. ಅಂದಿನಿಂದ ಅವರ ಜೀವನದ ಮಾರ್ಗವೇ ಬದಲಾಗಿ ಬಿಟ್ಟಿತು. ಐಹಿಕ ಸುಖಗಳನ್ನೆಲ್ಲ ತೊರೆದು ಟೇಂಬೇ ಮಹಾರಾಜರ ಶಿಷ್ಯತ್ವ ಸ್ವೀಕರಿಸಿ ಶ್ರೀಮದ್ ಯೋಗಾನಂದ ಸರಸ್ವತೀ ಮಹಾರಾಜರೆಂಬ ಅಭಿದಾನದೊಂದಿಗೆ ಅವರ ಅನುಗ್ರಹಕ್ಕೆ ಪಾತ್ರರಾದರು. ಮೋಕ್ಷ ಸಾಧನೆಯ ಗುರಿ ತಲುಪುವ ಮಾರ್ಗದಲ್ಲಿ ಉತ್ತರ ಭಾರತದ ವಿವಿಧ ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ ಪಡೆದ ಯತಿಗಳು ತಮ್ಮ ಮುಂದಿನ ಸಾಧನೆಗಾಗಿ ಯಲ್ಲಮ್ಮನ ಗುಡ್ಡದ ದತ್ತ ಮಂದಿರಕ್ಕೆ ಬಂದರು. ಪ್ರತಿನಿತ್ಯ ಬ್ರಾಹ್ಮೀ ಮುಹೂರ್ತದ ಹೊತ್ತಿಗೆ ಗುಡ್ಡದ ಎಣ್ಣೆಗೊಂಡದಲ್ಲಿ ಸ್ನಾನ ಆಹ್ನಿಕ ಮುಗಿಸಿ ಘನಘೊರ ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದರು.
ಒಮ್ಮೆ ಬೈಲಹೊಂಗಲ ತಾಲ್ಲೂಕು ಗೋವನಕೊಪ್ಪದ ರಾಮನಗೌಡರು ಮತ್ತು ರಂಗಪ್ಪಗೌಡರು ಯಲ್ಲಮ್ಮನಗುಡ್ಡಕ್ಕೆ ಬಂದಿದ್ದರು. ಯೋಗಾನಂದ ಸರಸ್ವತೀ ಮಹಾರಾಜರ ದರ್ಶನ ಪಡೆದು ತಮ್ಮ ಊರಾದ ಗೋವನಕೊಪ್ಪದಲ್ಲಿ ಗಾಯತ್ರೀ ಪುರಶ್ಚರಣ ಮಾಡುವಂತೆ ವಿನಂತಿಸಿಕೊಂಡರು. ಈ ಆಹ್ವಾನವನ್ನೊಪ್ಪಿದ ಮಹಾರಾಜರು ಗೋವನಕೊಪ್ಪಕ್ಕೆ ಬಂದರು. ಹೀಗೆ ಗೋವನ ಕೊಪ್ಪಕ್ಕೆ ಬಂದ ಮಹಾರಾಜರು ಇಹಜನ್ಮ ತ್ಯಾಗ ಮಾಡುವವರೆಗೆ ಅಲ್ಲಿಯೇ ಉಳಿದುಬಿಟ್ಟರು.
ಗುರುಗಳಿಗೆ ಚಂದ್ರಕಲಾ ಪರಮೇಶ್ವರಿಯ ಸಂಪೂರ್ಣ ಅನುಗ್ರಹವಿದ್ದಿತು. ಮಹಾರಾಜರ ಪೂಜೆ, ಧ್ಯಾನ, ತಪಸ್ಸು, ಅನುಷ್ಠಾನಕ್ಕೆ ಅನುಕೂಲವಾಗುವಂತೆ ರಾಮನಗೌಡರು ಗವಿಯೊಂದನ್ನು ಕಟ್ಟಿಸಿಕೊಟ್ಟರಲ್ಲದೇ ತಾವೇ ಸ್ವತಃ ಅವರ ಸೇವೆಗೆ ನಿಂತರು. ಮಹಾರಾಜರು 1935ರ ಫೆ. 7ರಂದು (ಮಾಘ ಶುದ್ಧ ಚತುರ್ದಶಿ) ಗುರುವಾರ ಸನ್ಯಾಸ ಸ್ವೀಕರಿಸಿದರು. ಗುರುಗಳು ಶ್ರೀ ಬ್ರಹ್ಮ ಚೈತನ್ಯರು ಹಾಗೂ ಬ್ರಹ್ಮಾನಂದರ ಪರಮ ಕೃಪೆಗೆ ಪಾತ್ರರಾಗಿದ್ದರು.
ಗುರುಗಳ ಜೀವಿತಾವಧಿಯಲ್ಲಿ ಅನೇಕ ಚಮತ್ಕಾರಗಳು ನಡೆದವು. ಧಾರವಾಡದ ಸೋಮೇಶ್ವರದಲ್ಲಿ ಗುರುಗಳು ಗಾಯತ್ರೀ ಯಾಗ ಮಾಡುವಾಗ ಜೀರಗ್ವಾಡದ ತಾ.ಪ್ರಾ. ದೇಶಪಾಂಡೆಯವರು ಹೊಂಡದಲ್ಲಿ ಬಿದ್ದು ಬಿಟ್ಟರು. ಆಗ ಗುರುಗಳು ತಮ್ಮ ಮೇಲ್ವಸ್ತ್ರವನ್ನು ಅವರ ಮೇಲೆ ಹೊದಿಸಿ ಬದುಕಿಸಿದರು. ಹಾಗೆಯೇ ಧಾರವಾಡದ ನಾರಾಯಣ ಎಂಬುವವರ ಮನೆಯಲ್ಲಿ ಗುರುಗಳು ವಾಸ್ತವ್ಯ ಮಾಡಿದ್ದರು. ಆಗ ನಾರಾಯಣ ಜ್ವರದಿಂದ ನರಳುತ್ತಿದ್ದರು. 40 ದಿನಗಳಾದರೂ ಜ್ವರ ತಗ್ಗಿರಲಿಲ್ಲ. ಅವರನ್ನು ತಂದು ಗುರುಗಳ ಪದತಲದಲ್ಲಿ ಹಾಕಿದಾಗ ಅವರ ಜ್ವರ ತಗ್ಗಿತು.
ಅಪಾರ ಸಾಧಕರಾಗಿದ್ದ ಯತಿವರ್ಯರು 1935ರಲ್ಲಿ ಒಮ್ಮೆ ಶಿಷ್ಯರನ್ನೆಲ್ಲ ಕರೆದು ದೇವಿಯ ಅಪ್ಪಣೆ ಯಂತೆ ಫಾಲ್ಗುಣ ಶುದ್ಧ ಪಂಚಮಿಯಂದು ತಾವು ಜೀವಂತ ಸಮಾಧಿ ಹೊಂದುವುದಾಗಿ ಪ್ರಕಟಿಸಿದರು. ಆ ಘೊಷಣೆಯಂತೆ ಅಂದು, ಅಂದರೆ ಫಾಲ್ಗುಣ ಶುದ್ಧ ಪಂಚಮಿ ಶನಿವಾರ (1935ರ ಮಾ.4) ಬೆಳಗ್ಗೆ 6 ಗಂಟೆಗೆ ಶಿಷ್ಯರನ್ನೆಲ್ಲ ಕರೆಸಿ ಸಮಾಧಿಯಾಗುವ ಸಲುವಾಗಿ ಗುಣಿ ತೋಡುವಂತೆ ಆದೇಶಿಸಿದರು. ಸಂಜೆ 4ರ ಸುಮಾರಿಗೆ ಗುಣಿ ಸಿದ್ಧವಾಯಿತು. ರಾಮನಗೌಡರ ಮನೆ ಯಲ್ಲಿ ಕೃಷ್ಣಾಜಿನ ಹಾಸಿ ಅದರ ಮೇಲೆ ಕುಳಿತು ‘ಎಲ್ಲರ ಹೃದಯದಲ್ಲೂ ಪರಮಾತ್ಮನಿದ್ದಾನೆ. ಮುಂಬರುವ ಕಷ್ಟ ಕಾಲದಲ್ಲಿ ಅಣ್ಣ ತಮ್ಮಂದಿರಂತೆ ನಡೆದುಕೊಳ್ಳಿ’ ಎಂಬ ಆಶೀರ್ವಚನ ನೀಡಿ ಜೀವಂತ ಸಮಾಧಿಸ್ಥರಾದರು.
ಸಾಕಷ್ಟು ಅಚ್ಚರಿಯಿಂದ ಕೂಡಿದ ಬಿಜೆಪಿಯ ಎರಡನೇ ಪಟ್ಟಿ; ರಾಜ್ಯದ ಹಲವು ಸಂಸದರಿಗೆ ಟಿಕೆಟ್ ಮಿಸ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
