ಬೆಂಗಳೂರು:ಹಿಂದಿನ ರಾಜಕಾರಣಕ್ಕೆ ಹೋಲಿಸಿದರೆ ಈಗಿನ ರಾಜಕಾರಣ ಕಲುಷಿತಗೊಂಡಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂಕಿತ ಪುಸ್ತಕ ಪ್ರಕಾಶನ ವತಿಯಿಂದ ಭಾನುವಾರ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ರಚಿಸಿರುವ ‘ಕಾಗೆ ಕಾರುಣ್ಯದ ಕಣ್ಣು’ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಇಂದಿನ ದಿನಗಳಲ್ಲಿ ದಿನದಿಂದ ದಿನಕ್ಕೆ ರಾಜಕಾರಣದ ಮೌಲ್ಯ ಕುಸಿತವಾಗುತ್ತಿವೆ. ಇದರ ಬಗ್ಗೆ ನೇರವಾಗಿ ಪುಸ್ತಕದಲ್ಲಿ ಹೇಳದಿದ್ದರೂ ಕೆಲ ಅಂಶ ಪ್ರಸ್ತಾಪಿಸಲಾಗಿದೆ. ಬರಗೂರು ರಾಮಚಂದ್ರಪ್ಪ ಬರೆದಿರುವ ಕೃತಿಗಳು ಸಮಾಜಕ್ಕೆ ಒಳ್ಳೆಯ ಸಂದೇಶ ಕೊಟ್ಟಿವೆ. ಈಗ ಹೊರ ಬಂದಿರುವ ಪುಸ್ತಕವೂ ನಮಗೆಲ್ಲರಿಗೂ ಪ್ರೇರಣೆ ಕೊಟ್ಟಿದೆ. ಪುಸ್ತಕದಲ್ಲಿ ಕಾಗೆ ವ್ಯಕ್ತಿತ್ವವನ್ನು ಎಲ್ಲರಿಗೂ ತಿಳಿಸುವ ಕೆಲಸವನ್ನು ಮಾಡಿದ್ದಾರೆ. ಕಾಗೆಯ ಭಾವನೆ ಮತ್ತು ಹಂಚಿಕೊಂಡು ತಿನ್ನುವ ಬಳಗ ಬಂಧುತ್ವವನ್ನು ಪುಸ್ತಕದಲ್ಲಿ ಅದ್ಬುತವಾಗಿ ವರ್ಣಿಸಲಾಗಿದೆ ಎಂದು ಶ್ಲಾಘಿಸಿದ್ದಾರೆ.
ಇದನ್ನೂ ಓದಿ:VIDEO| ಸಾಮಾಜಿಕ ಜಾಲತಾಣದಲ್ಲಿ ಹವಾ ಕ್ರಿಯೆಟ್​ ಮಾಡಲು ಹೋದವರಿಗೆ ಟಕ್ಕರ್​ ಕೊಟ್ಟ ಪೊಲೀಸ್​
ಪ್ರಜಾಪ್ರಭುತ್ವದಲ್ಲಿ ಜಾತಿ, ಧರ್ಮಗಳ ಸಾಮರಸ್ಯದಿಂದ ನಾವೆರಲ್ಲರೂ ಬಾಳಬೇಕಿದೆ. ಆದರೆ, ಇವತ್ತಿನ ಪ್ರಜಾಪ್ರಭುತ್ವ ಸ್ವೇಚ್ಛಾಚಾರಕ್ಕೆ ತಿರುಗಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಪಾಲಿಸದಿರುವ ಕಾರಣ ಅನೇಕ ರಾಷ್ಟ್ರಗಳು ಹಾಗೂ ನಾಗರೀಕತೆ ನಾಶವಾಗಿವೆ. ಆದ್ದರಿಂದ, ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸುವ ಕೆಲಸವಾಗಬೇಕಿದೆ. ಬಡತನ ಮೀರಿ ಸಾಹಿತ್ಯ ಕ್ಷೇತ್ರದಲ್ಲಿ ಬರಗೂರು ರಾಮಚಂದ್ರಪ್ಪ ಒಳ್ಳೆಯ ಸಾಧನೆ ಮಾಡಿದ್ದಾರೆ. ಇವರನ್ನು ‘ಸಾಧನೆಯ ಶಿಲ್ಪಿ’ ಎಂದು ಕರೆಯಬಹುದು. ಕಾಲೇಜಿನಲ್ಲಿ ಮಾರ್ಕ್ಸ್ ಕಾರ್ಡ್ ನೋಡಿ ನೋಡಿ ಇವರು ಮಾರ್ಕ್ಸ್‌ವಾದಿ ಆಗಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ವಿಮರ್ಶಕ ಕೆ.ವಿ.ನಾರಾಯಣ ಮಾತನಾಡಿ, ಬರವಣಿಗೆ ಸಂದರ್ಭದಲ್ಲಿ ನೆನಪುಗಳ ಅವಶ್ಯಕತೆ ತುಂಬ ಮುಖ್ಯ. ವ್ಯಕ್ತಿಗತ, ಚಾರಿತ್ರಿಕ, ಸಾಂಸ್ಕೃತಿಕ ಸೇರಿ ಅನೇಕ ನೆನಪುಗಳ ಬಗ್ಗೆ ನಾವು ವಿಚಿತ್ರವಾದ ಹೇಳಿಕೆ ಕೇಳಿದ್ದೇವೆ. ಬರಗೂರು ಅವರಲ್ಲಿ ಇಬ್ಬರು ಬರಗೂರು ರಾಮಚಂದ್ರಪ್ಪರಿದ್ದಾರೆ. ವೈಯುಕ್ತಿಕ ನೆಲೆಗಟ್ಟಿನಲ್ಲಿ ತಮ್ಮೊಳಗಡೆನೆ ತಾವಿರುವಂತಹ ಒಬ್ಬ ವ್ಯಕ್ತಿಯಾದರೆ, ಇನ್ನೊಂದು ಸಾಮಾಜಿಕ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಯನ್ನು ಕಾಣಬಹುದು ಎಂದರು.
ಮೆರವಣಿಗೆಯಲ್ಲಿಯೂ ಒಂಟಿಯಾಗಿ, ಸಂತೆಯಲ್ಲೂ ಸಂತನಾಗಿರಲು ಲೇಖಕ ಕಲಿಯಬೇಕು. ‘ಕಾಗೆ ಕಾರುಣ್ಯದ ಕಣ್ಣು’ ಕೃತಿಗೆ ಆ ಹೆಸರನ್ನಿಟ್ಟ ಕಾರಣ ಕಾಗೆ ಸೌಹರ್ದತೆ ಹಾಗೂ ಸಮುದಾಯದ ಪ್ರಜ್ಞೆಯನ್ನು ಎಚ್ಚರಿಸುತ್ತದೆ. ಅದರ ಬಳಗ, ಸೌಹರ್ದತೆ ಪ್ರಜ್ಞೆಯು ಇವತ್ತು ನಮ್ಮ ದೇಶಕ್ಕೆ ಬೇಕಿದೆ. ಅದು ಇದೆಯೇ ಎಂಬುವುದನ್ನು ನಾವೆಲ್ಲರೂ ಗಮನಿಸಬೇಕಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು. ಮಹಾತ್ಮ ಗಾಂಧಿ, ಬುದ್ಧ, ಡಾ.ಬಿ.ಆರ್. ಅಂಬೇಡ್ಕರ್, ಜಗದ್ಗುರು ಬಸವಣ್ಣ, ಸ್ವಾಮಿ ವಿವೇಕಾನಂದರು ಎಂದಿಗೂ ಹಿಂಸೆಯನ್ನು ಪ್ರತಿಪಾದಿಸಿದವರಲ್ಲ. ಅವರ ವಿಚಾರಧಾರೆಗಳಲ್ಲಿ ಕೆಲ ಭಿನ್ನ ನೆಲೆಗಳಿರಬಹುದು. ಆದರೆ, ಒಟ್ಟು ಸಮಾಜದ ಒಳಗೆ ಅಹಿಂಸೆಯನ್ನೇ ಪ್ರತಿಪಾದಿಸಿದರು. ಇಂಥ ನೆಲದಲ್ಲಿ ಸದ್ಯ ಅಹಿಂಸೆ ಹೆಚ್ಚಾಗುತ್ತಿದೆ. ಭಾಷಿಕ ಹಿಂಸೆ ಮುನ್ನೆಲೆಗೆ ಬರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − ten =
Remember me
