ಬೆಂಗಳೂರು:ಉಪ ಚುನಾವಣೆ ನಡೆಯುತ್ತಿರುವ ಆರ್​ ಆರ್​ ನಗರ ಹೈವೋಲ್ಟೇಜ್​ ಕ್ಷೇತ್ರವಾಗಿ ಪರಿಣಮಿಸಿದೆ. ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ವಾಕ್ಸಮರ ಜೋರಾಗಿದ್ದು, ಹಲ್ಲೆ-ಧಮ್ಕಿ, ಆರೋಪ-ಪ್ರತ್ಯಾರೋಪ ಜತೆಗೆ ಕೊಲೆ ಭೀತಿಯ ಮಾತುಗಳೂ ಕೇಳಿಬರುತ್ತಿವೆ. ಇದೀಗ ಈ ಕ್ಷೇತ್ರಕ್ಕೆ ಪ್ಯಾರಾ ಮಿಲಿಟರಿ ಪಡೆ ಎಂಟ್ರಿ ಕೊಟ್ಟಿದೆ.
ಕೆಲವರು ಹೊರಗಿನಿಂದ ಬಂದು ಕ್ಷೇತ್ರದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಲು ಸಂಚು ರೂಪಿಸಿದ್ದಾರೆ. ಕಟ್ಟೆಚ್ಚರ ವಹಿಸಲು ಅರೆ ಮಿಲಿಟರಿ ಬದಲಾಗಿ ಸೇನಾಪಡೆ ತುಕಡಿ ನಿಯೋಜಿಸಲು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿದ್ದೇನೆ ಎಂದು ಗುರುವಾರವಷ್ಟೇ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದ್ದರು.
ಶುಕ್ರವಾರ ಬೆಳಗ್ಗೆಯೂ ಇದೇ ಮಾತನ್ನು ಪುನರುಚ್ಚರಿಸಿದ್ದ ಅವರು, ಪ್ಯಾರಾ ಮಿಲಿಟರಿ ಫೋರ್ಸ್ ಬಂದ್ರೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಲಿದೆ ಎಂದಿದ್ದರು. ಸದ್ಯ ಆರ್​ ಆರ್​ ನಗರಕ್ಕೆ ಪ್ಯಾರಾ ಮಿಲಿಟರಿ ಪಡೆ ಬಂದಿರುವ ಕುರಿತು ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ನನಗೆ ಬಹಳ ಸಂತೋಷವಾಗಿದೆ. ಲಾ ಆ್ಯಂಡ್ ಆರ್ಡರ್ ಪ್ರಾಬ್ಲಂ ಇಲ್ಲ ಅನ್ನೋದು ಎಲ್ಲರಿಗೂ ಗೊತ್ತಾಗಿದೆ. ಚುನಾವಣೆಯಲ್ಲಿ ನಡೆಯುತ್ತಿರುವ ಮಿಸ್​ಯೂಸ್ ಬಗ್ಗೆ ಚುನಾವಣಾ ಆಯೋಗದ ಗಮನಕ್ಕೆ ಬಂದಿದೆ ಎಂದರು.
ಚುನಾವಣೆ ಸಮಯದಲ್ಲಿ ಕೊಲೆಗಳಾಗುತ್ತೆ ಎಂಬ ಮುನಿರತ್ನ ಹೇಳಿಕೆ ವಿಚಾರಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಡಿಕೆಶಿ, ಕೊಲೆ ಮಾಡುವ ಮನೋಭಾವ ಉಳ್ಳವರು ಈ ಮಾತು ಹೇಳಿದ್ದಾರೆ. ತಾವು ಏನ್ ಮಾಡ್ತೇವೆ ಎಂದು ಸ್ವತಃ ಬಿಜೆಪಿ ಅಭ್ಯರ್ಥಿಯೇ ಹೇಳಿದ್ದಾರೆ ಎಂದು ಟೀಕಿಸಿದರು.
ನ.17ಕ್ಕೆ ಕಾಲೇಜು ಆರಂಭ, ತರಗತಿಗೆ ಬರೋದು-ಬಿಡೋದು ವಿದ್ಯಾರ್ಥಿಗಳಿಗೆ ಬಿಟ್ಟದ್ದು!

‘ಧಮ್ಕಿಗಿಮ್ಕಿ ಹಾಕಿದ್ರೆ ಪೊಲೀಸ್​ ಸ್ಟೇಷನ್​ ಮುಂದೆಯೇ ಚುನಾವಣೆ! ಮುನಿರತ್ನಗೆ ಇದು ಕೊನೇ ವಾರ್ನಿಂಗ್​’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + twenty =
Remember me
