ಬೆಂಗಳೂರು:ಆರ್​ ಆರ್​ ನಗರ ಕ್ಷೇತ್ರದ ಬೈ ಎಲೆಕ್ಷನ್​ನಲ್ಲಿ ಪ್ಯಾರಾ ಮಿಲಿಟರಿ ತುಕಡಿ ನಿಯೋಜನೆ ಅತ್ಯಗತ್ಯ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಪುನರುಚ್ಛರಿಸಿದ್ದಾರೆ.
ಕೆಲವರು ಹೊರಗಿನಿಂದ ಬಂದು ಕ್ಷೇತ್ರದಲ್ಲಿ ಅಶಾಂತಿಯ ವಾತಾವರಣ ನಿರ್ಮಿಸಲು ಸಂಚು ರೂಪಿಸಿದ್ದಾರೆ. ಅದನ್ನು ಸಮರ್ಥವಾಗಿ ಎದುರಿಸುವ ಶಕ್ತಿ ಸ್ಥಳೀಯರಿಗಿದೆ. ಆದರೂ ಭದ್ರತೆ ವಿಚಾರವಾಗಿ ಕಟ್ಟೆಚ್ಚರ ವಹಿಸಲು ಅರೆ ಮಿಲಿಟರಿ ಬದಲಾಗಿ ಸೇನಾಪಡೆ ತುಕಡಿ ನಿಯೋಜಿಸಲು ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿರುವುದಾಗಿ ಗುರುವಾರ ಮುನಿರತ್ನ ಹೇಳಿದ್ದರು. ಇದೇ ವಿಚಾರವಾಗಿ ಶುಕ್ರವಾರ ಮಾತನಾಡಿದ ಅವರು, ಪ್ಯಾರಾ ಮಿಲಿಟರಿ ಫೋರ್ಸ್ ಕರೆಸುವ ಬಗ್ಗೆ ಸಿಎಂ ಯಡಿಯೂರಪ್ಪ ಮತ್ತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದೇನೆ. ಪ್ಯಾರಾ ಮಿಲಿಟರಿ ಫೋರ್ಸ್ ಬಂದ್ರೆ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಲಿದೆ ಎಂದರು.
ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವ ಮುನಿರತ್ನ, ಶುಕ್ರವಾರ ಬೆಳಗ್ಗೆ ಜಾಲಹಳ್ಳಿ ವಾರ್ಡಿನಲ್ಲಿ ಮನೆ ಮನೆ ಪ್ರಚಾರ ಮಾಡಿದರು. ಯುದ್ಧದಲ್ಲಿ ಎದುರಾಳಿ ಸರಿಸಮ‌ ಇದ್ದರೆ ಹೋರಾಡಬಹುದು ಎಂದು ಡಿಕೆಶಿ ಹೇಳಿಕೆಗೆ ಇದೇ ವೇಳೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ಮುನಿರತ್ನ, ಡಿಕೆಶಿ ಹೇಳಿದ ಮಾತು ಸತ್ಯ. ಅವರ ಸರಿಸಮನಾಗಲು ನನಗೆ ಸಾಧ್ಯವೇ ಇಲ್ಲ. ಏಳೇಳು ಜನ್ಮದಲ್ಲೂ ಡಿಕೆಶಿ ಅವರಿಗೆ ನಾನು ಸರಿಸಾಟಿ ಆಗಲಾರೆ. ಡಿಕೆಶಿ ಎಂಥ ದೊಡ್ಡವರು, ಅವರ ಮುಂದೆ ನಾನು ಸಣ್ಣವ. ಅವರು ಇವತ್ತು ಯಾವ ಮಟ್ಟದಲ್ಲಿದ್ದಾರೆ, ನಾನು ಆ ಮಟ್ಟಕ್ಕೆ ತಲುಪಲು ಆಗಲ್ಲ. ಡಿಕೆಶಿ ಅವರಿಗೂ-ನನಗೂ ಹೋಲಿಕೆ ಮಾಡಿ ಮಾತಾಡೋದೇ ತಪ್ಪು ಎಂದರು.
ಊರಿಗೆ ಊರೇ ಕೊಚ್ಚಿಕೊಂಡು ಹೋದರೂ ಸಾಹೇಬ್ರಿಗೆ ಟೆನ್ಶನ್​ ಇಲ್ಲ!

ಶಿರಾ, ಆರ್​ಆರ್​ ನಗರ ಉಪ ಚುನಾವಣೆಯಲ್ಲಿ ಗೆಲುವು ಯಾರಿಗೆ? ಇಲ್ಲಿದೆ ಕಾಂಗ್ರೆಸ್​ ಇಂಟರ್ನಲ್​ ರಿಪೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
