ಬೆಂಗಳೂರು : ವೃತ್ತಿಪರ ಕೋರ್ಸ್​ಗಳಿಗೆ ಸರ್ಕಾರ ನಿಗದಿ ಪಡಿಸಿರುವ ಶುಲ್ಕಕ್ಕಿಂತ ಕಾಲೇಜುಗಳು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಕಡಿವಾಣ ಬೀಳಬೇಕಾದರೆ ಪಾಲಕರು ಎಚ್ಚೆತ್ತುಕೊಂಡು ಅನ್ಯಾಯದ ವಿರುದ್ಧ ದೂರು ದಾಖಲಿಸಬೇಕಿದೆ.ರಾಜ್ಯ ಸರ್ಕಾರ ಈ ರೀತಿಯ ಪ್ರವೇಶ ಶುಲ್ಕ ಸಂಬಂಧಿತ ದೂರು ಸ್ವೀಕರಿಸುವುದಕ್ಕಾಗಿಯೇ ಪ್ರವೇಶ ಮೇಲ್ವಿಚಾರಣಾ ಸಮಿತಿ ರಚಿಸಿದೆ. ನ್ಯಾ.ಬಿ.ಮನೋಹರ್​ ಸಮಿತಿ ಅಧ್ಯಕ್ಷರಾಗಿದ್ದಾರೆ. ಯುಜಿ ಸಿಇಟಿ ಮತ್ತು ಯುಜಿ ನೀಟ್​ ಮೂಲಕ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಈಗಾಗಲೇ ನಿಗದಿ ಪಡಿಸಿರುವ ಶುಲ್ಕಕ್ಕಿಂತ ಹೆಚ್ಚು ಶುಲ್ಕ ಪಡೆಯುವ ಕಾಲೇಜುಗಳ ಮಾತಿಗೆ ಬಗ್ಗದೇ ಪಾಲಕರು ಮತ್ತು ವಿದ್ಯಾರ್ಥಿಗಳು ನೇರವಾಗಿ ಸಮಿತಿಗೆ ದೂರು ದಾಖಲಿಸಬೇಕಿದೆ. ದೂರು ಬಾರದೆಯೇ ಕಾಲೇಜು ವಿರುದ್ಧ ಯಾವುದೇ ಕ್ರಮ ಜರುಗಿಸುವ ಅಧಿಕಾರ ಸಮಿತಿಗೆ ಇರುವುದಿಲ್ಲ.ಹೆಚ್ಚುವರಿ ಶುಲ್ಕದ ಪ್ರಮಾಣ ಕಡಿಮೆಯಾಗಲಿ, ಜಾಸ್ತಿಯಾಗಲಿ ಇದನ್ನು ಲೆಕ್ಕಿಸದೇ ದೂರು ನೀಡುವುದೇ ಉತ್ತಮವಾಗಿದೆ. ಅಭ್ಯರ್ಥಿಗಳು ಸಮಿತಿಗೆ ಬಂದು ದೂರು ನೀಡಬೇಕೆಂದಿಲ್ಲ. ಸಿಇಟಿ ಪ್ರವೇಶ ಪತ್ರದಲ್ಲೇ ತಿಳಿಸಿರುವಂತೆ ಆಯಾ ಜಿಲ್ಲಾಧಿಕಾರಿಗಳಿಗೂ ದೂರು ಸಲ್ಲಿಸಲು ಅವಕಾಶ ಇದೆ.ಭಯ ಬಿಡಬೇಕು: ಕಾಲೇಜು ಆಡಳಿತ ಮಂಡಳಿ ವಿರುದ್ಧವೇ ದೂರು ನೀಡಿದರೆ ಮುಂದೆ ವಿದ್ಯಾರ್ಥಿ ವ್ಯಾಸಂಗಕ್ಕೆ ತೊಂದರೆ ಮಾಡಬಹುದು, ಆಂತರಿಕ ಅಂಕ ನೀಡದೇ ಅನುತ್ತೀರ್ಣಕ್ಕೂ ಕಾಲೇಜು ಮುಂದಾಗಬಹುದು ಎಂಬ ಆಲೋಚನೆ ಬಿಟ್ಟು ದೂರು ನೀಡಬೇಕಿದೆ. ಇಲ್ಲವಾದರೆ, ಕಾಲೇಜು ಆಡಳಿತ ಮಂಡಳಿ ತಮ್ಮ ಚಾಳಿಯನ್ನು ಮುಂದುವರಿಸುತ್ತಲೇ ಇರುತ್ತದೆ.ಶುಲ್ಕ ವಾಪಸ್​ ನೀಡಿ: ವಿದ್ಯಾರ್ಥಿಯಿಂದ ಹೆಚ್ಚುವರಿ ಶುಲ್ಕ ಪಡೆಯಲು ಮುಂದಾದ ಮಂಗಳೂರಿನಲ್ಲಿರುವ ಖಾಸಗಿ ಇಂಜಿನಿಯರಿಂಗ್​ ಕಾಲೇಜು ಮತ್ತು ವೈದ್ಯಕಿಯ ಕಾಲೇಜಿಗೆ ಪ್ರವೇಶ ಮೇಲ್ವಿಚಾರಣಾ ಸಮಿತಿ ನೋಟಿಸ್​ ನೀಡಿ ವಿದ್ಯಾರ್ಥಿಯಿಂದ ಪಡೆದಿರುವ ಹೆಚ್ಚುವರಿ ಶುಲ್ಕವನ್ನು ಹಿಂತಿರುಗಿಸುವಂತೆ ಸೂಚಿಸಿದೆ.ಮಂಗಳೂರಿನ ಸಹ್ಯಾದ್ರಿ ಕಾಲೇಜ್​ ಆ್​ ಇಂಜಿನಿಯರಿಂಗ್​ ಆ್ಯಂಡ್​ ಮ್ಯಾನೇಜ್​ಮೆಂಟ್​ ಮತ್ತು ಶ್ರೀನಿವಾಸ ಇನ್​ಸ್ಟಿಟ್ಯೂಟ್​ ಆ್​ ಸೈನ್ಸ್​ ಆ್ಯಂಡ್​ ರಿಸರ್ಚ್​ ಸೆಂಟರ್​ ಈ ಕಾಲೇಜುಗಳಿಗೆ ನೋಟಿಸ್​ ಜಾರಿ ಮಾಡಿ ವಿದ್ಯಾರ್ಥಿಗಳಿಗೆ ಶುಲ್ಕ ವಾಪಸ್​ ಮಾಡುವಂತೆ ಸೂಚಿಸಿದೆ.ಕಾಲೇಜು ಆಡಳಿತ ಮಂಡಳಿ ಹೆಚ್ಚುವರಿಯಾಗಿ 19,750 ರೂ.ಗಳನ್ನು ಪಡೆದಿದೆ ಎಂದು 4ನೇ ವರ್ಷದ ಇಂಜಿನಿಯರಿಂಗ್​ ವಿದ್ಯಾರ್ಥಿ ದೂರು ನೀಡಿದ್ದ. 45 ದಿನಗಳಲ್ಲಿ ಕಾಲೇಜು ಶುಲ್ಕ ವನ್ನು ವಾಪಸ್​ ನೀಡಲಿಲ್ಲವಾದರೆ ದಂಡ ವಿಧಿಸುವುದು ಹಾಗೂ ಮಾನ್ಯತೆ ಹಿಂಪಡೆಯಲಾಗುವುದು ಎಂದು ಎಚ್ಚರಿಕೆ ನೀಡಿದೆ.ಎಂಬಿಬಿಎಸ್​ನಲ್ಲಿ ವಿದ್ಯಾರ್ಥಿಯಿಂದ 75 ಸಾವಿರ ರೂ.ಗಳನ್ನು ಹೆಚ್ಚುವರಿಯಾಗಿ ಪಡೆದಿರುವುದನ್ನು ವಿರೋಧಿಸಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜಿಗೆ ನೋಟಿಸ್​ ನೀಡಿ 30 ದಿನಗಳಲ್ಲಿ ಶುಲ್ಕ ವಾಪಸ್​ ಮಾಡಬೇಕು. ಇಲ್ಲವಾದರೆ, ಶೇ.6 ಬಡ್ಡಿ ಸಹಿತ ಶುಲ್ಕ ವಾಪಸ್​ ಮಾಡಬೇಕೆಂದು ಸೂಚಿಸಿದೆ.
ನಿಗದಿತ ಶುಲ್ಕಕ್ಕಿಂತ ಹೆಚ್ಚು ಶುಲ್ಕ ಕೇಳುವ ಕಾಲೇಜುಗಳಿಗೆ ಪಾಲಕರು ಹೆಚ್ಚುವರಿ ಶುಲ್ಕ ಪಾವತಿ ಮಾಡಬಾರದು. ನೇರವಾಗಿ ಸಮಿತಿಗೆ ದೂರು ನೀಡಬೇಕು. ಅಂದಾಗ ಮಾತ್ರ ನಾವು ಕಾಲೇಜು ವಿರುದ್ಧ ಕ್ರಮ ಜರುಗಿಸಲು ಸಾಧ್ಯ.
ನ್ಯಾ.ಬಿ.ಮನೋಹರ್​, ಅಧ್ಯಕ್ಷ, ಪ್ರವೇಶ ಮೇಲ್ವಿಚರಣಾ ಸಮಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 4 =
Remember me
