ಬೆಂಗಳೂರು:ಆರ್ಥಿಕ ಸಂಕಷ್ಟದಲ್ಲೂ ಬಹುತೇಕ ಶಾಲೆಗಳು ಪಾಲಕರಿಂದ ಹೆಚ್ಚುವರಿ ಶುಲ್ಕ ವಸೂಲಿಗೆ ಮುಂದಾಗಿವೆ. ಹೆಚ್ಚುವರಿ ಶುಲ್ಕ ವಸೂಲಿ ಮಾಡುವ ಬಗ್ಗೆ ದೂರು ದಾಖಲಿ ಸಲು ಶಿಕ್ಷಣ ಇಲಾಖೆ ರೂಪಿಸಿದ ಸಹಾಯವಾಣಿಗೆ 50ಕ್ಕೂ ಹೆಚ್ಚಿನ ಶಾಲೆಗಳ ವಿರುದ್ಧ ಪಾಲಕರು ದೂರು ನೀಡಿದ್ದಾರೆ.
ಖಾಸಗಿ ಶಾಲೆಗಳು ವರ್ಷದಿಂದ ವರ್ಷಕ್ಕೆ ಪಡೆಯುವ ಶುಲ್ಕದಲ್ಲಿ ಹೆಚ್ಚಳ ಮಾಡಬಾರದು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದ್ದರೂ ಲೆಕ್ಕಿಸದೆ ಶಾಲೆಗಳು ಶೇ.10ರಿಂದ ಶೇ.15 ಶುಲ್ಕ ಹೆಚ್ಚಳ ಮಾಡಿಕೊಂಡು ನಿಗದಿತ ಸಮಯದಲ್ಲಿ ಪಾವತಿಸುವಂತೆ ಪಾಲಕರಿಗೆ ಸೂಚನೆ ನೀಡುತ್ತಿವೆ. ಇದರಿಂದ ಬೇಸತ್ತ ಪಾಲಕರು ದೂರು ದಾಖಲಿಸಲು ಶಿಕ್ಷಣ ಇಲಾಖೆ ರೂಪಿಸಿರುವ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಲು ಮುಂದಾಗಿದ್ದಾರೆ. ಸಹಾಯವಾಣಿಯು ಬೆಂಗ ಳೂರು ನಗರ ಮತ್ತು ಗ್ರಾಮಾಂತರದಲ್ಲಿರುವ ಶಾಲಾ ವ್ಯಾಪ್ತಿಗೆ ಮಾತ್ರ ಅನ್ವಯಿಸಲಿದೆ. ಈ ವ್ಯಾಪ್ತಿಯಲ್ಲಿರುವ ಶಾಲೆಗಳ ಬಗ್ಗೆಯೇ ಹೆಚ್ಚು ದೂರುಗಳಿರುವುದರಿಂದ ಶಿಕ್ಷಣ ಇಲಾಖೆಯು ಈ ವ್ಯವಸ್ಥೆ ರೂಪಿಸಿದೆ.
ಬೆಂಗಳೂರು ದಕ್ಷಿಣದಲ್ಲಿ 3,611, ಬೆಂ. ದಕ್ಷಿಣ- 2,632 ಮತ್ತು ಬೆಂ.ಗ್ರಾಮಾಂತರದಲ್ಲಿ 1,559 ಶಾಲೆ ಸೇರಿ ಒಟ್ಟಾರೆ 7,802 ಶಾಲೆಗಳಿವೆ. ಬಹುತೇಕ ಬಜೆಟ್ ಶಾಲೆಗಳು ಹೆಚ್ಚುವರಿ ಶುಲ್ಕ ಪಡೆಯುತ್ತಿಲ್ಲ. ಕೆಲವು ಪ್ರತಿಷ್ಠಿತ ಶಾಲೆಗಳು ಮಾತ್ರ ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಪ್ರತಿ ನಿತ್ಯ ದೂರವಾಣಿ ಕರೆ ಮಾಡಿ ಪಾಲಕರು ದೂರು ದಾಖಲಿಸುತ್ತಿದ್ದಾರೆ. ಬೆಂ.ದಕ್ಷಿಣ ವಿಭಾಗದಲ್ಲಿರುವ ಶಾಲೆಗಳ ವಿರುದ್ಧವೇ ಹೆಚ್ಚಿನ ದೂರು ಬಂದಿವೆ. ಪಾಲಕರು ಇ-ಮೇಲ್ ಮೂಲಕವೂ ದೂರು ನೀಡುತ್ತಿದ್ದಾರೆ.
ದೂರು ಪರಿಶೀಲನೆ
ಶಿಕ್ಷಣ ಇಲಾಖೆಯು ಪಾಲಕರಿಂದ ದೂರು ಸ್ವೀಕರಿಸಿದ ನಂತರ ಇದರ ನೈಜತೆ ಪರಿಶೀಲನೆಗಾಗಿ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಜಿಲ್ಲಾ ಉಪನಿರ್ದೇಶಕರಿಗೆ ದೂರು ರವಾನೆ ಮಾಡುತ್ತದೆ. ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ದೂರಿನಲ್ಲಿರುವ ಅಂಶ ನಿಜವೆಂದು ಗೊತ್ತಾದರೆ ನೋಟಿಸ್ ಜಾರಿ ಮಾಡುತ್ತಾರೆ. ಈ ನೋಟಿಸ್​ಗೆ ಶಾಲಾ ಆಡಳಿತ ಮಂಡಳಿ 7 ದಿನದೊಳಗಾಗಿ ಉತ್ತರಿಸಬೇಕು.
ಬೆ.9ರಿಂದ ಸಂ.6ರವರೆಗೆ ಹೆಲ್ಪ್​ಲೈನ್
ಶಿಕ್ಷಣ ಇಲಾಖೆ ರೂಪಿಸಿರುವ ಸಹಾಯವಾಣಿಗೆ ಪಾಲಕರು ಹೆಚ್ಚುವರಿ ಶುಲ್ಕ ವಸೂಲಿ ಮಾಡುತ್ತಿರುವ ಶಾಲೆ ವಿರುದ್ಧ ದೂರು ದಾಖಲಿಸಬಹುದು. 080-23320311, 6364728784ಗೆ ಕರೆ ಮಾಡಬಹುದು. ಇಲ್ಲವೆ,[email protected]ಇ-ಮೇಲ್
ವಿಳಾಸಕ್ಕೆ ಸಂದೇಶ ಕಳುಹಿಸಿ ದೂರು ದಾಖಲಿಸಬಹುದು. ಸಹಾಯವಾಣಿಯು ಸರ್ಕಾರಿ ರಜೆ ದಿನ ಹೊರತಾಗಿ ಬೆ.9ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸಲಿದೆ.
ಸುಳ್ಳು ಮಾಹಿತಿ
ಹೆಚ್ಚುವರಿ ಶುಲ್ಕ ಪಡೆಯುತ್ತಿದ್ದಾರೆಂದು ಆರೋಪ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ದಕ್ಷಿಣ ವಲಯ-3ರ ವ್ಯಾಪ್ತಿಯಲ್ಲಿರುವ ಸಿಲಿಕಾನ್ ವ್ಯಾಲಿ ಶಾಲೆಗೆ ನೋಟಿಸ್ ಜಾರಿ ಮಾಡಲಾಗಿದೆ. ಆದರೆ, ನಾವು ಕಳೆದ ವರ್ಷ ತೆಗೆದುಕೊಳ್ಳುತ್ತಿದ್ದ ಶುಲ್ಕವನ್ನೇ ಈ ವರ್ಷ ಕೂಡ ತೆಗೆದುಕೊಳ್ಳುತ್ತಿದ್ದೇವೆ. ದಾಖಲೆಗಳ ಸಹಿತ ನಾವು ನೋಟಿಸ್​ಗೆ ಉತ್ತರ ನೀಡುತ್ತೇವೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಸರ್ಕಾರಿ ಶಾಲೆಗಳ ಕಡೆ ಪಾಲಕರ ಚಿತ್ತ
ಲಾಕ್​ಡೌನ್​ನಿಂದ ಆರ್ಥಿಕ ಸಂಕಷ್ಟದಲ್ಲಿರುವ ಜನರು ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ತಮ್ಮ ಮಕ್ಕಳ ವರ್ಗಾವಣೆ ಪತ್ರ ಪಡೆದು ಸರ್ಕಾರಿ ಶಾಲೆಗೆ ಪ್ರವೇಶ ಕಲ್ಪಿಸಲು ಮುಂದಾಗಿದ್ದಾರೆ. ಕೆಲವು ಪ್ರದೇಶಗಳಲ್ಲಿ ಬಡ ಮತ್ತು ಮಧ್ಯಮ ವರ್ಗದ ಪಾಲಕರು ಈ ರೀತಿ ಮಾಡುತ್ತಿದ್ದಾರೆ. ಶುಲ್ಕ ಕಡಿಮೆ ಮಾಡುತ್ತೇವೆ ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳೂ ತಿಳಿಸಿದರೂ ಆರ್ಥಿಕ ಮುಗ್ಗಟ್ಟು ಇರುವುದರಿಂದ ಸರ್ಕಾರಿ ಶಾಲೆಗೆ ಸೇರಿಸುತ್ತಿರುವುದಾಗಿ ಪಾಲಕರೊಬ್ಬರು ತಿಳಿಸಿದರು.
| ದೇವರಾಜ್​ ಎಲ್​
ಸ್ವಿಗ್ಗಿಯಲ್ಲಿ 1,100 ಸಿಬ್ಬಂದಿಗೆ ಕತ್ತರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − one =
Remember me
