|ದೇವರಾಜ್ ಕನಕಪುರಬೆಂಗಳೂರು
ದ್ವಿತೀಯ ಪಿಯು ಪರೀಕ್ಷೆ ಗ್ರೇಡಿಂಗ್​ಗೆ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯು ಅಂಕಗಳನ್ನು ಪರಿಗಣಿಸುತ್ತಿರುವುದರಿಂದ ಪ್ರಥಮ ಪಿಯು ಅಂಕಗಳನ್ನು ಹೆಚ್ಚಿಸುವಂತೆ ಉಪನ್ಯಾಸಕರಿಗೆ ಪಾಲಕರು ದುಂಬಾಲು ಬಿದ್ದಿದ್ದಾರೆ.
ದ್ವಿತೀಯ ಪಿಯುಗೆ ಗ್ರೇಡಿಂಗ್ ಪಾಸ್ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಪಿಯು ಗ್ರೇಡಿಂಗ್ ಅನ್ನು ವೖತ್ತಿಪರ ಕೋರ್ಸ್​ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಪರಿಗಣಿಸದಿರಲು ನಿರ್ಧಾರ ಮಾಡಿದೆ. ಆದರೆ, ಸಿಇಟಿ ಹೊರತಾಗಿ, ಕಾಮೆಡ್-ಕೆ, ಜೆಇಇ, ನೀಟ್​ನಂತಹ ಅನೇಕ ಪರೀಕ್ಷೆಗಳಿಗೆ ದ್ವಿತೀಯ ಪಿಯು ಅಂಕಗಳನ್ನು ಪರಿಗಣಿಸುವುದರಿಂದ ಬಹುತೇಕ ಪಾಲಕರು ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರನ್ನು ಭೇಟಿ ಮಾಡಿ ಪ್ರಥಮ ಪಿಯು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ನೀಡುವಂತೆ ದುಂಬಾಲು ಬೀಳುತ್ತಿದ್ದಾರೆ. ಇದರಿಂದ ಉಪನ್ಯಾಸಕರು ಬೇಸತ್ತಿದ್ದಾರೆ.
ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದು ಮಾಡಿರುವ ರಾಜ್ಯ ಸರ್ಕಾರ ಗ್ರೇಡಿಂಗ್ ಮೂಲಕ ಪಾಸ್ ಮಾಡುವುದಾಗಿ ನಿರ್ಧರಿಸಿದೆ. ಆದರೆ, ಪಾಸ್ ಮಾಡುವ ಮೊದಲು ಹಲವಾರು ನಿಯಮಗಳನ್ನು ಪಾಲಿಸುವಂತೆ ಸೂಚಿಸಿದೆ. ಪಾಲಕರು ಇದ್ಯಾವುದನ್ನು ಅರಿಯದೆ ನೇರವಾಗಿ ಕಾಲೇಜುಗಳಿಗೆ ತೆರಳಿ, ಪ್ರಥಮ ಪಿಯು ಅಂಕಗಳನ್ನು ಹೆಚ್ಚು ಮಾಡುವಂತೆ ಉಪನ್ಯಾಸಕರನ್ನು ಭೇಟಿ ಮಾಡಿ ದುಂಬಾಲು ಬಿದ್ದಿದ್ದಾರೆ. ಈ ರೀತಿ ಅಂಕಗಳನ್ನು ಹೆಚ್ಚು ಮಾಡಲು ಸಾಧ್ಯವಿಲ್ಲವೆಂದರೂ ಪಾಲಕರು ಕೇಳುವ ಸ್ಥಿತಿಯಲ್ಲಿಲ್ಲ. ಪ್ರತಿ ವರ್ಷ ಸಿಇಟಿಗೆ ದ್ವಿತೀಯ ಪಿಯು ಅಂಕಗಳನ್ನು ಪರಿಗಣಿಸಲಾಗುತ್ತಿತ್ತು. ಈ ವರ್ಷ ಮಾತ್ರ ಸಿಇಟಿ ಅಂಕಗಳನ್ನು ಮಾತ್ರ ಪರಿಗಣಿಸಲು ನಿರ್ಧರಿಸಿದೆ. ಕಾಲೇಜುಗಳಲ್ಲಿ ಭೌತಿಕ ತರಗತಿಗಳು ರದ್ದು ಮಾಡಿದ್ದರೂ, ಪಾಲಕರು ನೇರವಾಗಿ ಕಾಲೇಜುಗಳ ಕಡೆ ತೆರಳಿ ಹೇಗಾದರೂ ಮಾಡಿ ಅಂಕಗಳನ್ನು ಹೆಚ್ಚು ಮಾಡುವಂತೆ, ಅದಕ್ಕೆ ಹಣವನ್ನೂ ನೀಡುವುದಾಗಿ ಉಪನ್ಯಾಸಕರಿಗೆ ಡೀಲ್ ಒಪ್ಪಿಸುತ್ತಿದ್ದಾರೆ.
ಕಾಲೇಜು ಹಂತದಲ್ಲಿ ಪ್ರಥಮ ಪಿಯು ಪರೀಕ್ಷೆ ನಡೆಸಿ ಅಂಕಗಳನ್ನು ನೀಡಲಾಗಿದೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಹ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅಂಕ ಬದಲಾವಣೆ ಮಾಡಲು ಸಾಧ್ಯವಿಲ್ಲ. ಪಾಲಕರು ಅದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಕರೆ ಮಾಡಿ, ಸಂದೇಶ ರವಾನಿಸಿ ನಿಮ್ಮ ಜತೆಗೆ ಮಾತನಾಡಬೇಕೆಂದು ಒತ್ತಾಯಿಸುತ್ತಾರೆ ಎಂದು ಉಪನ್ಯಾಸಕರೊಬ್ಬರು ತಿಳಿಸಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯು ಅಂಕಗಳನ್ನು ಎಸ್​ಎಟಿಎಸ್ ಮೂಲಕ ಅಪ್​ಲೋಡ್ ಮಾಡಲು ಸೂಚಿಸಲಾಗಿತ್ತು, ಈಗಾಗಲೆ, ಶೇ.95- 98 ಅಂಕಗಳನ್ನು ಅಪ್​ಲೋಡ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಪಾಲಕರು ಏನೋ ಆಸೆಯಿಂದ ಅಂಕ ಹೆಚ್ಚು ಮಾಡುವಂತೆ ಕೇಳಿರುವುದು ತಪ್ಪೇನೂ ಅಲ್ಲ. ಆದರೆ, ವಾಸ್ತವ ಪರಿಸ್ಥಿತಿಯಲ್ಲಿ ಇದು ಸಾಧ್ಯವಿಲ್ಲ. ಈಗಾಗಲೇ, ಶೇ.98 ಅಂಕಗಳನ್ನು ಎಸ್​ಎಟಿಎಸ್​ನಲ್ಲಿ ಅಪ್​ಲೋಡ್ ಮಾಡಲಾಗಿದೆ.
|ಎ.ಎಚ್. ನಿಂಗೇಗೌಡರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘ
ಸೀಟ್​​ ಹಿಂದಿನಿಂದ ಕೈ ತೂರಿಸಿ ಅಲ್ಲೇ ಮುಟ್ಟಲು ಯತ್ನಿಸುತ್ತಿದ್ದ; ಅಸಹ್ಯ ಅನುಭವ ಬಿಚ್ಚಿಟ್ಟ ಯುವತಿ
ಹಣ್ಣು ಕಿತ್ತು ತಿಂದ ಬಾಲಕರನ್ನು ಮರಕ್ಕೆ ಕಟ್ಟಿ ಹೊಡೆದ; ಮೂರ್ಛೆ ಹೋದವರ ಮುಂದೆ ಮದ್ಯ ಕುಡಿದ!
ಶೇ. 50 ತೆರಿಗೆ ವಿನಾಯಿತಿ: ಹೋಟೆಲ್​, ರೆಸ್ಟೋರೆಂಟ್​, ಅಮ್ಯೂಸ್​ಮೆಂಟ್​ ಪಾರ್ಕ್​ನವರಿಗಿದು ಸಂತಸದ ಸಂಗತಿ!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
