ಬೆಂಗಳೂರು:ಡಿಜೆ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿಯಾಗಿರುವ ಗಲಭೆಕೋರರ ಬಿಡುಗಡೆಗಾಗಿ ಆಗ್ರಹಿಸಿದ ಪಾಲಕರು ಪೊಲೀಸ್​ ಠಾಣೆಯ ಬಳಿ ಜಮಾಯಿಸಿ, ಹೈಡ್ರಾಮವನ್ನೇ ನಡೆಸಿದರು.
ಗಲಭೆ ಸಂಬಂಧ ಶನಿವಾರ ಕಳೆದ ರಾತ್ರಿ ಸುಮಾರು 57 ಗಲಭೆಕೋರರನ್ನು ಡಿಜೆ ಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಪಾಲಕರಿಂದ ಠಾಣೆಗೆ ಜಮಾಯಿಸಿ ಬಿಡುಗಡೆಗೆ ಆಗ್ರಹಿಸಿದರು.
ಇದನ್ನೂ ಓದಿ:VIDEO| ಆಕಾಶದಿಂದ ವ್ಯಕ್ತಿಯ ತಲೆಯ ಮೇಲೆ ಬಿದ್ದ ಬೆಕ್ಕು: ಮುಂದೇನಾಯ್ತು ನೀವೇ ನೋಡಿ…!
ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಅವರನ್ನು ಬಿಟ್ಟು ಬಿಡಿ ಎಂದು ಠಾಣೆಯ ಮುಂದೆ ಗೋಳಾಡಿದರು. ಆದರೆ, 144 ಸೆಕ್ಷನ್​ ಜಾರಿ ಇರುವ ಹಿನ್ನೆಲೆಯಲ್ಲಿ ಪಾಲಕರು ಠಾಣೆ ಮುಂದೆ ಜಮಾಯಿಸದಂತೆ ಮಹಿಳಾ ಪೊಲೀಸ್​ ಸಿಬ್ಬಂದಿ ವಾಪಸ್ಸು ಕಳುಹಿಸಿದರು.
ಈ ವೇಳೆ ಮಹಿಳೆಯೊಬ್ಬಳು ನನ್ನ ಮಗನನ್ನು ನೋಡ್ಬೇಕು ಬಿಡಿ ಎಂದು ಕಣ್ಣೀರಾಕುತ್ತಾ ಠಾಣೆಯ ಮುಂಭಾಗದಲ್ಲೇ ಕುಸಿದು ಬಿದ್ದಳು.(ದಿಗ್ವಿಜಯ ನ್ಯೂಸ್​)
ಗಲಭೆಗೆ ಫೇಸ್​ಬುಕ್​ನಲ್ಲೇ ಸ್ಕೆಚ್: ಕೊನೆಗೂ ನವೀನ್ ಮೊಬೈಲ್ ಪತ್ತೆಯಾಗಿದ್ದು ಎಲ್ಲಿ ಗೊತ್ತಾ?

Sign in to your account
Please enter an answer in digits:twelve − 6 =
Remember me
