ಯಾದಗಿರಿ:ನಾವು ಈಗಾಗಲೇ ಮಕ್ಕಳಿಗೆ ಸಿನಿಮಾ ನಟರ ಹೆರಸರುಗಳನ್ನು ಇಡುವ ಅಭಿಮಾನಿಗಳನ್ನು ನೋಡಿದ್ದೇವೆ. ಆದರೆ ಬಹುಷಃ ರಾಜಕೀಯ ನಾಯಕರ ಹೆಸರನ್ನು ಹುಟ್ಟಿದ ಮಗುವಿಗೆ ಇಟ್ಟ ಸುದ್ದಿ ಕೇಳಿರುವುದು ಅಪರೂಪವೇ ಏನೋ. ಇಂತಹ ವಿಶಿಷ್ಟ ಹಾಗೂ ಅಪರೂಪದ ಘಟನೆಗೆ ಯಾದಗಿರಿ ಸಾಕ್ಷಿಯಾಗಿದೆ.

ಶೋರಾಪುರದ ಬಾಚಿಮಟ್ಟಿ ಗ್ರಾಮದ ಪರಮಪ್ಪ, ಮಲ್ಲಮ್ಮ ದಂಪತಿ ತಮ್ಮ ಮಗುವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಹೆಸರನ್ನು ಇಟ್ಟು ಎಲ್ಲರನ್ನೂ ಅಚ್ಚರಿಗೆ ಒಳಗಾಗುವಂತೆ ಮಾಡಿದ್ದಾರೆ.

ಸುರಪುರದ ದೇವತ್ಕಲ್ ಎಂಬಲ್ಲಿ ಇಂದು ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ದಂಪತಿ ಮಗುವಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಉಪಸ್ಥಿತರಿದ್ದರು. ದಂಪತಿ, ಸಮಾವೇಶದಲ್ಲಿದ್ದ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಈ ಸಂದರ್ಭ ಮಗುವಿಗೆ ಸಿಹಿ ತಿನ್ನಿಸಿದ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 11 =
Remember me
