ಬೆಂಗಳೂರು:ನಿಮ್ಮ ಮಕ್ಕಳು ಅಶ್ಲೀಲ ವೆಬ್​ಸೈಟ್​ನಲ್ಲಿ ವಿಡಿಯೋ ವೀಕ್ಷಿಸುತ್ತಿದ್ದಾರೆ ಮತ್ತು ಅಪ್​ಲೋಡ್ ಮಾಡುತ್ತಿದ್ದಾರೆ ಎಂದು ಪಾಲಕರಿಗೆ ಬ್ಲಾಕ್​ವೆುೕಲ್ ಮಾಡಿ ಸೈಬರ್ ಕಳ್ಳರು ವಂಚಿಸುತ್ತಿರುವ ಜಾಲ ಸಕ್ರಿಯವಾಗಿದೆ. ನಾಗರಬಾವಿ ರಿಂಗ್ ರಸ್ತೆ ಸಮೀಪ ನೆಲೆಸಿರುವ 42 ವರ್ಷದ ಮಹಿಳೆಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಸಿಬಿಐ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ. ಅವರ ವಾಟ್ಸ್​ಆಪ್​ಗೆ ನಕಲಿ ನೋಟಿಸ್ ಜಾರಿ ಮಾಡಿದ್ದ. ನಿಮ್ಮ ಪುತ್ರ ಅಶ್ಲೀಲ ವೆಬ್​ಸೈಟ್​ನಲ್ಲಿ ಸದಾಕಾಲ ಅಶ್ಲೀಲ ವಿಡಿಯೋ ನೋಡುತ್ತಿದ್ದಾನೆ. ಜತೆಗೆ ವಿಡಿಯೋ ಅಪ್​ಲೋಡ್ ಮಾಡಿದ್ದು, ನಮಗೆ ಇಂಟರ್​ಪೋಲ್​ನಿಂದ ವರದಿ ಬಂದಿದೆ. ಎಫ್​ಐಆರ್ ದಾಖಲಿಸಿಕೊಂಡಿದ್ದು, ಬಂಧನ ವಾರಂಟ್ ಜಾರಿಯಾಗಿದೆ. ಕೂಡಲೇ ನಿಮ್ಮ ಪುತ್ರನ ಬಂಧಿಸಬೇಕಾಗಿದೆ ಎಂದು ಹೆದರಿಸಿದ್ದ.
ಇದನ್ನೂ ಓದಿ:ಡಿಕೆಶಿಗೆ ಸಿಎಂ ಕುರ್ಚಿಯ ಹುಚ್ಚು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತಿರುಗೇಟು
ವಾಟ್ಸ್​ಆಪ್​ಗೆ ಬಂದ ಲೆಟರ್ ನೋಡಿದ ತಾಯಿ, ಗಾಬರಿಯಾಗಿದ್ದಳು. ಅಷ್ಟೊತ್ತಿಗೆ ಮತ್ತೆ ಕರೆ ಮಾಡಿದ ಅಪರಿಚಿತ ವ್ಯಕ್ತಿ, ನಿಮ್ಮ ಮಗನನ್ನು ವರ್ಚುವಲ್ ಮೂಲಕ ವಿಚಾರಣೆ ಮಾಡಬೇಕಾಗಿದೆ. ನಾವು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಇದರಿಂದ ನಿಮ್ಮ ಪುತ್ರನ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಕೇಸ್​ನಲ್ಲಿ ರಕ್ಷಣೆ ಮಾಡಬೇಕಾದರೆ ಹಣ ಕೊಡಬೇಕು ಎಂದು ತಾಯಿಗೆ ಹೇಳಿದ್ದ. ಅದಕ್ಕೆ ಒಪ್ಪಿದ ತಾಯಿ, ತಮ್ಮ ಸಂಬಂಧಿಕರಿಗೆ ನೋಟಿಸ್ ತೋರಿಸಿ ಹಣ ಕೇಳಲು ಪ್ರಯತ್ನಿಸಿದ್ದಳು. ಆಗ ಅವರ ಸಂಬಂಧಿ ಇದೊಂದು ನಕಲಿ ನೋಟಿಸ್ ಆಗಿದ್ದು, ಸೈಬರ್ ವಂಚಕರ ಜಾಲ ಎಂದು ಧೈರ್ಯ ತುಂಬಿದ್ದರು. ನಂತರ ಸಿಇಎನ್ ಠಾಣೆಗೆ ದೂರು ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಕಲಿ ವಾರಂಟ್:ದೂರುದಾರ ತಾಯಿಗೆ ಕಳುಹಿಸಿರುವ ನೋಟಿಸ್​ನಲ್ಲಿ ಸಿಬಿಐ, ಇಡಿ, ಇಂಟರ್​ಪೋಲ್ ಸೇರಿ ಕೇಂದ್ರ ತನಿಖಾ ಸಂಸ್ಥೆಗಳ ಸೀಲ್​ಗಳನ್ನು ಬಳಸಿ ನಕಲಿ ನೋಟಿಸ್ ತಯಾರು ಮಾಡಿದ್ದಾರೆ. ಗ್ರಾಫಿಕ್ ಬಳಸಿ ನಕಲಿ ನೋಟಿಸ್ ತಯಾರಿಸಿ ಅಮಾಯಕರ ವಾಟ್ಸ್​ಆಪ್​ಗೆ ಕಳುಹಿಸಿ ಬ್ಲಾಕ್​ವೆುೕಲ್ ಮಾಡಿ ಹಣ ವಸೂಲಿಗೆ ಯತ್ನಿಸುತ್ತಾರೆ. ಸಾರ್ವಜನಿಕರು ವಂಚಕರಿಗೆ ಹೆದರದೆ ಪೊಲೀಸರಿಗೆ ದೂರು ಕೊಡುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.
ಇದೆಲ್ಲಾ ಆಕೆ ಮಾಡ್ತಿರೋ…! ಪ್ರೇಯಸಿ ಆರೋಪಕ್ಕೆ ಕಡೆಗೂ ಮೌನ ಮುರಿದ ನಟ ರಾಜ್ ತರುಣ್

ವಿರಾಟ್​ ಕೊಹ್ಲಿ ಫೋನ್​ ವಾಲ್​ಪೇಪರ್​ನಲ್ಲಿರುವ ಈ ವ್ಯಕ್ತಿ ಯಾರು ಗೊತ್ತೇ? ಇವರ ಹಿನ್ನಲೆ ತಿಳಿದ್ರೆ ಅಚ್ಚರಿಪಡ್ತೀರಾ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + five =
Remember me
