ಬೆಂಗಳೂರು:ಆನ್​ಲೈನ್ ತರಗತಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಪಾಲಕರೇ ಆನ್​ಲೈನ್ ಕ್ಲಾಸ್​ಗೆ ಮಕ್ಕಳನ್ನು ಸಜ್ಜುಗೊಳಿಸಲು ಸಿದ್ಧರಿದ್ದೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೌದು.. ತಜ್ಞರ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಡಾ. ಗುರುರಾಜ ಕರಜಗಿ, ಅಡ್ವಾನ್ಸಡ್ ಎಜುಕೇಷನಲ್ ಸರ್ವೀಸ್ ಎಂಬ ಸಂಸ್ಥೆ ಮೂಲಕ ನಡೆಸಿದ ಸಮೀಕ್ಷೆ ಈ ರೀತಿಯ ಆತಂಕಕಾರಿ ಅಂಶವನ್ನು ಹೊರ ಹಾಕಿದೆ.
ಆನ್​ಲೈನ್ ತರಗತಿಗಾಗಿ ಪಾಲಕರು ಮಕ್ಕಳಿಗೆ ಲ್ಯಾಪ್​ಟಾಪ್ ಅಥವಾ ಟ್ಯಾಬ್ ಕೊಡಿಸಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ಶೇ.86 ಪಾಲಕರು ಹೌದು ಎಂಬ ಉತ್ತರ ನೀಡಿದ್ದಾರೆ. ಸ್ಮಾರ್ಟ್​ಫೋನ್ ನೀಡಲು ಶೇ.86 ಪಾಲಕರು ಒಪ್ಪಿಗೆ ಸೂಚಿಸಿದ್ದು, ಪೂರ್ವಯೋಜಿತ ವಿಡಿಯೋ ಕಳುಹಿಸುವುದಕ್ಕೆ ಶೇ.69 ಮಂದಿ ಬೇಡ ಎಂದಿದ್ದಾರೆ.
ಕರೊನಾ ಸಮಯದಲ್ಲಿ ಪಾಲಕರು ಮಕ್ಕಳನ್ನು ಮನೆಯಲ್ಲಿ ನೋಡಿಕೊಳ್ಳುತ್ತೀರಾ ಎಂದರೆ ಶೇ.55 ಪಾಲಕರು ಸಾಧ್ಯವಿಲ್ಲವೆಂದು ಉತ್ತರಿಸಿದ್ದಾರೆ. ಕರೊನಾ ವೇಳೆ ಆನ್​ಲೈನ್ ತರಗತಿ ಉತ್ತಮ ಲಾಭದಾಯಕವೇ ಎಂದು ಕೇಳಿದ್ದಕ್ಕೆ, ಶೇ.80 ಪಾಲಕರು ‘ಹೌದು’ ಎಂದಿದ್ದಾರೆ.
ನಗರದಲ್ಲಿರುವ 300ಕ್ಕೂ ಹೆಚ್ಚು ಶಾಲೆಗಳ 700ಕ್ಕೂ ಹೆಚ್ಚಿನ ಪಾಲಕರು ತಮ್ಮ ಅಭಿಪ್ರಾಯವನ್ನು ಈ ಸಮೀಕ್ಷೆಯಲ್ಲಿ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈ ಸಮೀಕ್ಷೆಯ ಆನ್​ಲೈನ್ ಪರವಾಗಿದೆ. ಇದು ನಗರದಲ್ಲಿರುವ ಪಾಲಕರಿಂದ ಮಾಹಿತಿ ಪಡೆದು ರೂಪಿಸಿರುವ ಸಮೀಕ್ಷೆಯಾಗಿದ್ದು, ಈ ಸಂಸ್ಥೆಯು ಇದೀಗ ಗ್ರಾಮೀಣ ಭಾಗದ ಪಾಲಕರಿಂದ ಮಾಹಿತಿ ಸಂಗ್ರಹಿಸಲು ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಪಾಲಕರು ಆನ್​ಲೈನ್ ಶಿಕ್ಷಣ, ಪೂರ್ವ ರೆಕಾರ್ಡ್ ಮಾಡಿದ ಚಿತ್ರೀಕರಣ, ಪಠ್ಯಕ್ರಮ ಪರಿಷ್ಕರಣೆ, ಪರೀಕ್ಷಾ ವಿನಾಯಿತಿ, ಶೈಕ್ಷಣಿಕ ವರ್ಷ ವಿಳಂಬ, ಸುರಕ್ಷತಾ ಕ್ರಮದ ಮೇಲೆ ಶಾಲೆ ಆರಂಭ, ಪರ್ಯಾಯ ಶಿಕ್ಷಣಕ್ಕೆ ಲಭ್ಯವಿರುವ ಸಾಧನ ಈ ಎಲ್ಲ ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ದಾಖಲಿಸಬಹುದಾಗಿದೆ.https://bit.ly/3ftaaUVಲಿಂಕ್ ಬಳಕೆ ಮಾಡಿ ಭರ್ತಿ ಮಾಡಬಹುದು. ಇಲ್ಲವೆ, ವಾಟ್ಸ್​ಆಪ್ ಸಂಖ್ಯೆಗೆ 9845259235 ಸಂದೇಶ ಕಳುಹಿಸಬಹುದಾಗಿದೆ.
ಕ್ಲಾಸ್ ಇಲ್ಲ ಅಂದ್ರೆ ಶಿಸ್ತು ಇಲ್ಲವಂತೆ
ಆನ್​ಲೈನ್ ತರಗತಿ ಹೊರತಾಗಿ ಮಕ್ಕಳು ವ್ಯಾಪಕವಾಗಿ ಟಿವಿ ವೀಕ್ಷಣೆ ಅಥವಾ ಮೊಬೈಲ್​ನಲ್ಲಿ ಆಟ ಆಡುವುದರತ್ತ ನಿರತರಾಗಿರುತ್ತಾರೆಯೇ ಎಂಬ ಪ್ರಶ್ನೆಗೆ ಶೇ.74 ಪಾಲಕರು ಹೌದು ಎಂದಿದ್ದಾರೆ. ಮತ್ತೊಂದು ದುರಂತ ಎಂದರೆ ಆನ್​ಲೈನ್ ಕ್ಲಾಸ್ ಇಲ್ಲ ಎಂದರೆ ಮಕ್ಕಳು ಶಿಸ್ತು ಕಳೆದುಕೊಳ್ಳುತ್ತಾರೆಯೇ ಎಂದು ಕೇಳಿರುವುದಕ್ಕೆ ಶೇ.67 ಪಾಲಕರು ಹೌದು ಎಂದು ಉತ್ತರಿಸಿದ್ದಾರೆ.
ನಾಳೆ ದ್ವಿತೀಯ ಪಿಯು ಪರೀಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 9 =
Remember me
