ಬೆಂಗಳೂರು:ನಗರದ ಎಲೆಕ್ಟ್ರಾನಿಕ್​ ಸಿಟಿಯಲ್ಲಿ ಆನ್​ಲೈನ್​ ಫುಡ್​ ಆರ್ಡರ್​ ಮಾಡಿದ್ದ ಯುವತಿಯ ಮೇಲೆ ಡೆಲಿವರಿ ಬಾಯ್​ ಹಲ್ಲೆ ಮಾಡಿದ್ದಾನೆ ಎನ್ನುವ ಪ್ರಕರಣ ದೇಶದಾದ್ಯಂತ ಚರ್ಚೆಯಲ್ಲಿದೆ. ಯುವತಿ ಮಾಡಿದ್ದ ದೂರು ಆಕೆಗೇ ತಿರುಗುಮಂತ್ರವಾಗಿದ್ದು, ಡೆಲಿವರಿ ಬಾಯ್​ಗೆ ಹೆಚ್ಚಿನ ಬೆಂಬಲ ವ್ಯಕ್ತವಾಗಿದೆ. ಇದೀಗ ಬಾಲಿವುಡ್​ನ ಪ್ರಸಿದ್ಧ ತಾರೆಯೊಬ್ಬರು ಡೆಲಿವರಿ ಬಾಯ್​ ಬೆಂಬಲಕ್ಕೆ ನಿಂತಿದ್ದಾರೆ.
ಹೌದು! ಬಾಲಿವುಡ್​ನ ಪ್ರಸಿದ್ಧ ನಟಿ ಪರಿಣಿತಿ ಚೋಪ್ರಾ ಜೊಮ್ಯಾಟೋ ಡೆಲಿವರಿ ಬಾಯ್​ ಪರವಾಗಿ ಟ್ವೀಟ್​ ಮಾಡಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆಗಳನ್ನು ಪತ್ತೆ ಮಾಡಬೇಕು. ಡೆಲಿವರಿ ಬಾಯ್​ ಮುಗ್ಧನಾಗಿದ್ದಾನೆ, ನಾನು ಅವನ ಮಾತನ್ನು ನಂಬುತ್ತೇನೆ. ಆ ಯುವತಿಯನ್ನು ಸರಿಯಾಗಿ ಪ್ರಶ್ನಿಸಿ. ಇದು ಅಮಾನವೀಯತೆಯ ಮತ್ತು ನಾಚಿಕೆಗೇಡಿನ ಘಟನೆ. ನಾನು ಡೆಲಿವರಿ ಬಾಯ್​ಗೆ ಸಹಾಯ ಮಾಡಲು ಸಿದ್ಧನಿದ್ದೇನೆ ಎಂದು ಟ್ವೀಟ್​ನಲ್ಲಿ ತಿಳಿಸಿದ್ದಾರೆ.
ಇನ್​ಸ್ಟಾಗ್ರಾಂ ಇನ್​ಫ್ಲೂಯೆನ್ಸರ್​ ಎನಿಸಿಕೊಂಡಿರುವ ಹಿತೇಶಾ ಚಂದ್ರಾಣಿ, ಮಾರ್ಚ್​ 9ರಂದು ಜೊಮ್ಯಾಟೋದಲ್ಲಿ ಊಟ ಆರ್ಡರ್​ ಮಾಡಿದ್ದಳು. ಮಧ್ಯಾಹ್ನ 3.30ಕ್ಕೆ ತರಬೇಕಿದ್ದ ಊಟವನ್ನು ಕಾಮರಾಜ್​ ಹೆಸರಿನ ಡೆಲಿವರಿ ಬಾಯ್​ ಒಂದು ಗಂಟೆ ತಡವಾಗಿ ತಂದಿದ್ದ. ಈ ವೇಳೆ ಅವರಿಬ್ಬರ ನಡುವೆ ಜಗಳ ನಡೆದಿದೆ. ಕಾಮರಾಜ್​ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ, ಪಂಚ್​ ನೀಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆದರೆ ಆಕೆಯೇ ತನ್ನ ಮೇಲೆ ಹಲ್ಲೆಗೆ ಪ್ರಯತ್ನಿಸಿದ್ದಾಗಿ ಕಾಮರಾಜ್​ ಹೇಳಿದ್ದಾನೆ. ಈ ಪ್ರಕರಣದ ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)
Zomato India – PLEASE find and publicly report the truth.. If the gentleman is innocent (and I believe he is), PLEASE help us penalise the woman in question. This is inhuman, shameful and heartbreaking .. Please let me know how I can help..#ZomatoDeliveryGuy@zomatoin
— Parineeti Chopra (@ParineetiChopra)March 13, 2021

ಬಿಹಾರದಲ್ಲಿ ಹೆಂಡತಿ, ದೆಹಲಿಯಲ್ಲಿ ಗರ್ಲ್​ಫ್ರೆಂಡ್​! 20ರ ಯುವತಿಯೊಂದಿಗೆ 40ರ ಡ್ರೈವರ್​ ರಿಲೇಷನ್​ಶಿಪ್​!

ಆಹಾ ಎಷ್ಟು ರುಚಿಯಾಗಿದೆ ಎಂದು ಬಾಯಿ ಚಪ್ಪರಿಸಿಕೊಂಡು ತಿನ್ನುವವರು ಇಲ್ಲಿ ನೋಡಿ.. ಇದು ಎಂಜಲು ರೊಟ್ಟಿ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
