ಮಂಗಳೂರು:ಕರ್ನಾಟಕ ಯಕ್ಷಗಾನ ಅಕಾಡೆಮಿಯ 2020ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಹಿರಿಯ ಯಕ್ಷಗಾನ ಅರ್ಥಧಾರಿ ಹಾಗೂ ಪ್ರಸಂಗ ಕರ್ತೃ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಡಿ.ಎಸ್.ಶ್ರೀಧರ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿಯು ಒಂದು ಲಕ್ಷ ನಗದು, ಪ್ರಶಸ್ತಿ ಫಲಕ ಹಾಗೂ ಪ್ರಮಾಣಪತ್ರಗಳನ್ನು ಒಳಗೊಂಡಿದೆ ಎಂದು ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ತಿಳಿಸಿದ್ದಾರೆ.
ಯಕ್ಷಗಾನ ಅಕಾಡೆಮಿ ನಿಯಮಾನುಸಾರ ಐವರನ್ನು ವಾರ್ಷಿಕ ಗೌರವ ಪ್ರಶಸ್ತಿಗೆ ಹಾಗೂ 10 ಮಂದಿಯನ್ನು ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗೌರವ ಪ್ರಶಸ್ತಿಗೆ ಉಡುಪಿಯ ಬಿ.ಸಂಜೀವ ಸುವರ್ಣ (ಯಕ್ಷಗುರು), ತಲಕಳ ಕೊಳಂಬೆಯ ಕೆ.ತಿಮ್ಮಪ್ಪ ಗುಜರನ್ (ಕಲಾವಿದ), ಶಿರಸಿಯ ಡಾ.ವಿಜಯ ನಳಿನಿ ರಮೇಶ್ (ಪಡುವಲಪಾಯ ವಿದ್ವಾಂಸರು), ಬೆಂಗಳೂರಿನ ಡಾ.ಚಕ್ಕರೆ ಶಿವಶಂಕರ್(ಮೂಡಲಪಾಯ ವಿದ್ವಾಂಸ, ಸಂಘಟಕ), ಹರಪನಹಳ್ಳಿಯ ಬಿ.ಪರಶುರಾಮ್ (ಮೂಡಲಪಾಯ ಕಲಾವಿದ, ಸಂಘಟಕ) ಆಯ್ಕೆಯಾಗಿದ್ದು, ಪ್ರಶಸ್ತಿ ತಲಾ 50 ಸಾವಿರ ರೂ. ಒಳಗೊಂಡಿದೆ.
‘ಯಕ್ಷಸಿರಿ ವಾರ್ಷಿಕ ಪ್ರಶಸ್ತಿ’ಗೆ ಕುಂದಾಪುರದ ಗೋಪಾಲ ಆಚಾರ್ಯ ತೀರ್ಥಹಳ್ಳಿ (ತೆಂಕುತಿಟ್ಟು ಕಲಾವಿದ), ಬೇಲ್ತೂರು ರಮೇಶ್ (ಬಡಗುತಿಟ್ಟು ಕಲಾವಿದ), ಉಡುಪಿಯ ಆವರ್ಸೆ ಶ್ರೀನಿವಾಸ ಮಡಿವಾಳ (ತೆಂಕುತಿಟ್ಟು ಕಲಾವಿದ), ಮಂಗಳೂರಿನ ಹರಿನಾರಾಯಣ ಬೈಪಡಿತ್ತಾಯ (ತೆಂಕುತಿಟ್ಟು ಹಿಮ್ಮೇಳ) ಹಾಗೂ ಸಂಜಯ್ ಕುಮಾರ್ ಶೆಟ್ಟಿ (ಯಕ್ಷಗಾನ ಪ್ರಸಂಗಕರ್ತ), ಶಿರಸಿಯ ಎಂ.ಆರ್.ಹೆಗಡೆ ಕಾನಗೋಡ (ಪಡುವಲಪಾಯ ಸಂಘಟಕ), ಕುಂದಾಪುರದ ಸುಬ್ರಹ್ಮಣ್ಯ ಧಾರೇಶ್ವರ (ಭಾಗವತ), ಬಂಟ್ವಾಳದ ವಿಟ್ಲ ಶಂಭು ಶರ್ಮ ( ಅರ್ಥಧಾರಿ), ಶಿರಾ ತಾಲೂಕು ಬರಗೂರಿನ ಹನುಮಂತರಾಯಪ್ಪ (ಮೂಡಲಪಾಯ ಯಕ್ಷಗಾನ ಭಾಗವತ) ಮತ್ತು ಕೋಲಾರದ ವಕ್ಕಲೇರಿಯ ಎ.ಎಂ.ಮುಳವಾಗಲಪ್ಪ (ಮುಖವೀಣೆ ಕಲಾವಿದ) ಆಯ್ಕೆಯಾಗಿದ್ದು, ಪ್ರಶಸ್ತಿಯು ತಲಾ 25 ಸಾವಿರ ನಗದು ಪುರಸ್ಕಾರ ಹೊಂದಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲು ಉದ್ದೇಶಿಸಲಾಗಿದೆ. ಅಕಾಡೆಮಿ ರಿಜಿಸ್ಟ್ರಾರ್ ಎಸ್.ಎಚ್.ಶಿವರುದ್ರಪ್ಪ, ಸದಸ್ಯರಾದ ರಾಧಾಕೃಷ್ಣ ಕಲ್ಚಾರ್, ಕದ್ರಿ ನವನೀತ ಶೆಟ್ಟಿ, ಸಹ ಸದಸ್ಯ ದಾಮೋದರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 − 1 =
Remember me
