ಬೆಂಗಳೂರು:ಪ್ರಾಚೀನ ಕಾಲದಲ್ಲೇ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಗಳ ಬಗ್ಗೆ ತಿಳಿದಿದ್ದ ಭಾರತದ ಆರೋಗ್ಯ ಪದ್ಧತಿ ಇಡೀ ಜಗತ್ತಿಗೆ ಮಾದರಿ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ.
ಎಂ.ಎಸ್.ರಾಮಯ್ಯ ಮೆಮೋರಿಯಲ್ ಹಾಸ್ಪಿಟಲ್ ಮತ್ತು ನ್ಯೂಯಾರ್ಕ್‌ನ ಪ್ರತಿಷ್ಠಿತ ಮೌಂಟ್ ಸಿನೈ ಹೆಲ್ತ್ ಸಿಸ್ಟ್‌ಮ್ ಸಹಭಾಗಿತ್ವ ಒಪ್ಪಂದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ಯೋಗ,ಧ್ಯಾನ ಮತ್ತು ಆಯುರ್ವೇದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮುಂಜಾಗ್ರತಾ ಕ್ರಮವಾಗಿದ್ದು,ಇಡೀ ವಿಶ್ವವೇ ಇದನ್ನು ಒಪ್ಪಿಕೊಂಡಿದೆ.ಸುಶ್ರುತಾಚಾರ್ಯರು ಶಲ್ಯತಂತ್ರದ ಮೂಲಕ ಶಸಚಿಕಿತ್ಸೆ ಮಾಡುತ್ತಿದ್ದರು.ಆ ಪರಂಪರೆಯ ಮುಂದುವರೆದ ಭಾಗವಾಗಿ ಆಧುನಿಕ ಚಿಕಿತ್ಸಾ ವಿಧಾನದಲ್ಲೂ ಬಹುದೊಡ್ಡ ಸಾಧನೆ ಮಾಡಿದೆ.ಕೋವಿಡ್19ನ್ನು ಭಾರತವು ನಿರ್ವಹಣೆ ಮಾಡಿದ ವಿಧಾನ,ವ್ಯಾಕ್ಸಿನೇಷನ್ ಸಲತೆ ಹಾಗೂ100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಕ್ಸಿನ್ ಪೂರೈಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.
ಒಂದು ಭೂಮಿ,ಒಂದು ಕುಟುಂಬ,ಒಂದು ಹೆಲ್ತ್ ಕೇರ್ ಎಂಬ ಪರಿಕಲ್ಪನೆಯಂತೆ,ಪ್ರಧಾನಿ ಮೋದಿ ಆರಂಭಿಸಿರುವ ಆಯುಷ್ಮಾನ್ ಭಾರತ್ ಜಗತ್ತಿನ ಬಹುದೊಡ್ಡ ಆರೋಗ್ಯ ಯೋಜನೆಯಾಗಿದೆ.ಪ್ರಧಾನ ಮಂತ್ರಿ ಜನೌಷಧಿ ಕೇಂದ್ರಗಳ ಸ್ಥಾಪನೆ,ಸ್ವಚ್ಛ ಭಾರತ ಅಭಿಯಾನಗಳು ಆರೋಗ್ಯ ಕ್ಷೇತ್ರದ ಮೈಲುಗಲ್ಲುಗಳಾಗಿವೆ ಎಂದು ವಿವರಿಸಿದರು.
ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಯಾಗಿರುವ ಎಂ.ಎಸ್.ರಾಮಯ್ಯ ಹಾಸ್ಪಿಟಲ್ ಜಗತ್ತಿನ ಪ್ರತಿಷ್ಠಿತ ಮೌಂಟ್ ಸಿನೈ ಆಸ್ಪತ್ರೆಯೊಂದಿಗೆ ಮಾಡಿಕೊಂಡಿರುವ ಒಪ್ಪಂದವು ಎರಡು ದೇಶಗಳ ಮೆಡಿಕಲ್ ನಾಲೆಡ್ಜ್ ವಿನಿಮಯಕ್ಕೆ ಮತ್ತು ಸಂಶೋಧನೆಗೆ ಬಹಳ ಅನುಕೂಲವಾಗಿದೆ ಎಂದು ಪ್ರಲ್ಹಾದ್ ಜೋಶಿ ಇದೇ ವೇಳೆ ಹೇಳಿದರು.
ಸಮಾರಂಭದಲ್ಲಿ ಉಭಯ ಆಸ್ಪತ್ರೆಗಳ ಮುಖ್ಯಸ್ಥರು ಒಡಂಬಡಿಕೆಗೆ ಸಹಿ ಹಾಕಿದ ದಾಖಲೆಗಳನ್ನು ವಿನಿಮಯ ಮಾಡಿಕೊಂಡರು.ನಂತರ ಎರಡೂ ಆಸ್ಪತ್ರೆಗಳ ನಡುವಿನ ಸಹಭಾಗಿತ್ವದ ನೂತನ ಲೋಗೋ ಲಾಂಚ್ ಮಾಡಲಾಯಿತು.
ಸಮಾರಂಭದಲ್ಲಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್,ಗೋಕುಲ ಶಿಕ್ಷಣ ಸಂಸ್ಥೆಯ ಚೇರ್‌ಮನ್ ಎಂ.ಎಆರ್.ಜಯರಾಮ್,ಮೌಂಟ್ ಸಿನೈ ಗ್ರೂಪ್ ಮುಖ್ಯಸ್ಥರಾದ ಡಾ.ಝಾಬಿ ಡೊರೊಟೊವಿಕ್ಸ್,ಡಾ.ಡೇವಿಡ್ ಎಲ್.ರೀಚ್,ಗೋಕುಲ ಶಿಕ್ಷಣ ಸಂಸ್ಥೆಯ ಎಂ.ಆರ್.ಶ್ರೀನಿವಾಸ ಮೂರ್ತಿ,ಸಿ.ಎನ್.ನಾಗೇಂದ್ರ ಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.
ಚಿಕಿತ್ಸೆಯ ಗುಣಮಟ್ಟವನ್ನು ಉನ್ನತೀಕರಿಸುವುದು,ದಕ್ಷಿಣ ಭಾರತ ಮಾತ್ರವಲ್ಲದೆ,ಈಶಾನ್ಯ ಭಾರತ ಒಳಗೊಂಡ ದೇಶದ ಜನರಿಗೆ ಉತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ರತಿಷ್ಠಿತ ಮೌಂಟ್ ಸಿನೈ ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದೇವೆ.ಈ ಒಪ್ಪಂದದ ಲವಾಗಿ ಮುಂದಿನ10ವರ್ಷಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ,ಸಂಶೋಧನೆ ನಡೆಯುವ ನಿರೀಕ್ಷೆ ಇರಿಸಿಕೊಳ್ಳಲಾಗಿದೆ.
–ಎಂ.ಆರ್.ಜಯರಾಮ್,ಜಿಇಎಫ್ ಚೇರಮನ್
ಕೆಂಪೇಗೌಡರ ದೂರದೃಷ್ಟಿಗೆ ಅನುಗುಣವಾಗಿ ಬೆಳೆಯುತ್ತಿರುವ ಬೆಂಗಳೂರಿಗೆ ಆಸ್ಪತ್ರೆಯೊಂದಿಗಿನ ಒಪ್ಪಂದ ಪೂರಕವಾಗಿದ್ದು,ಇದರಿಂದ ಜನರಿಗೆ ಉತ್ತಮ ಪ್ರತಿಲ ದೊರೆಯಲಿದೆ.
–ಡಾ.ಝಾಬಿ ಡೊರೊಟೊವಿಕ್ಸ್,ಮೌಂಟ್ ಸಿನೈ ಅಧ್ಯಕ್ಷ
ಬೆಂಗಳೂರು ಮೆಡಿಕಲ್ ಟೆಕ್ನಾಲಜಿ ಹಬ್ ಎಂಬ ಖ್ಯಾತಿ ಹೊಂದಿದ್ದು,ಈ ಖ್ಯಾತಿಗೆ ಎಂ.ಎಸ್.ರಾಮಯ್ಯ ಮತ್ತು ಮೌಂಟಿ ಸಿನೈ ಆಸ್ಪತ್ರೆಗೆಳ ನಡುವಿನ ಒಪ್ಪಂದ ಮತ್ತಷ್ಟು ಪುಷ್ಟಿ ನೀಡಿದೆ.ಎರಡೂ ಆಸ್ಪತ್ರೆಗಳಿಗೆ ಹಾಗೂ ರಾಜ್ಯ ಮತ್ತು ರಾಷ್ಟ್ರದ ಜನತೆಗೆ ಇದರಿಂದ ಲಾಭವಾಗಲಿದೆ.
–ದಿನೇಶ ಗುಂಡೂರಾವ್,ಆರೋಗ್ಯ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
