ಬೆಂಗಳೂರು:‘ಡ್ರಗ್ಸ್​ ಮಾಫಿಯಾದಲ್ಲಿ ಬರೀ ಹೆಣ್ಮಕ್ಕಳು ಮಾತ್ರವೇ ಇರೋದಾ?’ ಎಂದು ಪ್ರಶ್ನಿಸಿರುವ ನಟಿ ಪಾರುಲ್​ ಯಾದವ್​, ‘ಪುರುಷ ಪ್ರಧಾನ ರಾಷ್ಟ್ರದಲ್ಲಿ ಇದೆಲ್ಲವೂ ಸಾರ್ಥಕವಾಯ್ತು; ಎಂದು ಕಿಡಿಕಾರಿದ್ದಾರೆ.
ಬಾಲಿವುಡ್​-ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಮಾಫಿಯಾ ಭಾರೀ ಸದ್ದು ಮಾಡುತ್ತಿದ್ದು, ಇದುವರೆಗೂ ನಟಿಯರ ಹೆಸರಷ್ಟೇ ಪ್ರಸ್ತಾಪವಾಗುತ್ತಿದೆ. ಈಗಾಗಲೇ ಡ್ರಗ್ಸ್​ ಕೇಸ್​ನಲ್ಲಿ ಸ್ಯಾಂಡಲ್​ವುಡ್​ನ ರಾಗಿಣಿ ದ್ವಿವೇದಿ, ಬಹುಭಾಷಾ ನಟಿ ಸಂಜನಾ ಗಲ್ರಾನಿ, ಬಾಲಿವುಡ್​ ನಟಿ ರಿಯಾ ಚಕ್ರವರ್ತಿಯನ್ನು ಬಂಧಿಸಲಾಗಿದೆ. ಈ ನಡುವೆ ಜಾಲತಾಣದಲ್ಲಿ ಪುರುಷ ವರ್ಗದ ವಿರುದ್ಧ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾ ರಂಗದಲ್ಲಿ ಕೇವಲ ನಟಿಯರು ಮಾತ್ರ ತಪ್ಪು ಮಾಡಿಲ್ಲ. ಅವರೊಂದಿಗೆ ನಟರೂ ಕೈಜೋಡಿಸಿದ್ದಾರೆ. ಅವರ ಹೆಸರು ಗೊತ್ತಿಲ್ಲವೇ? ಕೇವಲ ನಟಿಯರನ್ನೇ ಟಾರ್ಗೆಟ್​ ಮಾಡುತ್ತಿದ್ದೀರಾ ಎಂಬ ಪ್ರಶ್ನೆಗಳು ವೈರಲ್​ ಆಗುತ್ತಿವೆ. ಇದಕ್ಕೆ ನಟಿ ಪಾರುಲ್​ ಕೂಡ ಧ್ವನಿಗೂಡಿಸಿದ್ದು, ‘ಪುರುಷ ಪ್ರಧಾನ ಸಮಾಜ ಅನ್ನೋದು ಮತ್ತೊಮ್ಮೆ ಸಾಬೀತು ಆಯ್ತು’ ಎಂದು ಟ್ವೀಟ್​ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿರಿನಟಿ ರಾಗಿಣಿ ಬಗ್ಗೆ ಸಿಎಂ ಬಿಎಸ್​ವೈ ಪುತ್ರ ವಿಜಯೇಂದ್ರ ಹೇಳಿದ್ದೇನು?
‘ಡ್ರಗ್ಸ್​ ಕೇಸ್​ನಲ್ಲಿ ನಟ-ನಟಿಯರು ಮಾತ್ರ ಇರ್ತಾರಾ? ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಇಲ್ಲವೇ?’ ಎಂದು ನಟಿ ಪಾರುಲ್​ ಯಾದವ್​ ಸರಣಿ ಟ್ವೀಟ್​ ಮಾಡಿದ್ದಾರೆ.
‘ನಾವು ಲಿಂಗ ಸಮಾನತೆಯ ಹೋರಾಟವನ್ನು ಗೆದ್ದಿದ್ದೇವೆ ಎಂದು ಸಂಭ್ರಮಿಸಬೇಕಾ?’ ಎಂದು ಕೇಳಿರುವ ಪಾರುಲ್​, ಕೇವಲ ಮೂವರು ನಟಿಯರು ಮಾತ್ರವೇ ಡ್ರಗ್​ ಡೀಲ್​ನಲ್ಲಿ ಇರೋದಾ’ ಎಂದು ಪ್ರಶ್ನಿಸಿದ್ದಾರೆ.
no one else – no corporate execs, business people, sportspeople or even male actors is doing/ dealing drugs… should we celebrate winning the gender equality fight or should we cry at how easy it is to prey on some of us..@narcoticsbureau#Drugsmafia#NCB#SandalwoodDrugMafia
— Parul Yadav (@TheParulYadav)September 8, 2020

https://www.vijayavani.net/drug-case-sanjanagalrani-arrest/
https://www.vijayavani.net/actress-sanjana-galrani-arrested-rahul-birthday-party-video-viral/
ರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eighteen =
Remember me
