|ಗೋಪಾಲಕೃಷ್ಣ ಪಾದೂರು/ಭರತ್​ರಾಜ್ ಸೊರಕೆಉಡುಪಿ
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಮಂಗಳವಾರ ಕೃಷ್ಣಾಪುರ ಮಠದ ಪರ್ಯಾಯ ಮಂಗಳವಾರ ಆರಂಭಗೊಂಡಿದೆ. ಮುಂಜಾನೆ 5.55ಕ್ಕೆ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಚತುರ್ಥ ಬಾರಿಗೆ ಸರ್ವಜ್ಞ ಪೀಠಾರೋಹಣ ಮಾಡಿದರು. ನಿಕಟಪೂರ್ವ ಪರ್ಯಾಯ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಮಧ್ವಾಚಾರ್ಯರ ಸನ್ನಿಧಿಯಲ್ಲಿ ಅಕ್ಷಯಪಾತ್ರೆ, ಬೆಳ್ಳಿಸಟ್ಟುಗ ಹಸ್ತಾಂತರಿಸಿದರು.
ಸಂಪ್ರದಾಯದಂತೆ ಕಾಪು ಬಳಿಯ ದಂಡತೀರ್ಥದಲ್ಲಿ ಪವಿತ್ರ ಸ್ನಾನ ನೆರವೇರಿಸಿದ ಕೃಷ್ಣಾಪುರ ಶ್ರೀಗಳು ಮುಂಜಾನೆ 3 ಗಂಟೆ ಸುಮಾರಿಗೆ ಉಡುಪಿ ನಗರದ ಜೋಡುಕಟ್ಟೆ ತಲುಪಿದರು. ಅಲ್ಲಿಂದ ಪಟ್ಟದ ದೇವರ ಜತೆಗೆ ಮೇನೆಯಲ್ಲಿ ಕುಳಿತು ಸರಳ, ಸಾಂಪ್ರದಾಯಿಕ ಮೆರವಣಿಗೆಯಲ್ಲಿ ರಥಬೀದಿಗೆ ಆಗಮಿಸಿ ಕನಕನ ಕಿಂಡಿಯಲ್ಲಿ ಕೃಷ್ಣ ದರ್ಶನ ಪಡೆದರು. ವಿಪ್ರರಿಗೆ ನವಗ್ರಹ ದಾನ, ಫಲದಾನ ನೀಡಲಾಯಿತು. ಚಂದ್ರಮೌಳೀಶ್ವರ ಮತ್ತು ಅನಂತೇಶ್ವರ ದೇವರ ದರ್ಶನ ಪಡೆದು ಅನಂತೇಶ್ವರದಲ್ಲಿ ಮಧ್ವಾಚಾರ್ಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕೃಷ್ಣ ಮಠದ ಮುಂಭಾಗದಲ್ಲಿ ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಕೃಷ್ಣಾಪುರ ಶ್ರೀಗಳನ್ನು ಸ್ವಾಗತಿಸಿದರು. ನವಗ್ರಹ ಕಿಂಡಿಯಲ್ಲಿ ಕೃಷ್ಣ ದೇವರ ದರ್ಶನ ಮಾಡಿಸಿದರು. ಚಂದ್ರಶಾಲೆಯಲ್ಲಿ ಕೃಷ್ಣಾಪುರ ಮಠದ ಪಟ್ಟದ ದೇವರಿಗೆ ಮಂಗಳಾರತಿ ಬೆಳಗಿ, ಪರ್ಯಾಯ ಅದಮಾರು ಮಠದ ವತಿಯಿಂದ ಮಾಲಿಕೆ ಮಂಗಳಾರತಿ ನಡೆಯಿತು. ಪರ್ಯಾಯ ಕೃಷ್ಣಾಪುರ ಶ್ರೀಗಳಿಂದ ಬಡಗು ಮಾಳಿಗೆಯ ಅರಳು ಗದ್ದುಗೆಯಲ್ಲಿ ಗಂಧಾದ್ಯುಪಚಾರ, ಅಷ್ಟ ಮಠಾಧೀಶರಿಂದ ಪಟ್ಟಕಾಣಿಕೆ ಹಾಗೂ ಮಾಲಿಕೆ ಮಂಗಳಾರತಿ ನಡೆಯಿತು. 6.45ಕ್ಕೆ ರಾಜಾಂಗಣದಲ್ಲಿ ಕೃಷ್ಣಾಪುರ ಶ್ರೀಗಳು ಪರ್ಯಾಯ ದರ್ಬಾರ್ ನಡೆಸಿದರು.
ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಕಾಣಿಯೂರು ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಸೋದೆ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ, ಶಿರೂರು ಶ್ರೀ ವೇದವರ್ಧನ ತೀರ್ಥ ಸ್ವಾಮೀಜಿ ಭಾಗವಹಿಸಿದ್ದರು.
ಪರ್ಯಾಯ ಪದ್ಧತಿ ಬದುಕಿಗೂ ಪಾಠವಾಗಿದೆ. 2 ವರ್ಷಗಳ ಭಗವಂತನ ಸೇವೆಗೆ ಅವಕಾಶ. ನಂತರ ಮತ್ತೊಬ್ಬರು ಬರುತ್ತಾರೆ. ಅದೇ ರೀತಿ ಜೀವನದಲ್ಲಿಯೂ ಈ ದೇಹವಿರುವಾಗ ದೇವರ ಆರಾಧನೆ ಮಾಡಬೇಕು. ನಂತರ ಬಿಟ್ಟು ಹೋಗಬೇಕು. ಮತ್ತೊಂದು ಶರೀರ ಪ್ರಾಪ್ತಿ ಯಾದಾಗ ಮತ್ತೆ ಸಾಧನೆ ಮುಂದುವರಿಸಬೇಕು. ಯಾವುದೇ ವಿಷಯ ಗಳಲ್ಲಿ ವ್ಯಾಮೋಹ ಹೊಂದಿರಬಾರದು ಎಂಬುದು ಸಾಮಾನ್ಯ ಚಿಂತನೆ.
|ಅದಮಾರು ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿನಿರ್ಗಮನ ಪರ್ಯಾಯ ಪೀಠಾಧಿಪತಿ
ಅನೇಕ ಮಂದಿ ದೈತ್ಯರನ್ನು ಸಂಹರಿಸಿದರೂ ಯಾವುದೇ ರಾಜ್ಯದ ಮೇಲೆ ಕೃಷ್ಣನಿಗೆ ವ್ಯಾಮೋಹವಿರಲಿಲ್ಲ. ಪ್ರತಿಕಾರ್ಯದಲ್ಲೂ ತ್ಯಾಗದ ಗುಣ ಕಾಣಬಹುದು. ಅದೇ ಗುಣ ಅಷ್ಟಮಠಾಧೀಶರಲ್ಲಿಯೂ ಸಂಕ್ರಾಂತವಾಗಿದೆ. ಸಮಾಜದಲ್ಲಿ ಸಜ್ಜನರಿಗೆ ಎದುರಾಗುವ ಅನೇಕ ಅಡ್ಡಿ ಆತಂಕ ದೂರಗೊಳಿಸುವ ನಿಟ್ಟಿನಲ್ಲಿ ಕೃಷ್ಣನ ಉಪಾಸನೆ ಅತಿ ಅಗತ್ಯ.
|ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಸರಳ ಪರ್ಯಾಯ:ಕೋವಿಡ್ ಹಿನ್ನೆಲೆಯಲ್ಲಿ ಪರ್ಯಾಯ ಉತ್ಸವ ಸರಳವಾಗಿ ಆಚರಿಸಲು ಪರ್ಯಾಯೋತ್ಸವ ಸಮಿತಿ ಹಾಗೂ ಉಡುಪಿ ಜಿಲ್ಲಾಡಳಿತ ನಿರ್ಧರಿಸಿದ್ದರಿಂದ ಬೆಳಗ್ಗೆ ಮೆರವಣಿಗೆ ಹಾಗೂ ರಾಜಾಂಗಣ ದರ್ಬಾರ್​ಗೆ ಹೆಚ್ಚಿನ ಜನರು ಬಂದಿರಲಿಲ್ಲ.
30 ಸಾವಿರ ಭಕ್ತರಿಗೆ ಅನ್ನಪ್ರಸಾದ:ಬೆಳಗ್ಗೆ 11 ಗಂಟೆಯಿಂದಲೇ ಕೃಷ್ಣ ಮಠದ ಸುತ್ತಮುತ್ತಲಿನ ಪ್ರದೇಶದಲ್ಲಿ ಅನ್ನಪ್ರಸಾದ ವಿತರಣೆ ಆರಂಭಗೊಂಡಿದ್ದು, 30 ಸಾವಿರಕ್ಕೂ ಅಧಿಕ ಮಂದಿ ಹಾಲು ಪಾಯಸ ಸವಿದರು. ಲಾಡು, ಹಯಗ್ರೀವ ಮಡ್ಡಿ ಸಿಹಿ ಭಕ್ಷ್ಯನ್ನು ಅನ್ನಸಂತರ್ಪಣೆಯ ಜತೆಗೆ ನೀಡಲಾಯಿತು. ಜತೆಗೆ ಎರಡು ಬಗೆ ಪಾಯಸ, ಪರ್ಯಾಯದ ಪ್ರಮುಖ ಭಾಗವಾಗಿರುವ ಮಟ್ಟುಗುಳ್ಳದ ಹುಳಿ ವಿಶೇಷವಾಗಿ ತಯಾರಿಸಿ ಭಕ್ತರಿಗೆ ಬಡಿಸಲಾಗಿದೆ.
ಪ್ರಸಾದ ಸಮರ್ಪಣೆ:ದರ್ಬಾರ್​ನಲ್ಲಿ ಪರ್ಯಾಯ ಶ್ರೀಗಳಿಗೆ ವಿವಿಧ ಪುಣ್ಯಕ್ಷೇತ್ರಗಳ ಪ್ರಸಾದ ಸಮರ್ಪಿಸ ಲಾಯಿತು. ತಿರುಮಲ ತಿರುಪತಿ ದೇವಸ್ಥಾನ, ಮಂತ್ರಾಲಯ ರಾಘವೇಂದ್ರ ಮಠ, ಧರ್ಮಸ್ಥಳ ಕ್ಷೇತ್ರ, ಕುಂಭಾಸಿ ದೇವಸ್ಥಾನ, ಮಾಳಖೇಡ ವೃಂದಾವನ ಸನ್ನಿಧಿಯಿಂದ ಆಗಮಿಸಿದ ಪದಾಧಿಕಾರಿಗಳು ಪ್ರಸಾದ ಅರ್ಪಿಸಿದರು.
ಕೃಷ್ಣನಿಗೆ ನಿತ್ಯ ಸಹಸ್ರ ತುಳಸಿ ಅರ್ಚನೆ:ಪರ್ಯಾಯ ಅವಧಿಯಲ್ಲಿ ಲೋಕ ಕಲ್ಯಾಣಾರ್ಥವಾಗಿ ಕೃಷ್ಣನಿಗೆ ನಿತ್ಯ ಸಹಸ್ರ ತುಳಸಿ ಅರ್ಚನೆ ಹಾಗೂ ಹಗಲು ಭಜನೆ ನಡೆಯಲಿದೆ. ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಎರಡೂ ಯೋಜನೆಗಳನ್ನು ಮುಂದುವರಿಸಲಾಗುವುದು ಎಂದು ಪರ್ಯಾಯ ದರ್ಬಾರ್ ಸಭೆಯಲ್ಲಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಪ್ರಕಟಿಸಿದರು.
ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!

ಅಮ್ಮ ಕೋವಿಡ್​​ನಿಂದ ಮೃತಪಟ್ಟರೂ ನೋಡಲು ಬರದ ಮಗಳು-ಅಳಿಯ; ಕೊನೆಗೆ ಅಂತ್ಯಸಂಸ್ಕಾರದ್ದೇ ದೊಡ್ಡ ಕಥೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 11 =
Remember me
