ಮೈಸೂರು:ಗುಂಬಜ್ ಮಾದರಿ ಬಸ್ ಶೆಲ್ಟರ್ ನಿರ್ಮಾಣ ವಿವಾದಕ್ಕೆ ಅಂತ್ಯಹಾಡಲು ಮುಂದಾದ ಶಾಸಕ ರಾಮ್‌ದಾಸ್, ರಾತ್ರೋರಾತ್ರಿ ಎರಡು ಗೋಪುರ ತೆರವು ಮಾಡಿಸಿದ್ದಾರೆ.
ನಗರದ ನಂಜನಗೂಡು ರಸ್ತೆಯ ಜೆಎಸ್​ಎಸ್​ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಜಂಕ್ಷನ್​ ಬಳಿ ಮತ್ತು ಜೆ.ಪಿ.ನಗರ ಸೇರಿದಂತೆ ಕೃಷ್ಣರಾಜ ಕ್ಷೇತ್ರದಲ್ಲಿ ಗುಂಬಜ್​ ಮಾದರಿಯಲ್ಲಿ ಮೂರು ತಂಗುದಾಣಗಳನ್ನು ನಿರ್ಮಿಸಲಾಗಿತ್ತು. ಬಸ್​ ನಿಲ್ದಾಣಗಳ ಮೇಲಿರುವ ಗುಂಬಜ್​ ಮಾದರಿಯನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ನಾನೇ ಖುದ್ದು ಧ್ವಂಸ ಮಾಡುವೆ ಎಂದು ಸಂಸದ ಪ್ರತಾಪ ಸಿಂಹ ಎಚ್ಚರಿಕೆ ಕೊಟ್ಟಿದ್ದರು. ಇದು ಭಾರೀ ವಿವಾದ ಸೃಷ್ಟಿಸಿತ್ತು.
ಬಸ್ ಶೆಲ್ಟರ್​ ಮೇಲೆ ಮೂರು ಗೋಪುರಗಳಿದ್ದವು. ಒಂದು ಗೋಪುರ ಉಳಿಸಿಕೊಂಡು, ಮತ್ತೆರಡು ಗೋಪುರಗಳನ್ನು ರಾತ್ರೋರಾತ್ರಿ ಅಧಿಕಾರಿಗಳು ತೆರವು ಮಾಡಿದ್ದಾರೆ. ಮೈಸೂರು ಅರಮನೆ ಪರಂಪರೆಗಾಗಿ ಬಸ್ ಶೆಲ್ಟರ್ ಮಾಡಲಾಗುತ್ತಿತ್ತು. ಶಾಸಕರ ಅನುಧಾನದಲ್ಲಿ 12 ಬಸ್ ಶೆಲ್ಟರ್ ನಿರ್ಮಿಸಲಾಗುತ್ತಿತ್ತು. ಧರ್ಮದ ಹೆಸರಿನಲ್ಲಿ ವಿವಾದ ಸೃಷ್ಟಿಸಲಾಗಿತ್ತು. ಇದು ಮುಂದೆ ವಿವಾದಿತ ಜಾಗ ಆಗಬಾರದು. ಇದಕ್ಕಾಗಿ ಮಧ್ಯದ ಡೂಮ್ ಉಳಿಸಿಕೊಳ್ಳಲು ಒಪ್ಪಿಗೆ ಪಡೆಯಲಾಗಿದೆ. ಸಾರ್ವಜನಿಕರು ನನ್ನ ಅಭಿವೃದ್ಧಿ ಮಂತ್ರವನ್ನು ಅನ್ಯತಾ ಭಾವಿಸಬಾರದು ಎಂದು ಶಾಸಕ ರಾಮ್‌ದಾಸ್ ಸ್ಪಷ್ಟನೆ ನೀಡಿದ್ದಾರೆ.
ತಡರಾತ್ರಿ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ 5 ಕೆಜಿ ಚಿನ್ನಾಭರಣ ದರೋಡೆ: ಸಿನಿಮೀಯ ರೀತಿಯಲ್ಲಿ ನುಗ್ಗಿದ ದರೋಡೆಕೋರರು

ಡೀಸೆಲ್​ ಖಾಲಿಯಾಗಿ ರಸ್ತೆಯಲ್ಲೇ ನಿಂತ ಆಂಬುಲೆನ್ಸ್​ ಅನ್ನು ತಳ್ಳಿಕೊಂಡೇ ಹೋದ ಮಗಳು-ಅಳಿಯ! ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗದೆ ಅಪ್ಪ ಸಾವು

ಹೊನ್ನಾಳಿಯಲ್ಲಿ ಭೀಕರ ಅಪಘಾತ, ASI ಪುತ್ರ ಸಾವು: ರೇಣುಕಾಚಾರ್ಯರ ಸಹೋದರನ‌ ಪುತ್ರನ ಪ್ರಕರಣ ನೆನಪಿಸುತ್ತಿದೆ ಈ ದುರ್ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 12 =
Remember me
