ಮೈಸೂರು:ಗುಂಬಜ್ ಒಡೆದು ಹಾಕ್ತೀನಿ ಅನ್ನೋಕೆ ಪ್ರತಾಪ್​ ಸಿಂಹ ಯಾವನ್ ರೀ? ಸಂಸದನಾಗಿ ಕಾಮನ್​ಸೆನ್ಸ್ ಬೇಡ್ವಾ? ಅವರು ಮನೆಯ ಹಣ ಹಾಕಿ ಪ್ರಯಾಣಿಕರ ತಂಗುದಾಣ ಕಟ್ಟಿಸಿದ್ದಾರಾ? ಅಧಿಕಾರಿಗಳು ವಿನ್ಯಾಸ ಕೊಡುವಾಗ ಸಂಸದ ಏನು ಮಾಡ್ತಿದ್ರು? ಈಗ ತಾನೇ ಒಡೆದು ಹಾಕ್ತೀನಿ ಅಂದ್ರೆ ಏನ್​ ಅರ್ಥ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಮೈಸೂರು ನಗರದಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣದ ಛಾವಣಿ ಮೇಲೆ ಗುಂಬಜ್​ ಮಾದರಿ ನಿರ್ಮಿಸಲಾಗಿದೆ. ಇದನ್ನು ತೆರವು ಮಾಡಬೇಕು. ಇಲ್ಲವಾದರೆ ಜೆಸಿಬಿ ತೆಗೆದುಕೊಂಡು ಹೋಗಿ ನಾನೇ ಒಡೆದು ಹಾಕುವೆ ಎಂದು ಸಂಸದ ಪ್ರತಾಪ್​ ಸಿಂಹ ಎಚ್ಚರಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, 600 ವರ್ಷಗಳ ಹಿಂದೆಯೇ ಮೊಘಲರು ನಮ್ಮ ದೇಶವನ್ನ ಆಳುವಾಗ ಇವರೆಲ್ಲ ಏನು ಮಾಡ್ತಿದ್ರು? ಅಶಾಂತಿ ನಿರ್ಮಾಣ ಮಾಡಲು ಪ್ರತಾಪ್​ ಸಿಂಹ ಈ ರೀತಿ ಮಾಡ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಚುನಾವಣೆ ಸಂದರ್ಭದಲ್ಲಿ ಮತ ಕ್ರೂಡೀಕರಣಕ್ಕೆ ಈ ರೀತಿ ಮಾಡುತ್ತಿದ್ದಾರೆ. ಹೀಗೇ ಇರಬೇಕು ಎಂಬ ರೂಲ್ಸ್ ಎಲ್ಲಿದೆ? ಸರ್ಕಾರಿ ಅಧಿಕಾರಿಗಳು ಮಾಡಿರುವ ಪ್ಲ್ಯಾನ್​ ಪ್ರಕಾರ ಪ್ರಯಾಣಿಕರ ತಂಗುದಾಣ ನಿರ್ಮಾಣ ಆಗಿದೆ. ಗುಂಬಜ್ ರೀತಿ ಇರುವುದನೆಲ್ಲಾ ಒಡೆದು ಬಿಡ್ತೀರಾ? ಬಿಜೆಪಿಯ ಈ ತಂತ್ರ ವರ್ಕ್ ಆಗಲ್ಲ. ಕರ್ನಾಟಕ ಮತ್ತು ಈ ದೇಶದ ಜನರು ಜ್ಯಾತ್ಯತೀತರು. ಜಾತಿ-ಧರ್ಮದ ವಿಚಾರವನ್ನ ಜನರು ಒಪ್ಪುವುದಿಲ್ಲ ಎಂದರು.
ಪ್ರಯಾಣಿಕರ ತಂಗುದಾಣದಲ್ಲಿ ‘ಗುಂಬಜ್’​ ತೆರವು ಮಾಡದಿದ್ರೆ ನಾನೇ ಒಡೆದು ಹಾಕ್ತೀನಿ: ಮತ್ತೊಮ್ಮೆ ಎಚ್ಚರಿಕೆ ಕೊಟ್ಟ ಪ್ರತಾಪ್​ ಸಿಂಹ

ಜೆಡಿಎಸ್​ಗೆ ಕುಣಿಗಲ್​ ಮಾಜಿ ಶಾಸಕ ಎಚ್.ನಿಂಗಪ್ಪ ರಾಜೀನಾಮೆ! ಕಾಂಗ್ರೆಸ್​ನಿಂದ ಸ್ಪರ್ಧೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
